ಶಾಕಿಂಗ್ ನ್ಯೂಸ್..‌ ಎಲ್ಲರೂ ಅಂದುಕೊಂಡದ್ದೇ ಒಂದು.. ಆದರೆ ಡಿ ಕೆ ರವಿ ಅವರ ಪತ್ನಿ ಮಾಡಿದ ನಿರ್ಧಾರ ನೋಡಿ..

ಆರ್ ಆರ್ ನಗರದ ಉಪಚುನಾವಣೆಯ ಕಾವು ಏರುತ್ತಿದೆ.. ಅತ್ತ ಬಿಜೆಪಿ ಇಂದ ಮುನಿರತ್ನ ಅವರ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಇತ್ತ ಜೆಡಿ ಎಸ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಹುಡುಕಾಟ ನಡೆಸಲಾಗಿದ್ದು ದಿ.ಐ ಎ ಎಸ್ ಅಧಿಕಾರಿ ಡಿ ಕೆ ರವಿ ಅವರ ಪತ್ನಿ ಕುಸುಮಾ ಅವರನ್ನು ಚುನಾವಣೆಗೆ ನಿಲ್ಲಿಸಲು ಎರಡೂ ಪಕ್ಷಗಳು ಯೋಜನೆ ರೂಪಿಸಿದ್ದವು ಎಂಬ ಮಾತು ಕೇಳಿ ಬಂದಿತ್ತು.. ಆದರೆ ಜೆ ಡಿ ಎಸ್ ಪಕ್ಷದ ಮಾತು ಅಲ್ಲಿಗೆ ನಿಂತಿತು.. ಕಾಂಗ್ರೆಸ್ ಪಕ್ಷದಿಂದ ಕುಸುಮಾ ಅವರು ಚುನಾವಣೆಗೆ ನಿಲ್ಲುವುದು ಖಚಿತ ಎನ್ನುತ್ತಿದ್ದಂತೆ ಅತ್ತ ಡಿ ಕೆ ರವಿ ಅವರ ತಾಯಿ ಕುಸುಮ ಅವರನ್ನು ನಿಂದಿಸಿ ನನ್ನ ಮಗನ ಹೆಸರನ್ನು ಬಳಸ್ಬಾರದು.. ಆರು ವರ್ಷದ ಹಿಂದೆ ನನ್ನ ಮಗ ಹೋದ ದಿನವೇ ಅವಳು ನಮ್ಮ ಪಾಲಿಗೆ ಇಲ್ಲವಾದಳು. ನನ್ನ ಮಗನ ಹೆಸರನ್ನು ಬಳಸುವ ಯಾವ ಅಧಿಕಾರವೂ ಅವಳಿಗೆ ಇಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದರು.. ಅತ್ತ ಕುಸುವ ಅವರ ತಂದೆಯೂ ಸಹ ಡಿ ಕೆ ರವಿ ಅವರ ತಾಯಿಗೆ ಉತ್ತರ ನೀಡಿ ನನ್ನ ಮಗಳ ಬಗ್ಗೆ ಮಾತನಾಡುವ ಮುನ್ನ ತಮ್ಮ ಮಗ ಯಾರ ಪ್ರೇಮ ಪಾಶದಲ್ಲಿದ್ದರು ಎಂಬುದನ್ನ ತಿಳಿಸಲಿ ಎಂದು ನೇರವಾಗಿಯೇ ವಾಗ್ದಾಳಿ ನಡೆಸಿದ್ದರು..

ಇಷ್ಟೆಲ್ಲಾ ಬೆಳವಣಿಗೆಯ ನಡುವೆಯೇ ಇಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬಹಿರಂಗವಾಗಿ ಕುಸುಮಾ ಅವರ ಬಗ್ಗೆ ಹೇಳಿಕೆ ನೀಡಿದ್ದಾರೆ.. ಹೌದು ಇಂದು ಕುಸುಮಾ ಅವರ ಜೊತೆ ಗಂಟೆಗಳ ಕಾಲ ಚರ್ಚೆ ನಡೆದಿದ್ದು ನಂತರ ಮಾದ್ಯಮದವರೊಂದಿಗೆ ಡಿ ಕೆ ಶಿವಕುಮಾರ್ ಅವರು ಮಾತನಾಡಿ ನಾಳೆ ಕುಸುಮಾ ಅವರು ಅಧಿಕೃತವಾಗಿ ಕಾಂಗ್ರೆಸ್ ಸದಸ್ಯತ್ವ ಪಡೆಯಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.. ಅಷ್ಟೇ ಅಲ್ಲದೇ ಆರ್ ಆರ್ ನಗರದ ಚುನಾವಣೆ ಟಿಕೆಟ್ ನೀಡುವ ಸಂಬಂಧ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ನಂತರ ತೀರ್ಮಾನ ಕೈಗೊಳ್ಳುವುದು ಎಂದಿದಾರೆ..

ಆದರೆ ಡಿ ಕೆ ರವಿ ಅವರ ಅಭಿಮಾನಿಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಕುಸುಮಾ ಅವರು ಈ ರಾಜಕೀಯಕ್ಕೆ ಬಾರದಿರಲಿ ಎಂದು ಅಭಿಪ್ರಾಯ ಪಟ್ಟಿದರು.. ಈ ಹಿಂದೆಯೂ ಡಿ ಕೆ ರವಿ ಅವರ ತಾಯಿ ಚುನಾವಣೆಗೆ ನಿಲ್ಲುವ ಸಮಯದಲ್ಲಿಯೂ ಈ ರಾಜಕೀಯದ ಸಹವಾಸ ಬೇಡವೆಂದಿದ್ದರು.. ಆದರೆ ಚುನಾವಣೆಗೆ ನಿಂತು ಸೋತಿದ್ದರು.. ಇದೀಗ ಕುಸುಮಾ ಅವರು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆಯುತ್ತಿದ್ದು ಆರ್ ಆರ್ ನಗರದಲ್ಲಿ ಮುನಿರತ್ನ ಅವರ ಎದುರು ಚುನಾವಣೆಗೆ ನಿಲ್ಲುವುದು ಖಚಿತ ಎನ್ನಬಹುದು.. ಎಲ್ಲರೂ ಕುಸುಮಾ ಅವರು ರಾಜಕೀಯಕ್ಕೆ ಬರುವುದಿಲ್ಲ ಎಂದುಕೊಂಡಿದ್ದರು.. ಆದರೆ ಕುಸುಮಾ ಅವರ ಈ ರಾಜಕೀಯ ನಡೆ ಬಹಳಷ್ಟು ಆಶ್ಚರ್ಯವನ್ನುಂಟು ಮಾಡಿರುವುದಂತೂ ಸತ್ಯ..