ಕೊರೊನಾ ವೈರಸ್ ಪಾಸಿಟಿವ್.. ಖ್ಯಾತ ನಟಿ ಖುಷ್ಭು ಮನೆಯಲ್ಲಿ ಸಾವು..

ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರು ದಿನದಿಂದ ದಿನಕ್ಕೆ ಹೆಚ್ಚಾಗುತಲೇ ಇದ್ದಾರೆ.. ಲಾಕ್ ಡೌನ್ ಇದ್ದಾಗ ಮಂದಗತಿಯಲ್ಲಿ ಹೆಚ್ಚಾಗುತ್ತಿದ್ದ ಸಂಖ್ಯೆ ಇದೀಗ ಪ್ರತಿ ದಿನವೂ ಸಾವಿರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.. ಜೊತೆಗೆ ಕೊರೊನಾದಿಂದಾಗಿ ಜೀವ ಕಳೆದುಕೊಳ್ಳುವವರ ಸಂಖ್ಯೆಯೂ ಹೆಚ್ಚುತಲಿದೆ.. ನಿನ್ನೆಯಷ್ಟೇ ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ ಕೊರೊನಾದಿಂದ ಮೃತ ಪಟ್ಟಿದ್ದರು.. ವಾಜಿದ್ ಖಾನ್ ಅವರ ಸಾವಿಗೆ ಚಿತ್ರರಂಗ ಕಂಬನಿ‌‌ ಮಿಡಿದಿತ್ತು.. ಇದೀಗ ಮತ್ತೊಬ್ಬ ಸ್ಟಾರ್ ನಟಿಯ ಮನೆಯಲ್ಲೂ ಕೊರೊನಾ ಕಾರಣದಿಂದಾಗಿ ಸಾವಾಗಿದೆ..

ಹೌದು ಬಹುಭಾಷಾ ನಟಿ, ರಾಜಕಾರಿಣಿ ಖುಷ್ಬು ಅವರ ಮನೆಯಲ್ಲಿಯೂ ಕೊರೊನಾ ದಿಂದಾಗಿ ಸಾವಾಗಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೋವು ಹಂಚಿಕೊಂಡಿದ್ದಾರೆ.. ಖುಷ್ಬು ಅವರ ಅತ್ತಿಗೆಯ ಅಣ್ಣ ಕೊರೊನಾದಿಂದಾಗಿ ಜೀವ ಕಳೆದುಕೊಂಡಿದ್ದಾರೆ..

ಮುಂಬೈ ನಲ್ಲಿ ನೆಲೆಸಿದ್ದ ಖುಷ್ಬು ಅವರ ಅತ್ತಿಗೆಯ ಸಹೋದರ ಕಳೆದ ಕೆಲ ದಿನಗಳ ಹಿಂದಷ್ಟೇ ಕೋವಿಡ್ ಗೆ ತುತ್ತಾಗಿದ್ದರು.. ಚಿಕಿತ್ಸೆ ನೀಡಲಾಗುತಿತ್ತು.. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.. ಆದರೆ ಅಂತ್ಯಕ್ರಿಯೆಯಲ್ಲಿ ಖುಷ್ಬು ಅವರು ಸೇರಿದಂತೆ ಮನೆಯವರೇ ಭಾಗಿಯಾಗದ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಯಾರೂ ಅಂತಿಮ ಕಾರ್ಯದಲ್ಲಿ ಪಾಲ್ಗೊಳ್ಳಲಾಗಲಿಲ್ಲ ಎಂದು ನೋವು ಹಂಚಿಕೊಂಡಿದ್ದು ಕಂಬನಿ ಮಿಡಿದಿದ್ದಾರೆ..

ಯಾರೋ ಮಾಡಿದ ತಪ್ಪು, ಯಾವುದೋ ದೇಶದ ಮುನ್ನೆಚ್ಚರಿಕೆ ಇಲ್ಲದ ತಪ್ಪಿಗೆ ಇಂದು ಭೂಮಿ ಮೇಲಿನ‌ ಎಲ್ಲಾ ಮನುಷ್ಯರು ಅನುಭವಿಸುವಂತಾಗಿದೆ.. ತಪ್ಪೇ ಮಾಡದ ಅನೇಕ ಜೀವಗಳು ಲೆಕ್ಕವಿಲ್ಲದ ರೀತಿಯಲ್ಲಿ ಪ್ರತಿದಿನ ಪ್ರಾಣ‌ ಕಳೆದುಕೊಳ್ಳುತ್ತಿವೆ.. ಇದಕ್ಕೆಲ್ಲಾ ಯಾರು ಹೊಣೆ..‌ ಸದ್ಯಕ್ಕೆ ಯಾರನ್ನೂ ನಂಬಲಾಗದ ಸಂದರ್ಭದಲ್ಲಿ ನಾವಿದ್ದೇವೆ.. ಯಾರೂ ಏನೂ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದು.. ದಯಮಾಡಿ ನಿಮ್ಮ ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ.. ಮನೆಯವರು ಆಸ್ಪತ್ರೆಯ ಮುಂದೆ ನಿಮ್ಮನ್ನು ಮುಟ್ಟಲೂ ಆಗದೆ ರೋದನೆ ಪಡುವುದು ಬೇಡ.. ಎಲ್ಲರೂ ಎಚ್ಚರಿಕೆಯಿಂದಿರಿ..