ಮನೆಯಲ್ಲಿ ದೇವರಿಗೆ ಪೂಜೆ ಮಾಡವವರು ಈ ವಿಷಯವನ್ನು ನೆನಪಿಟ್ಚುಕೊಳ್ಳಿ! ನಿಮ್ಮ ಪೂಜೆಗೆ ಪರಮಶ್ರೇಷ್ಠ ಫಲ ಸಿಗುತ್ತದೆ..

ಹಿಂದೂ ಸಂಪ್ರದಾಯದಲ್ಲಿ ಭಗವಂತನ ಆರಾಧನೆಗೆ ವಿಶೇಷವಾದ ರೀತಿ-ನೀತಿಗಳಿವೆ. ಪೂಜೆ ಮಾಡುವುದು ತುಂಬಾ ಮುಖ್ಯವಾದ ವಿಚಾರ. ಭಾರತೀಯರು ಬೆಳಗ್ಗೆ ದೇವರ ಪೂಜೆ ಮಾಡುವವರೆಗೂ ತಿಂಡಿ ತಿನ್ನದೆ ಪೂಜೆ ಮಾಡುವುದು ಸಾಮಾನ್ಯ. ಆದರೆ ಈ ಬ್ಯುಸಿ ಲೈಫ್’ನಲ್ಲಿ ಪೂಜೆ ಮಾಡೋ ಹೊತ್ತಿಗೆ 11 ಗಂಟೆ ಆಗಿ ಹೋಗಿರತ್ತೆ. ಆದರೆ ಅಷ್ಟೋತ್ತೊರೆಗೂ ಉಪವಾಸ ಇರೋದು ಕಷ್ಟ. ಯಾಕೆಂದರೆ ಸಕ್ಕರೆ ಕಾಯಿಲೆ ಅಥವಾ ಕಡಿಮೆ ರಕ್ತದೊತ್ತಡದಂತಹ ಖಾಯಿಲೆಯಿಂದ ಬಳಲುತ್ತಿರುವವರಿಗೆ ಆಯಾಸ ಆಗಬಾರದು .ಈ ರೀತಿ ಅವರು ಪೂಜೆಯನ್ನು ಮಾಡಿದರೆ ಯಾವ ಪರಿಸ್ಥಿತಿಯಲ್ಲಾದರೂ ತೊಂದರೆಯಾಗುತ್ತದೆ.

ಹಾಗಾಗಿ, ಸಾತ್ವಿಕ ಆಹಾರ ಸೇವಿಸಿ ಪೂದೆ ಮಾಡಿದರೆ ತೊಂದರೆಯಿಲ್ಲ.. ಬೆಳಗ್ಗೆ ಮಕ್ಕಳನ್ನು ರೆಡಿ ಮಾಡಿ, ತಿಂಡಿ ತಿನ್ನಿಸಿ ಸ್ಕೂಲ್’ಗೆ ಕಳಿಸಿ. ಕೆಲಸಕ್ಕೆ ಹೋಗುವವರಿಗೆ ಬಾಕ್ಸ್ ರೆಡಿ ಕಳಿಸೋದರಲ್ಲೆ ಗೃಹಿಣಿಯರಿಗೆ ಅರ್ಧ ಟೈಂ ಮುಗಿದು ಹೋಗಿರತ್ತೆ. ಇನ್ನು ಮನೆ ಸ್ವಚ್ಛಗೊಳಿಸಿ ಪೂಜೆ ಮಾಡೋ ಹೊತ್ತಿಗೆ ತಿಂಡಿ ಸಮಯ ಮುಗಿದು ಹೋಗಿರತ್ತೆ.

ಸೋ, ತಿಂಡಿ ತಿಂದು ಪೂಜೆ-ಪುನಸ್ಕಾರಗಳನ್ನು ಮಾಡಬೇಕು. ಹಾಗೆ ಅಲ್ಲದೆ ಕೆಲವರು ಉಪವಾಸ ಮಾಡುವವರು ಸಹ ಇರುತ್ತಾರೆ. ಅವರು ಬೆಳಗ್ಗೆಯಿಂದ ಸಂಜೆಯವರೆಗೆ ಏನೂ ತಿನ್ನದೇ ಇರಬಾರದು. ಒಂದು ಹೊತ್ತಿನ ಉಪವಾಸವನ್ನು ಪಾಲಿಸಿದರೆ ಸಾಕು. ಯಾಕೆಂದರೆ ನಾವು ಎಷ್ಟು ಉಪವಾಸ ಇದ್ದೀವಿ ಎನ್ನುವುದಕ್ಕಿಂತ, ನಾವು ಎಷ್ಟು ಭಕ್ತಿ, ಶ್ರದ್ಧೆಯಿಂದ ಪೂಜೆ ಮಾಡುತ್ತಿದ್ದೇವೆ ಎನ್ನುವುದನ್ನು ಆ ದೇವರು ನೋಡುತ್ತಾ ಇರುತ್ತಾನೆ. ಬೆಳಗಿನ ಜಾವದ ತಿಂಡಿಯನ್ನು ತಿಂದು ನಂತರ ಪೂಜೆಯನ್ನು ಮಾಡಬಹುದು. ಆ ದೇವರ ಅನುಗ್ರಹ ಯಾವಾಗಲೂ ನಮ್ಮ ಮೇಲೆ ಇರುತ್ತದೆ.

ಸಾತ್ವಿಕ ಆಹಾರ ಅಂದ್ರೆ ಏನು ಅಂತ ಈ ಮೇಲಿನ ವೀಡಿಯೋ ನೋಡಿ ನಿಮಗೆ ಗೊತ್ತಾಗುತ್ತೆ.