ಇಂದು ರಾಜ್ಯದಲ್ಲಿ ಸಂಪೂರ್ಣ ಕರ್ಫ್ಯೂ… ಏನಿರತ್ತೆ? ಏನಿರಲ್ಲ? ಇಲ್ಲಿದೆ ನೋಡಿ..

ಕೊರೊನಾ ಕಾರಣದಿಂದಾಗಿ ಘೋಷಿಸಲಾಗಿದ್ದ ಲಾಕ್ ಡೌನ್ ಗಳನ್ನು ಸ್ವಲ್ಪ ಸ್ವಲ್ಪವಾಗಿ ಸಡಿಲಿಕೆ ಮಾಡಿ ಕೆಲಸ ಕಾರ್ಯಗಳಿಗೆ ಅವಕಾಶ ಮಾಡಿಕೊಡಲಾಯಿತು.. ಆದರೆ ಭಾನುವರಗಳಂದು ಸಂಪೂರ್ಣ ಲಾಕ್ ಡೌನ್ ಮಾಡುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ತಿಳಿಸಿದ್ದರು..

ಅದೇ ರೀತಿ‌ ಇಂದು ಮೊದಲ ಭಾನುವಾರವಾಗಿದ್ದು.. ಇಂದು ಸಂಪೂರ್ಣ ರಾಜ್ಯಕ್ಕೆ ಕರ್ಫ್ಯೂ ಜಾರಿ ಮಾಡಲಾಗಿದೆ.. ಇಂದು ಯಾವ ಯಾವ ಸೇವೆ ಸಿಗಲಿದೆ.. ಏನೇನಿರಲ್ಲ ಎಂಬ ಮಾಹಿತಿ‌ ಇಲ್ಲಿದೆ ನೋಡಿ..

ಏನಿರುತ್ತದೆ.. ಮಾಂಸದ ಅಂಗಡಿಗಳು ಓಪನ್ ಇರತ್ತೆ.. ಭಾನುವಾರವಾದ್ದರಿಂದ ಮಾಂಸದ ವಹಿವಾಟು ಹೆಚ್ಚಾಗಿ ನಡೆಯುವುದರಿಂದ ಅವಶ್ಯಕ ವಸ್ತು ಎಂದು ಪರಿಗಣಿಸಿ ಮಾಂಸದ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ.. ದಿನಸಿ ಅಂಗಡಿ ತೆರೆಯಲಿದೆ.. ಡಯಾಲಿಸಿಸ್ ಕೇಂದ್ರಗಳು ಕೂಡ ಓಪನ್ ಆಗಿರಲಿವೆ… ಇನ್ನು ಎಂದಿನಂತೆ ಆಸ್ಪತ್ರೆಗಳು ತೆರೆಯಲಿದ್ದು ಅನಾರೋಗ್ಯದಿಂದ ಬಳಲುತ್ತಿರುವವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬಹುದಾಗಿದೆ..

ಏನಿರಲ್ಲ.. ಮದ್ಯದಂಗಡಿ ತೆರೆಯುವುದಿಲ್ಲ.. ಹೌದು ಮದ್ಯದಂಗಡಿ ತೆರೆಯಲು ಅವಕಾಶ ನೀಡಿಲ್ಲ.. ಯಾರೂ ರಸ್ತೆಗೆ ಇಳಿಯುವಂತಿಲ್ಲ.. ಸಾರ್ವಜನಿಕ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.. ಆಟೋ ಟ್ಯಾಕ್ಸಿ ಕ್ಯಾಬ್ ಸೇವೆ ಇರುವುದಿಲ್ಲ.. ಖಾಸಗಿ ವಾಹನ ಬಳಸಿಯೂ ಕೂಡ ಓಡಾಡೋ ಹಾಗಿಲ್ಲ.. ಬ್ಯೂಟಿ ಪಾರ್ಲರ್ ಹಾಗೂ ಸಲೂನ್ ಶಾಪ್ ಗಳು ತೆರೆಯುವುದಿಲ್ಲ.. ಬಟ್ಟೆ ಅಂಗಡಿ ಚಪ್ಪಲಿ ಅಂಗಡಿ ಸೇರಿದಂತೆ ಯಾವುದೇ ರೀತಿಯ ಅಂಗಡಿ ತೆರೆಯುವಂತಿಲ್ಲ.. ಪಾರ್ಕ್ ಗಳಿ ಬಂದ್ ಆಗಲಿದ್ದು.. ವಾಕಿಂಗ್ ಜಾಗಿಂಗ್ ಗೆ ಅವಕಾಶವಿಲ್ಲ.. ಗಾರ್ಮೆಂಟ್ಸ್ ಖಾಸಗಿ ಕಂಪನಿಗಳು ಎಲ್ಲವೂ ಬಂದ್.. ಚಿನ್ನದ ಅಂಗಡಿಗಳೂ ಕೂಡ ಕ್ಲೋಸ್ ಆಗಲಿವೆ..

ಅಗತ್ಯ ವಸ್ತುಗಳಾದ ದಿನಸಿ ತರಕಾರಿ ಮಾಂಸ ಹಾಲಿನ ಅಂಗಡಿಗಳನ್ನು ಬಿಟ್ಟು ಮಿಕ್ಕೆಲ್ಲಾ ಅಂಗಡಿಗಳು ಬಂದ್ ಆಗಲಿದೆ.. ಜೊತೆಗೆ ರಸ್ತೆಗಳನ್ನು ಬ್ಯಾರಿಕೆಡ್ ನಲ್ಲಿ ಬಂದ್ ಮಾಡಲಾಗಿದ್ದು ಬೇರೆ ಜಿಲ್ಲೆಗಳಿಗೆ ತೆರಳುವುದಾಗಲಿ, ಅನಗತ್ಯವಾಗಿ ಓಡಾಡುವುದಕ್ಕಾಗಲಿ ಯಾವುದೇ ಅವಕಾಶವಿಲ್ಲ..