ನಿಜ ಜೀವನದಲ್ಲಿಯೂ ಒಂದಾದ ಕನ್ನಡ ಕಿರುತೆರೆಯ ಖ್ಯಾತ ಜೋಡಿ..

ಕಿರುತೆರೆಯಲ್ಲಿ ಇದೀಗ ಒಬ್ಬರಾದ ಮೇಲೆ ಒಬ್ಬರು ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆಮ್ ಧಾರವಾಹಿಗಳಲ್ಲಿ ಒಟ್ಟಿಗೆ ನಟಿಸಿ, ಪರಿಚಯದಿಂದ ಪ್ರೇಮಕ್ಕೆ ತಿರುಗಿ ಮದುವೆಯಾಗುತ್ತಿದ್ದಾರೆ ಹಲವು ನಟ ನಟಿಯರು. ಇದೀಗ ಅದೇ ಸಾಲಿಗೆ ಮತ್ತೊಂದು ಜೋಡಿ ಸೇರಿಕೊಂಡಿದೆ. ಕಿರುತೆರೆಯಲ್ಲಿ ಒಟ್ಟಿಗೆ ಅಭಿನಯಿಸಿ ನಂತರ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಕಿರುತೆರೆಯ ಹಲವು ಧಾರವಾಹಿಗಳಲ್ಲಿ ನಟಿಸಿದ, ನಟಿ ಲಾವಣ್ಯ ಹಾಗೂ ಶಶಿಧರ್ ಹೆಗ್ಡೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧಾರಾವಾಹಿಯಲ್ಲಿ ಒಂದಾಗಿ ನಟಿಸಿದ್ದ ಈ ಜೋಡಿ ಇದೀಗ ನಿಜ ಜೀವನದಲ್ಲಿಯೂ ಒಂದಾಗಿದ್ದಾರೆ.

ಶಶಿ ಹೆಗ್ಡೆ ಹಾಗೂ ಲಾವಣ್ಯ ಒಟ್ಟಾಗಿ ಅಭಿನಯ ಶುರು ಮಾಡಿದವರು. ಕಿರುತೆರೆಯ ಧಾರವಾಹಿ ಒಂದರಲ್ಲಿ ಒಟ್ಟಾಗಿ ನಟಿಸುವ ಮೂಲಕ ಇಬ್ಬರೂ ಒಬ್ಬರಿಗೊಬ್ಬರು ಪರಿಚಯವಾದರು. ಹೌದು ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರವಾಹಿ ರಾಜ ರಾಣಿ. ಈ ರಾಜ ರಾಣಿ ಧಾರಾವಾಹಿಯಲ್ಲಿ ನಟ ಶಶಿ ಹೆಗ್ಡೆ ಹಾಗೂ ನಟಿ ಲಾವಣ್ಯ ಒಟ್ಟಾಗಿ ನಟಿಸಿದ್ದರು. ಈ ಧಾರವಾಹಿಯ ಮೂಲಕ ಇಬ್ಬರ ನಡುವೆ ಪರಿಚಯವಾಗಿ ನಂತರ ಸ್ನೇಹವಾಯಿತು. ಹಲವು ವರ್ಷಗಳ ಕಾಲ ಜೊತೆಯಾಗಿದ್ದ ಈ ಇಬ್ಬರ ನಡುವೆ ಪ್ರೇಮಾಂಕುರವಾಗಿ ಇಬ್ಬರೂ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ರಾಜ ರಾಣಿ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸುತ್ತಿದ್ದ ಈ ಜೋಡಿ, 4 ವರ್ಷಗಳ ಕಾಲ ಒಬ್ಬರನೊಬ್ಬರು ಪ್ರೀತಿಸಿ, ಕೊನೆಗೂ ತನ್ನ ಪೋಷಕರನ್ನು ಒಪ್ಪಿಸಿ ಮದುವೆಯಾಗಿದ್ದಾರೆ. ಲಾವಣ್ಯ ಹಾಗೂ ಶಶಿ ಹೆಗ್ಡೆ ತಮ್ಮ ಪೋಷಕರು, ಕುಟುಂಬಸ್ಥರು, ಹಾಗೂ ಸ್ನೇಹಿತರ ಎದುರು ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮದುವೆಯ ಫೋಟೋಗಳನ್ನು ಇದೀಗ ಈ ಜೋಡಿ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಇದೀಗ ಕಿರುತೆರೆ ಕಲಾವಿದರು ಸೇರಿದಂತೆ ಹಲವಾರು ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಸದ್ಯ ಲಾವಣ್ಯ ಹಾಗೂ ಶಶಿ ಹೆಗ್ಡೆ ಅವರ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ.

ನಟ ಶಶಿ ಹೆಗ್ಡೆ ತಮ್ಮ ಮದುವೆಯ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡು, ನನ್ನ ಹಲವು ವರ್ಷಗಳಿಂದ ಕಂಡ ಕನಸ್ಸು ಎರಡು ದಿನಗಳ ಹಿಂದೆ ನನಸಾಗಿದೆ. ಸಿಕ್ಕಳು ನಮ್ಮ ಮನೆಯ ಅರಸಿ, ನೀವೆಲ್ಲರೂ ನಮಗೆ ಹಾರೈಸ್ ಎಂದು ಬರೆದುಕೊಂಡಿದ್ದಾರೆ. ಇನ್ನು ನಟಿ ಲಾವಣ್ಯ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮದುವೆಯ ಫೋಟೋ ಮತ್ತು ವಿಡಿಯೋ ಶೇರ್ ಮಾಡಿಕೊಂಡು ನನ್ನ ಸಂತೋಷವನ್ನು ನಾನು ಬರಹದಲ್ಲಿ ಹೇಳಲಾರೆ.. ಮಿಸ್ ಟು ಮಿಸಸ್ ಎಂದು ಬರೆದುಕೊಂಡು ಕೆಂಪು ಹೃದಯದ ಎಮೋಜಿಯನ್ನು ಹಾಕಿದ್ದಾರೆ. ಈ ಪೋಸ್ಟ್ ಗೆ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ನವ ದಂಪತಿಗೆ ಶುಭ ಕೋರುತ್ತಿದ್ದಾರೆ.

ಸದ್ಯ ನಟಿ ಲಾವಣ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದಾಸಪುರಂದರ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಖಳನಾಯಕಿ ಪದ್ಮ ಪಾತ್ರದಲ್ಲಿ ನಟಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕೆ ಈಗಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಿರುತೆರೆಯ ಇನ್ನು ಹೆಚ್ಚು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುವ ನಿರೀಕ್ಷೆಯಲ್ಲಿದ್ದಾರೆ ನಟಿ ಲಾವಣ್ಯ. ಇನ್ನು ಶಶಿ ಹೆಗ್ಡೆ ಅವರು ಸೋಷಿಯಲ್ ಮಿಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ನಟ. ಸೋಷಿಯಲ್ ಮಿಡಿಯಾದಲ್ಲಿ ಆಗಾಗ ತಮ್ಮ ಫಿಟ್ನೆಸ್ ಹಾಗೂ ವರ್ಕೌಟ್ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳ ಸಂಪರ್ಕದಲ್ಲಿರುತ್ತಾರೆ.