ಪತ್ನಿಯಿಂದ ಡಿವೋರ್ಸ್ ನೋಟೀಸ್.. 34 ವರ್ಷಕ್ಕೆ ಜೀವ ಕಳೆದುಕೊಂಡ ಕಿರುತೆರೆಯ ಖ್ಯಾತ ನಟ.. ಬೆಚ್ಚಿಬಿದ್ದ ಕಿರುತೆರೆ ಮಂದಿ..

ಜನಸಾಮಾನ್ಯರ ಸಾಮಾನ್ಯ ಜೀವನದಂತೆಯೇ ಸೆಲಿಬ್ರೆಟಿಗಖ ಜೀವನವೂ.. ತೆರೆ ಮೇಲೆ ನಾನಾ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಸಹ ನಿಜ ಜೀವನದಲ್ಲಿ ತಮ್ಮದೇ ನಿಜವಾದ ಪಾತ್ರ ನಿಭಾಯಿಸಲೇ ಬೇಕು.. ಅವರ ಜೀವನದಲ್ಲಿಯೂ ಕುಟುಂಬದಲ್ಲಿ ಮನಸ್ತಾಪಗಳು ನೋವುಗಳು ಕಷ್ಟಗಳು ಹೀಗೆ ಎಲ್ಲವೂ ಇದ್ದೇ ಇರುತ್ತದೆ.. ಅದರಲ್ಲಿಯೂ ದಾಂಪತ್ಯ ಜೀವನ ಎಂದ ಮೇಲೆ ಭಿನ್ನಾಭಿಪ್ರಾಯಗಳು ಸಾಮಾನ್ಯ‌‌.. ಅದರಲ್ಲೂ ಸೆಲಿಬ್ರೆಟಿಗಳ ದಾಂಪತ್ಯ ಜೀವನ ಸರಿ ಹೋಗದಿದ್ದರೆ ಡಿವೋರ್ಸ್ ಕೊಟ್ಟು ಮತ್ತೊಬ್ಬರನ್ನು ಮದುವೆಯಾಗೋದು ಹೊಸ ವಿಚಾರವೇನೂ ಅಲ್ಲ.. ಆದರೆ ಕಿರುತೆರೆಯ ಖ್ಯಾತ ನಟನ ಜೀವನದಲ್ಲಿ ಕತೆಯೇ ಬದಲಾಗಿ ಹೋಯ್ತು.. ಗಂಡ ಹೆಂಡತಿ ನಡುವೆ ಮನಸ್ತಾಪ ಉಂಟಾಗಿತ್ತು.. ಆದರೆ ಆ ಮನಸ್ತಾಪ ಮತ್ತೆ ಸರಿ ಹೋಗುತ್ತದೆ ಮತ್ತೆ ಮೊದಲಿನ ಜೀವನದಂತಾಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ನಟನಿಗೆ ಪತ್ನಿಯಿಂದ ಡಿವೋರ್ಸ್ ನೋಟೀಸ್ ಬಂದಿತು.. ಅದಾಗಲೇ ಕುಗ್ಗಿ ಹೋಗಿದ್ದ ನಟ ತನ್ನ ಬದುಕಿನ ಪಯಣವನ್ನೇ ಮುಗಿಸುವ ನಿರ್ಧಾರ ಮಾಡಿಬಿಟ್ಟಿದ್ದು ನಿಜಕ್ಕೂ ಮನಕಲಕುವಂತಿದೆ..

ಹೌದು ಈತ ಚಿಕ್ಕ ವಯಸ್ಸಿಗೆ ತೆರೆಯ ಮೇಲೆ ಕಾಣಿಸಿಕೊಂಡು ಯಶಸ್ಸು ಪಡೆದ ನಟ.. ನೂರಕ್ಕೂ ಹೆಚ್ಚು ಧಾರಾವಾಹಿಗಳು.. ಹದಿನೈದು ಸಿನಿಮಾಗಳು ಹೀಗೆ ಕೇವಲ ಮೂವತ್ತೈದು ವರ್ಷ ವಯಸ್ಸಿಗೆ ಕಿರುತೆರೆ ಬೆಳ್ಳಿತೆರೆ ಎಲ್ಲಾ ಕಡೆಯೂ ಮಿಂಚಿ ಹೆಸರು ಮಾಡಿದ ನಟ.. ಆದರೆ ಈತನ ದಾಂಪತ್ಯ ಜೀವನ ಮಾತ್ರ ಬೇರೆಯದ್ದೇ ರೀತಿಯಾಯಿತು.. ಇಬ್ಬರ ನಡುವೆ ಸಾಕಷ್ಟು ವಿಚಾರಗಳಿಗೆ ಮನಸ್ತಾಪಗಳಿತ್ತು.. ಇದರಿಂದ ನಟನೂ ಕೂಡ ಮಂಕಾಗಿ ಹೋಗಿದ್ದು ಸಾಕಷ್ಟು ಬಾರಿ ಬಸ್ ಸ್ಟ್ಯಾಂಡ್ ನಲ್ಲಿಯೇ ಮಲಗಿದ್ದೂ ಉಂಟು.. ಇತ್ತ ಈತನ ಸಹವಾಸ ಸಾಕೆಂದು ಪತ್ನಿ ಡಿವೋರ್ಸ್ ನೋಟೀಸ್ ಕಳುಹಿಸಿದ್ದೂ ಆಯ್ತು.. ಇದರಿಂದ ಮನನೊಂದ ನಟ ತನ್ನ ಬದುಕು ತನ್ನ ಹೆತ್ತವರ ಬದುಕ ಬಗ್ಗೆ ಆಲೋಚಿಸದೇ ಜೀವವನ್ನೇ ಕಳೆದುಕೊಂಡು ಬಿಟ್ಟ..

ಹೌದು ಈತ ಮತ್ಯಾರೂ ಅಲ್ಲ ತಮಿಳು ಕಿರುತೆರೆಯ ಖ್ಯಾತ ನಟ ಲೋಕೇಶ್ ರಾಜೇಂದ್ರನ್.. ತನ್ನ ಚಿಕ್ಕ ವಯಸ್ಸಿಗೆ ಕಲಾವಿದನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಲೋಕೇಶ್ ರಾಜೇಂದ್ರನ್ ಇದುವರೆಗೂ ನೂರಕ್ಕೂ ಹೆಚ್ಚು ಧಾರಾವಾಹಿಗಳು ಹದಿನೈದು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.. ಅವರಿಗೆ ಕೇವಲ ಮೂವತ್ತ ನಾಲ್ಕು ವರ್ಷ ವಯಸ್ಸಾಗಿತ್ತು ಅಷ್ಟೇ.. ಆದರೆ ಇಷ್ಟು ಬೇಗ ತನ್ನ ಬದುಕಿನ ಪಯಣವನ್ನು ಮುಗಿಸಿ ಹೊಂಟು ಬಿಟ್ಟರು.. ಹೌದು ಪತ್ನಿಯ ಡಿವೋರ್ಸ್ ನೋಟೀಸ್ ನೋಡಿದ ನಂತರ ಇದೇ ಅಕ್ಟೋಬರ್ ನಾಲ್ಕು ಮಂಗಳವಾರ ಸಂಜೆ ಜೀವ ಕಳೆದುಕೊಳ್ಳುವ ದುಡುಕಿನ ನಿರ್ಧಾರ ಮಾಡಿ ಕೊನೆಯುಸಿರೆಳೆದುಬಿಟ್ಟರು..

ಸಾಮಾನ್ಯರ ಜೀವನದಂತೆಯೇ ಲೋಕೇಶ್ ರಾಜೇಂದ್ರನ್ ಅವರ ಜೀವನದಲ್ಲಿಯೂ ಸಹ ಪತ್ನಿಯ ಜೊತೆ ಕೆಲವೊಂದು ಮನಸ್ತಾಪಗಳಾಗಿತ್ತು.. ಪತ್ನಿ‌ ಲೋಕೇಶ್ ರಾಜೇಂದ್ರನ್ ಅವರನ್ನು ಬಿಟ್ಟು ಬೇರೆ ಇದ್ದರು.. ಇಬ್ಬರ ನಡುವಿನ ವೈಮನಸನ್ನು ಸರಿಪಡಿಸುವ ಪ್ರಯತ್ನ ಲೋಕೇಶ್ ಅವರಿಂದಾಗಲಿಲ್ಲ.. ಅತ್ತ ಪತ್ನಿ ಲೋಕೇಶ್ ಅವರಿಗೆ ಡಿವೋರ್ಸ್ ನೋಟೀಸ್ ಕಳುಹಿಸಿದರು.. ಅದನ್ನು ನೋಡಿ ತೀರಾ ಮಂಕಾದ ಲೋಕೇಶ್ ಮಂಗಳವಾರ ಸಂಜೆ ಈ ರೀತಿ ಮಾಡಿಕೊಂಡಿದ್ದಾರೆ.. ಈ ಘಟನೆ ಬಗ್ಗೆ ಮಾತನಾಡಿರುವ ಲೋಕೇಶ್ ಅವರ ತಂದೆ ಲೋಕೇಶ್ ಮತ್ತು ಅವನ ಹೆಂಡತಿ‌ ನಡುವೆ ಏನೋ ಮನಸ್ತಾಪ ಇತ್ತು.. ಅದು ನಮಗೆ ಒಂದು ತಿಂಗಳ ಹಿಂದೆ ಗೊತ್ತಾಯಿತು.. ನಾಲ್ಕು ದಿನದ ಹಿಂದೆ ಲೋಕೇಶ್ ನ ಹೆಂಡತಿಯಿಂದ ಡಿವೋರ್ಸ್ ನೋಟೀಸ್ ಬಂತು.. ಕಳೆದ ಶುಕ್ರವಾರದಿಂದಲೂ ಆತ ಬಹಳ ಮಂಕಾಗಿ ಹೋಗಿದ್ದ.. ನನ್ನ ಬಳಿ ಬಂದು ಸ್ವಲ್ಪ ಹಣ ಬೇಕು ಎಂದು ಕೇಳಿದ್ದ.. ನಾನೂ ಸಹ ಕೊಟ್ಟೆ.. ಎಡಿಟರ್ ಆಗಿ ಹೊಸ ಕೆಲಸ ಮಾಡ್ತೀನಿ ಅಂತ ನನ್ನ ಬಳಿ ಹೇಳಿದ್ದ.. ಆಯ್ತು ಎಂದು ನಾನು ಸಹ ಅವನ ಜೊತೆ ಕಳೆದ ಶುಕ್ರವಾರ ಮಾತನಾಡಿದ್ದೆ.. ಆದರೆ ಈಗ ಈ ರೀತಿ ಆಗಿದೆ ಎಂದು ಕಣ್ಣೀರಿಟ್ಟಿದ್ದಾರೆ..

ಅತ್ತ ವ್ಯಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿದ್ದ ಲೋಕೇಶ್ ರಾಜೆಂದ್ರನ್ ಬೇರೆ ಬೇರೆ ಅಭ್ಯಾಸಗಳನ್ನೂ ಸಹ‌ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.. ಸಾಕಷ್ಟು ಬಾರಿ ಚೆನ್ನೈನ ಬಸ್ ನಿಲ್ದಾಣದಲ್ಲಿಯೇ ಲೋಕೇಶ್ ಮಲಗಿದ್ದರು ಎಂದು ಸುದ್ದಿಯಾಗಿತ್ತು.. ಸೋಮವಾರ ಅಕ್ಟೋಬರ್ ಮೂರರಂದೂ ಸಹ ಬಸ್ ನಿಲ್ದಾಣದಲ್ಲಿ ಮಲಗಿದ್ದು ಅಲ್ಲಿಯೇ ಸುಸ್ತಾಗಿ ಬಿದ್ದಿದ್ದರು.. ಆ ಸಮಯದಲ್ಲಿ ಸಾರ್ವಜನಿಕರು ಆಸ್ಪತ್ರೆ ಹಾಗೂ ಪೋಲೀಸರಿಗೆ ಮಾಹಿತಿ ನೀಡಿದ್ದು ನಂತರ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು.. ಸೋಮವಾರ ಈ ಘಟನೆ ನಡೆದ ಒಂದೇ ದಿನಕ್ಕೆ ಮಂಗಳವಾರ ಸಂಜೆ ಈ ರೀತಿ‌ ಕೊನೆಯುಸಿರೆಳೆದಿದ್ದು ನಿಜಕ್ಕೂ ಬೇಸರವನ್ನುಂಟು ಮಾಡಿದೆ..

ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.. ಅತ್ತ ಲೊಕೇಶ್ ಅಭಿನಯದ ವಿದಾತು ಕರುಪ್ಪು ಎಂಬ ಧಾರಾವಾಹಿ ಇಪ್ಪತ್ತೈದು ವರ್ಷ ಪೂರೈಸಿದ್ದು ಕೆಲಸ ದಿನಗಳ ಹಿಂದಷ್ಟೇ ಧಾರಾವಾಹಿಯ ಎಲ್ಲಾ ಸ್ನೇಹಿತರು ಒಟ್ಟಿಗೆ ಸೇರಿದ್ದರು.. ಅದಾದ ಕೆಲವೇ ದಿನಗಳಲ್ಲಿ ಲೋಕೇಶ್ ಅವರೆ ಇಲ್ಲವಾಗಿದ್ದ ಕಂಡು ಅದರಲ್ಲೂ ಕೇವಲ ಮೂವತ್ತ ನಾಲ್ಕು ವರ್ಷಕ್ಕೇ ತಮ್ಮ ಜೀವನದ ಪಯಣ ಮುಗಿಸಿ ಹೊರಟ್ಟಿದ್ದ ಕಂಡು ಸ್ನೇಹಿತರು ಸಿನಿಮಾ ಮಂದಿ ಕಿರುತೆರೆಯ ಆಪ್ತರು ಅಭಿಮಾನಿಗಳು ಎಲ್ಲರೂ ಸಹ ಕಣ್ಣೀರಿಟ್ಟಿದ್ದಾರೆ..