ಲಾಕ್ ಡೌನ್ ನಡುವೆ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್..

ದೇಶದಲ್ಲಿ ಕೊರೊನಾ ತಲೆ ನೋವಿನ ಜೊತೆಗೆ ಮದ್ಯ ಪ್ರಿಯರ ತಲೆನೋವೇ ಹೆಚ್ಚಾದಂತೆ ಕಾಣುತ್ತಿದೆ.. ಪ್ರತಿದಿನ ಮದ್ಯ ಸಿಗದೆ ಸಾವುಗಳಾಗಿರುವ ವಿಚಾರಗಳು ಸುದ್ದಿಯಾಗುತ್ತಲೇ ಇವೆ.. ಇದೇ ಕಾರಣಕ್ಕೆ ಈ ಸಮಸ್ಯೆಯನ್ನು ಬಗೆ ಹರಿಸಲು ಸರಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ..

ಕೊರೊನಾ ತಡೆಗಟ್ಟಲು ವಿಧಿಸಿರುವ ಲಾಕ್‍’ಡೌನ್’ನಿಂದ ಕುಡುಕರು ಮದ್ಯ ಸಿಗದೇ ಕಂಗಾಲಾಗಿ ಹೋಗಿದ್ದಾರೆ. ಲಾಕ್‍’ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇದನ್ನೇ ಕೆಲ ಖದೀಮರು ಬಂಡವಾಳವಾಗಿ ಮಾಡಿಕೊಂಡು ಅಕ್ರಮವಾಗಿ ಮದ್ಯ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ಅಧಿಕ ಬೆಲೆಗೆ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಇಷ್ಟರಲ್ಲೇ ಸರ್ಕಾರ ಕುಡುಕರಿಗೆ ಒಂದು ಗುಡ್ ನ್ಯೂಸ್ ನೀಡಲಿದೆ.

ಎಣ್ಣೆ ಸಿಗದೆ ರಾಜ್ಯದಲ್ಲಿ ಕೆಲವರು ಸೂಸೈಡ್ ಮಾಡಿಕೊಂಡಿದ್ದು, ಹಲವರು ಪರದಾಡುತ್ತಿದ್ದಾರೆ. ಇತ್ತ ಕೆಲ ದಂಧೆಕೋರರು ಡಬಲ್ ರೇಟ್’ಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮದ್ಯದಂಗಡಿ ಓಪನ್ ಮಾಡಲು ಚಿಂತನೆ ನಡೆಸಿದೆ.

ಈ ಬಗ್ಗೆ ಚಿಂತನೆ ನಡೆಸಿರುವ ಹಣಕಾಸು ಇಲಾಖೆ, ಪರಿಸ್ಥಿತಿ ಸುಧಾರಿಸಿಕೊಳ್ಳಲು ಮದ್ಯದಂಗಡಿ ತೆರೆದರೆ ಹೇಗೆ ಎಂಬ ಚಿಂತನೆ ನಡೆಸಿದೆ. ಅಬಕಾರಿ ಇಲಾಖೆ ಈ ಬಗ್ಗೆ ಯಾವುದೇ ಸಮ್ಮತಿ ನೀಡಿಲ್ಲ. ಸಿಎಂ ಗಮನಕ್ಕೂ ಈ ವಿಚಾರ ತಂದು ಇನ್ನೆರಡು ದಿನದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ದಿನಕ್ಕೆ 3 ಗಂಟೆಗಳ ಕಾಲ ಮಾತ್ರ ತೆರೆಯಲು ಚಿಂತನೆ ನಡೆಸಿದೆ.