300 ಚಿತ್ರಗಳಲ್ಲಿ ನಟಿಸಿದ್ದ ಮಾಧವಿ ಈಗ ಎಲ್ಲಿದ್ದಾರೆ ಗೊತ್ತಾ?

ಒಂದು ಕಾಲದ ಕನ್ನಡದ ಮೇರುನಟಿಯರಲ್ಲಿ ಮಾಧವಿ ಕೂಡ ಒಬ್ಬರು. ಡಾ.ರಾಜ್‌ಕುಮಾರ್, ಶಿವಾಜಿ ಗಣೇಶನ್, ಎನ್‌ಟಿಆರ್, ಅಮಿತಾಭ್ ಬಚ್ಚನ್ ಮುಂತಾದ ಮೇರು ಸಿನಿ ಕಲಾವಿದರ ಜೊತೆ ಮಾಧವಿ ಅಭಿನಯಿಸಿದ್ದಾರೆ. 1976ರಿಂದ 1996ರ ಅವಧಿಯ ಬಹು ಬೇಡಿಕೆಯ ನಟಿಯಾಗಿದ್ದರು.

17 ವರ್ಷಗಳ ಕಾಲ ಲೀಡಿಂಗ್ ನಟಿಯಾಗಿ ಸಿನಿಮಾ ರಂಗದಲ್ಲಿ ಸುಮಾರು 300 ಸಿನಿಮಾಗಳಲ್ಲಿ ನಟಿಸಿದ್ದಾರೆ ಮಾಧವಿ. ದಾಸರಿ ನಾರಾಯಣ ರಾವ್ ಅವರ ‘ತೂರ್ಪು ಪಡಮರ’ ಎಂಬ ತೆಲುಗು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು. ತದನಂತರದಲ್ಲಿ ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ, ಓರಿಯಾ, ಬೆಂಗಾಳಿ ಭಾಷೆಗಳಲ್ಲಿ ನಟಿಸಿದ್ದಾರೆ.

ದೊಡ್ಡ ದೊಡ್ಡ ನಟ-ನಿರ್ದೇಶಕರ ಜೊತೆ ಕೆಲಸ ಮಾಡಿದ ಕೀರ್ತಿ ಮಾಧವಿಗೆ ಸಲ್ಲುತ್ತದೆ. ತುಂಬಾ ವಿಭಿನ್ನ ಪಾತ್ರಗಳ ಮೂಲಕ ಮಾಧವಿ ಹೆಸರಾಗಿದ್ದರು. ಆ ಸಮಯ ಅವರ ಸುವರ್ಣಯುಗವಾಗಿತ್ತು. ‘ಖೈದಿ, ಇಂಟ್ಲೊ ರಾಮಯ್ಯ ವೀದಿಲೊ ಕೃಷ್ಣಯ್ಯ, ರಾಜ ಪರ್ವೈ, ತಂಬಿಕ್ಕಿ ಇಂದ ಊರು, ಹಾಲು ಜೇನು, ಅಗ್ನಿಪಥ್’ ಸಿನಿಮಾಗಳು ಮಾಧವಿಯ ಫೇವರಿಟ್ ಸಿನಿಮಾಗಳಂತೆ.

ಬಳಿಕ ಮಾಧವಿಯವರು ಅರೇಂಜ್ ಮ್ಯಾರೇಜ್ಆದರು. ಮಾಧವಿ ಹಿತೈಷಿಗಳಾದ ಸ್ವಾಮಿರಾಮ ಅವರ ಅಣತಿಯಂತೆ ಅಮೆರಿಕದಲ್ಲಿರುವ ರಾಲ್ಪ್ ಶರ್ಮಾ ಜೊತೆ ಫೆಬ್ರವರಿ 14, 1996ರಂದು ಮಾಧವಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅವರ ಪತಿ ಜರ್ಮನಿಯವರಾಗಿದ್ದು, ತುಂಬಾ ಮೃದು ಸ್ವಭಾವದ, ನಂಬಿಕಾರ್ಹ, ಉದಾರಿ ಅಷ್ಟೇ ಅಲ್ಲದೆ ಮಾಧವಿಯನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಾರಂತೆ.. ಈ ದಂಪತಿ ಈಗ ವಿದೇಶದಲ್ಲಿ ನೆಲೆಸಿದ್ದಾರೆ.

ಮಾಧವಿಗೆ ಟಿಫನಿ, ಪ್ರಿಸಿಲ್ಲ, ಎವಿಲಿನ್ ಎಂಬ ಮೂವರು ಹೆಣ್ಣುಮಕ್ಕಳಿದ್ದಾರೆ. ಮೂರು ಹೆಣ್ಣುಮಕ್ಕಳು, ಪತಿಯ ಜೊತೆಗೆ ವಿದೇಶದಲ್ಲಿ ತುಂಬಾ ಚೆನ್ನಾಗಿ ಜೀವನ ಸಾಗಿಸುತ್ತಿದ್ದಾರೆ.