ಸದಾ ಕುರಿ ಪ್ರತಾಪ್ ಜೊತೆಯೇ ಇದ್ದ ಪ್ರಿಯಾಂಕ ಹೊರ ಬಂದ ಕೂಡಲೇ ಕುರಿ ಪ್ರತಾಪ್ ಬಗ್ಗೆ ಹೇಳಿದ್ದೇ ಬೇರೆ.

ಬಿಗ್ ಬಾಸ್ ಈ ಸೀಸನ್ ನ ಫಿನಾಲೆಗೆ ಇನ್ನೊಂದು ದಿನವಷ್ಟೇ ಬಾಕಿ ಇದ್ದು ಇಂದು ಮತ್ತು ನಾಳೆ ತೆರೆ ಬೀಳಲಿದೆ. 50 ಲಕ್ಷ ಒಬ್ಬರ ಪಾಲಾಗಲಿದೆ.. ವಿನ್ನರ್ ಪಟ್ಟ ಯಾರ ಮುಡಿಗೋ ಕುತೂಹಲ ಹೆಚ್ಚಾಗಿದೆ..

ಈ ಸೀಸನ್ ನಲ್ಲಿ ಬಂದ ಅಷ್ಟೂ ಸದಸ್ಯರು ಸೆಲಿಬ್ರೆಟಿಗಳೆ ಎಂಬುದು ಗೊತ್ತಿರುವ ವಿಚಾರ.. ಕೆಲವರು ಅಷ್ಟಾಗಿ ಜನರಿಗೆ ಪರಿಚಯವಿಲ್ಲದಿದ್ದರೂ ಬಿಗ್ ಮನೆಗೆ ಬಂದ ನಂತರ ಜನರ ಮನ ಗೆದ್ದರು..

ಇನ್ನು ಈ ಸೀಸನ್ ನಲ್ಲಿ ಆದಷ್ಟು ಗ್ರೂಪಿಸಮ್ ಬೇರೆ ಯಾವ ಸೀಸನ್ ನಲ್ಲಿಯೂ ಆಗಿರಲಿಲ್ಲ.. ಹೊಸದರಲ್ಲಿ ನಮ್ಮದು ಒಂದು ಟೀಮ್.. ನಿಮ್ಮದು ಒಂದು ಟೀಮ್ ಎಂದೇ ಹೇಳಿಕೊಂಡು ಓಡಾಡುತ್ತಿದ್ದರು.‌.

ಅದೇ ರೀತಿ ಕಳೆದ ವಾರವಷ್ಟೇ ಎಲಿಮಿನೇಟ್ ಆದ ಪ್ರಿಯಾಂಕ ಇದ್ದಷ್ಟು ದಿನ ಸದಾ ಕುರಿ ಪ್ರತಾಪ್ ಅವರ ಜೊತೆಯೇ ಇದ್ದರು.. ಪ್ರಿಯಾಂಕ ಎಂದರೆ ಕುರಿ.. ಕುರಿ ಎಂದರೆ ಪ್ರಿಯಾಂಕ ಎನ್ನುವಷ್ಟರ ಮಟ್ಟಕ್ಕೆ ಆಗಿ ಹೋಗಿತ್ತು.. ನಂತರ ಸುದೀಪ್ ಅವರ ಸಲಹೆ ಮೇರೆಗೆ ಇತರರ ಜೊತೆಯೂ ಮಾತನಾಡಲು ಶುರು ಆದರು.. ಆನಂತರ ಕುರಿ ಪ್ರತಾಪ್ ಅವರಿಂದ ಮನರಂಜನೆ ಹೆಚ್ಚಾಗಿ ಜನರಿಗೆ ಸಿಗಲಾರಂಭಿಸಿತು..

ಇನ್ನು ಬಿಗ್ ಮನೆಯಲ್ಲಿ ಇದ್ದಷ್ಟು ದಿವಸ ಪ್ರಿಯಾಂಕ ಅವರು ಇತರರಿಗೆ ಗೌರವ ಕೊಟ್ಟು ಮಾತನಾಡಿದ್ದೇ ಕಡಿಮೆ.. ಸದಾ ಬೈಯುವ ಮ್ಯಾನರಿಸಂ ನ ಪ್ರಿಯಾಂಕ ಅವರ ಜೊತೆ ಸುದೀಪ್ ಅವರು ಕೂಡ ಅವರು ಮಾತನಾಡುವ ರೀತಿಯನ್ನು ತಿಳಿಸಿ ನಿಮ್ಮ ಜೊತೆ ಮಾತನಾಡಲು ಭಯವಾಗತ್ತೆ ಎಂದಿದ್ದರು..

ಒಂದು ರೀತಿಯಲ್ಲಿ ಪ್ರಿಯಾಂಕ ಅವರು ಇದ್ದ ರೀತಿ ಬಹಳಷ್ಟು ಜನರಿಗೆ ಇಷ್ಟವಾಗಿ ಹೋಗಿತ್ತು.. ಅದೇ ಕಾರಣಕ್ಕೆ ಅವರನ್ನು ಕೊನೆ ವಾರದವರೆಗೂ ಉಳಿಸಿಕೊಂಡಿದ್ದರೆನ್ನಬಹುದು..

ಇನ್ನು ಬಿಗ್ ಬಾಸ್ ನಲ್ಲಿ ಸದಾ ಕುರಿ ಪ್ರತಾಪ್ ರನ್ನು ಬೈಯುತ್ತಿದ್ದ ಪ್ರಿಯಾಂಕ ಅವರು ಮನೆಯಿಂದ ಹೊರ ಬಂದ ನಂತರ ಪ್ರತಾಪ್ ಅವರ ಬಗ್ಗೆ ಆಡಿದ ಮಾತುಗಳೇ ಬೇರೆ..
ಕುರಿ ಪ್ರತಾಪ್ ಅವರು ತುಂಬಾ ದೊಡ್ಡ ಸೆಲಿಬ್ರೆಟಿ.. ಅವರ ಜೊತೆ ನಾವು ಅಷ್ಟು ಕ್ಲೋಸ್ ಆಗಿ ಇರಲು ಅವಕಾಶ ಸಿಕ್ಕಿದ್ದೇ ನಮ್ ಅದೃಷ್ಟ.. ಅವತ್ತು ಜನರಿಗೆ ಪತ್ರ ಬರೆಯುವಾಗ ನನ್ನ ಪ್ರೀತಿಯ ಗೆಳತಿ ಪ್ರಿಯಾಂಕಳಿಗೂ ಸಪೋರ್ಟ್ ಮಾಡಿ ಅಂತ ನನ್ನ ಕೈನಲ್ಲೇ ಬರೆಸಿದ್ರು.. ನಿಜಕ್ಕು ಅಂದು ಅವರು ಎಷ್ಟು ಒಳ್ಳೆಯ ಮನಸ್ಸಿನ ಮನುಷ್ಯ ಅಂತ ತಿಳಿತು.. ಯಾರ್ ತಾನೆ ಇನ್ನೊಬ್ಬರನ್ನ ಸಪೋರ್ಟ್ ಮಾಡಿ ಅಂತ ಅಭಿಮಾನಿಗಳಿಗೆ ಹೇಳ್ತಾರೆ ಹೇಳಿ.. ಪ್ರತಾಪ್ ಅವರು ಯಾವತ್ತು ಯಾರ ಜೊತೆಯೂ ಮನೆಯಲ್ಲಿ ಅಹಂಕಾರ ತೋರಲಿಲ್ಲ.. ನಾನ್ ಅಷ್ಟೆಲ್ಲಾ ಏಕವಚನದಲ್ಲಿ‌ ಮಾತನಾಡಿಸಿದ್ರು ಅವರು ಸುಮ್ಮನಿದ್ರು..

ಅದೆಲ್ಲಾ ಕೇವಲ ಮನರಂಜನೆಗಷ್ಟೇ.. ಅವರ ಮೇಲೆ ನನಗೆ ತುಂಬಾ ಗೌರವ ಇದೆ.. ಅವರು ದೊಡ್ಡ ಸೆಲಿಬ್ರೆಟಿ ಆದರೂ ಸರಳ ವ್ಯಕ್ತಿತ್ವದವರು. ನನಗೆ ಅವರ ಜೊತೆ ಇದ್ದದ್ದು ತುಂಬಾ ಖುಷಿ ಇದೆ ಎಂದರು..