ನಿರೂಪಕನ ಯಡವಟ್ಟು.. ವೇದಿಕೆ ಮೇಲೆಯೇ ಕಣ್ಣೀರಿಟ್ಟ ಖ್ಯಾತ ನಟಿ.. ಇವರ ಜನ್ಮಕ್ಕಿಷ್ಟು..

ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಸಾಕಷ್ಟು ನಟಿಯರು ಇಂದು ಪರಭಾಷೆಯಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ಕನ್ನಡಕ್ಕಿಂತ ಹೆಚ್ಚಾಗಿ ಅವರಿಗೆ ಬೇರೆ ಭಾಷೆಯಲ್ಲಿ ಪ್ರಾಮುಖ್ಯತೆ ಸಿಕ್ಕಿದೆ. ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ, ನಭಾ ನಟೇಶ್, ರಶ್ಮಿಕಾ ಮಂದಣ್ಣ ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ನಟಿಯರಿದ್ದಾರೆ. ಇದೇ ಸಾಲಿಗೆ ಸೇರುವ ಮತ್ತೊಬ್ಬ ನಟಿ ಮಂಗಳೂರಿನ ಬೆಡಗಿ ಕೃತಿ ಶೆಟ್ಟಿ ಅವರು. ಇವರು ಹುಟ್ಟಿ ಬೆಳೆದದ್ದು ನಮ್ಮ ತುಳುನಾಡಿನಲ್ಲೆ ಆದರೂ ಇಂದು ಕೃತಿ ಶೆಟ್ಟಿ ಅವರು ಗುರುತಿಸಿಕೊಂಡಿರುವುದು ತೆಲುಗು ಚಿತ್ರರಂಗದಲ್ಲಿ, ಬಹಳ ಚಿಕ್ಕ ವಯಸ್ಸಿಗೆ ಬಹಳ ಬೇಗನೆ ಸ್ಟಾರ್ ಪಟ್ಟಕ್ಕೆ ಏರಿದ್ದಾರೆ ಕೃತಿ ಶೆಟ್ಟಿ. ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದಾಗ, ನಿರೂಪಕರು ಮಾಡಿದ ಒಂದು ಎಡವಟ್ಟಿನಿಂದ ನಟಿ ಕೃತಿ ಶೆಟ್ಟಿ ವೇದಿಕೆಯ ಮೇಲೆಯೇ ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ..

ನಟಿ ಕೃತಿ ಶೆಟ್ಟಿ ಬಣ್ಣದ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದ್ದು, ತೆಲುಗಿನ ಉಪ್ಪೇನ ಸಿನಿಮಾ ಮೂಲಕ. ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬದ ಕುಡಿ, ವೈಷ್ಣವ್ ತೇಜ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾಗೆ, ಕೃತಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡರು. ಈ ಸಿನಿಮಾ ದೊಡ್ಡ ಹಿಟ್ ಆಯಿತು. ಕೃತಿ ಶೆಟ್ಟಿ ಅವರ ಮುಗ್ಧ ಹಳ್ಳಿ ಹುಡುಗಿಯ ಪಾತ್ರಕ್ಕೆ ಸಿನಿಪ್ರಿಯರು ಫಿದಾ ಆಗಿದ್ದರು. ಬೇಬಮ್ಮ ಎಂದೇ ತೆಲುಗು ನಾಡಿನಲ್ಲಿ ಫೇಮಸ್ ಆದರು ಕೃತಿ. ಮೊದಲ ಸಿನಿಮಾದ ಯಶಸ್ಸು ಕೃತಿ ಅವರಿಗೆ ಅತಿದೊಡ್ಡ ಅಭಿಮಾನಿ ಬಳಗವನ್ನು ಸಹ ತಂದುಕೊಟ್ಟಿತು. 20 ರ ಆಸುಪಾಸಿನಲ್ಲಿರುವ ಈ ನಟಿ ಇಂದು ತೆಲುಗಿನಲ್ಲಿ ಸ್ಟಾರ್ ಪಟ್ಟಕ್ಕೇರಿದ್ದಾರೆ.

ಉಪ್ಪೇನ ಸಿನಿಮಾ ನಂತರ ಇವರಿಗೆ ಒಂದಾದ ಮೇಲೊಂದು ಬಹಳಷ್ಟು ಆಫರ್ ಗಳು ಬರುತ್ತಲೇ ಇದೆ. ಉಪ್ಪೇನ ಬಳಿಕ ತೆಲುಗಿನ ಸ್ಟಾರ್ ನಟ ನಾಗಾರ್ಜುನ ಮತ್ತು ಅವರ ಮಗ ಜೊತೆಯಾಗಿ ನಟಿಸಿದ, ಬಂಗಾರ್ರಾಜು ಸಿನಿಮಾದಲ್ಲಿ ನಾಯಕಿಯಾದರು ಕೃತಿ, ಈ ಸಿನಿಮಾ ಕೂಡ ಸೂಪರ್ ಹಿಟ್ ಆಯಿತು. ಅದಾದ ಬಳಿಕ ನಟ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಶ್ಯಾಮ್ ಸಿಂಘಾ ಸಿನಿಮಾದ ಮೂವರು ನಾಯಕಿಯರಲ್ಲಿ ಕೃತಿ ಅವರದ್ದು ಸಹ ಮುಖ್ಯಪಾತ್ರವಾಗಿತ್ತು, ಈ ಸಿನಿಮಾ ಸಹ ಕೃತಿ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಪ್ರಸ್ತುತ ಕೃತಿ ಅವರ ಕೈಯಲ್ಲಿ 8 ರಿಂದ 9 ಸಿನಿಮಾಗಳಿವೆ.

ಅತಿಕಡಿಮೆ ಸಮಯದಲ್ಲಿ ಇಷ್ಟೆಲ್ಲಾ ಅವಕಾಶಗಳು ಮತ್ತು ಅಭಿಮಾನಿ ಬಳಗ ಗಳಿಸಿಕೊಂಡಿದ್ದಾರೆ ಕೃತಿ. ಸಿನಿಮಾ ನಟಿಯರು ಎಂದಮೇಲೆ ಚಿತ್ರೀಕರಣ, ಸಂದರ್ಶನಗಳು ಕಾಮನ್. ಕೃತಿ ಅವರು ಸಹ ಸಾಕಷ್ಟು ಸಂದರ್ಶನದಲ್ಲಿ ಪಾಲ್ಗೊಳ್ಳುತ್ತಾರೆ. ಇತ್ತೀಚೆಗೆ ಅವರು ತಮಿಳು ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದರು, ಕಾರ್ಯಕ್ರಮ ಚೆನ್ನಾಗಿಯೇ ಸಾಗುತ್ತಿದ್ದು, ಇಬ್ಬರು ನಿರೂಪಕರಿದ್ದ ಶೋನಲ್ಲಿ ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಕೃತಿ ಚೆನ್ನಾಗಿಯೇ ಉತ್ತರ ಕೊಡುತ್ತಾ, ಶೋ ಮಾಜವಾಗಿಯೇ ಸಾಗುತ್ತಿತ್ತು, ಆದರೆ ನಿರೂಪಕರು ಇದ್ದಕ್ಕಿದ್ದ ಹೊಡೆದಾಡಿಕೊಳ್ಳಲು ಶುರು ಮಾಡಿದರು. ಅವರ ವರ್ತನೆ ನೋಡಿ ದಿಢೀರನೆ ಕೃತಿ ಅವರಿಗೆ ಆಶ್ಚರ್ಯವಾಯಿತು.

ನಿರೂಪಕರು ಜಗಳ ನಿಲ್ಲಿಸದೆ ಇನ್ನು ಹೆಚ್ಚು ಹೊಡೆದಾಡಿಕೊಳಲು ಶುರು ಮಾಡಿದರು, ಅದನ್ನು ನೋಡಿ ಒಂದು ಕ್ಷಣ ಕೃತಿ ಅವರು ಭಯಗೊಂಡರು, ಕೃತಿ ಅವರ ಮುಖಭಾವ ನೋಡಿ, ಅವರಿಗೆ ಭಯ ಆಗಿರುವುದನ್ನು ಅರಿತ ನಿರೂಪಕರು, ಆ ರೀತಿ ಮಾಡಿದ್ದು ತಮಾಷೆಗಾಗಿ, ಪ್ರಾಂಕ್ ಮಾಡಿದ್ದು ಎಂದು ಹೇಳುತ್ತಾರೆ. ಇದನ್ನು ಕೇಳಿ ಕೃತಿ ಅವರಿಗೆ ಯಾವ ರೀತಿ ರಿಯಾಕ್ಟ್ ಮಾಡಬೇಕು ಗೊತ್ತಾಗದೆ, ಸ್ಪೋರ್ಟಿವ್ ಆಗಿಯೇ ತೆಗೆದುಕೊಂಡು, ಪ್ರಾಂಕ್ ಎಂದು ಗೊತ್ತೇ ಆಗಲಿಲ್ಲ, ನಿಜಕ್ಕೂ ಆಶ್ಚರ್ಯ ಆಯ್ತು ಎಂದು ಹೇಳುತ್ತಾರೆ. ಆದರೆ ಅವರ ಕಣ್ಣಂಚಲ್ಲಿ ನೀರು ಬರಲು ಶುರುವಾಗುತ್ತದೆ.

ಕೃತಿ ಶೆಟ್ಟಿ ಸೆನ್ಸಿಟಿವ್ ಸ್ವಭಾವ ಹೊಂದಿರುವ ಹುಡುಗಿ ಆಗಿರುವ ಕಾರಣ, ಆ ರೀತಿಯ ಜಗಳ, ಹೊಡೆದಾಡಿಕೊಳ್ಳುವುದನ್ನು ನೋಡಿ, ಭಯಗೊಂಡ ಅವರಿಗೆ, ಭಯಕ್ಕೆ ಕಣ್ಣೀರು ಬಂದಿದೆ. ಸಂದರ್ಶನದಲ್ಲಿ ನಡೆದ ಈ ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ನಿರೂಪಕರ ಅದೊಂದು ಎಡವಟ್ಟಿನಿಂದ ಈ ಸ್ಟಾರ್ ನಟಿ ಹೆದರಿ ಅಳುವ ಹಾಗೆ ಆಗಿದೆ.