ಸಿಹಿ ಸುದ್ದಿ ಕೊಟ್ಟ ಕೃಷ್ಣ ಮಿಲನಾ ನಾಗರಾಜ್..

2019ರಲ್ಲಿ ರಿಲೀಸ್ ಆಗಿ ಥಿಯೇಟರ್ ಗಳಲ್ಲಿ ಠುಸ್ ಆಗಿದ್ದ ಲವ್ ಮಾಕ್ಟೇಲ್ ಚಿತ್ರ ಓಟಿಟಿಯಲ್ಲಿ ಭರ್ಜರಿಯಾಗಿ ಓಡಿತ್ತು. ಚಿತ್ರದ ಒಂದೊಂದು ಡೈಲಾಗ್ ಕೂಡ ಪ್ರತಿಯೊಬ್ಬರ ಬಾಯಲ್ಲೂ ಓಡಾಡುತ್ತಿತ್ತು. ಇನ್ನು ಮೊದ ಮೊದ ಸಿನಿಮಾದ ಹಾಡಿನಿಂದಲೇ ಸೆಳೆದ ಚಿತ್ರದಲ್ಲಿ ನಿಧಿಮಾ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಸಾಲು ಸಾಲು ಸಿನಿಮಾಗಳಲ್ಲಿ ಸೋತಿದ್ದ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೈಲ್ ಮಾಡಿ ಹಿಟ್ ಆಗಿದ್ದರು.

ಆಗಷ್ಟೇ ಲಾಕ್ ಡೌನ್ ಆಗಿತ್ತು. ಮನೆಯಲ್ಲಿ ಜನರಿಗೆ ಹೊತ್ತು ಕಳೆಯುವುದೇ ಒಂದು ಸವಾಲಾಗಿತ್ತು. ಆಗ ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ನೋಡುವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗಲು ಶುರುವಾಗಿತ್ತು. ಆಗ ಅಮೆಜಾನ್ ಪ್ರೈಮ್ ನಲ್ಲಿ ಕನ್ನಡದ ಚಿತ್ರಗಳು ಇದ್ದದ್ದು ತೀರಾ ಕಡಿಮೆ. ಆಗಷ್ಟೇ ರಿಲೀಸ್ ಆಗಿ ಸೋತಿದ್ದ ದಿಯಾ ಮತ್ತು ಲವ್ ಮಾಕ್ಟೇಲ್ ಚಿತ್ರವನ್ನು ಅಮೇಜಾನ್ ಪ್ರೈಮ್ ಖರೀದಿಸಿತ್ತು. ಈ ಎರಡೂ ಚಿತ್ರಗಳೂ ದಿನ ದಿನಕ್ಕೂ ಹಿಟ್ ಆಗಲು ಶುರುವಾಯ್ತು. ಚಿತ್ರ ನೋಡುಗರ ಸಂಖ್ಯೆ ಹೆಚ್ಚಾಯ್ತು. ಎಲ್ಲರ ಬಾಯಲ್ಲೂ ನಿಧಿಮಾ ಹೆಸರು ಹರಿದಾಡಿತ್ತು. ಓಟಿಟಿಯಲ್ಲಿ ಸಕ್ಸಸ್ ಕಂಡ ದಿಯಾ ಹಾಗೂ ಲವ್ ಮಾಕ್ಟೇಲ್ ಚಿತ್ರ ಸಿಕ್ಕಾಪಟ್ಟೆ ಫೇಮಸ್ ಕೂಡ ಆಯ್ತು.

ಲವ್ ಮಾಕ್ಟೇಲ್ ಚಿತ್ರದಲ್ಲಿ ನಟಿಸಿದವರಾರೂ ಟಾಪ್ ಮೋಸ್ಟ್ ನಟ-ನಟಿಯರಲ್ಲ. ಇದರಲ್ಲಿ ಹೊಸ ಪ್ರತಿಭೆಗಳೂ ಇದ್ದರು. ಚಟ-ಪಟ ಅಂತ ಮಾತನಾಡೋ ಅಂಕಿತ. ಮೌನವಾಗಿ ಉತ್ತರಿಸಿ ಜನ ಮನ ಗೆದ್ದ ಮಿಲನಾ ಹೊಸ ನಟಿಯರು. ಇನ್ನು ಡಾರ್ಲಿಂಗ್ ಕೃಷ್ಣ ನಟಿಸಿದ್ದರ ಜೊತೆಗೆ ಈ ಚಿತ್ರದ ಡೈರೆಕ್ಷನ್ ಅನ್ನು ಕೂಡ ಮಾಡಿದ್ದರು. ಚಿತ್ರ ಹಿಟ್ ಆದ್ಮೇಲೆ ತೆರೆ ಮೇಲೆ ಜೋಡಿಯಾಗಿದ್ದ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ನಿಜ ಜೀವನದಲ್ಲಿ ಒಟ್ಟಿಗೆ ಹೆಜ್ಜೆ ಇಡಲು ಶುರು ಮಾಡಿದ್ದರು. ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಮದುವೆಯಾದರೆ ಚೆಂದ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಅದನ್ನು ನಿಜ ಮಾಡಲು ಇವರಿಬ್ಬರೂ ಮುಂದಾದರು. ಮೊದಲು ಎಂಗೇಜ್ಮೆಂಟ್ ಅಭಿಮಾನಿಗಳಿಗೆ ಶಾಕ್ ಕೊಟ್ಟರು.

2021ರ ವ್ಯಾಲೆಂಟೈನ್ಸ್ ಡೇ ದಿನ ಸಪ್ತಪದಿ ತುಳಿದ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಸದ್ಯ ಸುಖವಾಗಿ ಜೀವನ ನಡೆಸುತ್ತಿದ್ದಾರೆ. ಇವರಿಬ್ಬರು ಮದುಯಾಗಿದ್ದಕ್ಕೆ ಅಭಿಮಾನಿಗಳು ಡಬಲ್ ಖುಷಿಪಟ್ಟಿದ್ದಾರೆ. ಇನ್ನು ಲವ್ ಮಾಕ್ಟೇಲ್ ಸಕ್ಸಸ್ ಆದ ಮೇಲೆ ಈ ಚಿತ್ರದ ಮತ್ತೊಂದು ಭಾಗವನ್ನು ಚಿತ್ರೀಕರಿಸಲು ಡಾರ್ಲಿಂಗ್ ಕೃಷ್ಣ ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಮುಹೂರ್ತ ನೆರವೇರಿಸಿದ ಜೋಡಿ ಶೂಟಿಂಗ್ ನಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದರು. ಈ ಚಿತ್ರದಲ್ಲೂ ಡಾರ್ಲಿಂಗ್ ಕೃಷ್ಣನಿಗೆ ಇಬ್ಬರು ನಾಯಕಿ ನಟಿಯರು ಎಂದು ಹೇಳಲಾಗಿತ್ತು.

ಅದರಂತೆಯೇ, ಜೊತೆ ಜೊತೆಯಲಿ ಸೀರಿಯಲ್ ಮೂಲಕ ಅನು ಸಿರಿಮನೆಯಾಗಿ ಎಂಟ್ರಿ ಕೊಟ್ಟ ಮೇಘಾ ಶೆಟ್ಟಿ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಒಂದೇ ಧಾರವಾಹಿ ಮೂಲಕ ಹಿಟ್ ಆಗಿ ಸಿಕ್ಕಾಪಟ್ಟೆ ಅಭಿಮಾನಿಗಳ ಬಳಗವನ್ನು ಅನು ಸಿರಿಮನೆ ಹೊಂದಿದ್ದಾರೆ. ಇನ್ನು ಈ ಚಿತ್ರದ ಚಿತ್ರೀಕರಣ ಮುಗಿದ್ದು. ಇದಕ್ಕೆ ಯು ಸರ್ಟಿಫಿಕೇಟ್ ಕೂಡ ದೊರೆತಿದೆ. ಈ ವಿಚಾರವನ್ನು ಹಂಚಿಕೊಂಡಿರುವ ಕೃಷ್ಣ ಸಂಓಷ ವ್ಯಕ್ತಪಡಿಸಿದ್ದಾರೆ.. ಈಗಿನ ಸಿನಿಮಾಗಳು ಯು ಪ್ರಮಾಣಪತ್ರ ಪಡೆಯುವುದು ಕೊಂಚ ಕಷ್ಟವೇ ಸರಿ. ಆದರೆ ಲವ್‌ ಮಾಕ್ಟೈಲ್‌ ಸಿನಿಮಾ ಯು ಸರ್ಟೀಫಿಕೇಟ್‌ ಪಡೆದಿದ್ದು ಎಲ್ಲಾ ವಯಸ್ಸಿನವರು ಸಿನಿಮಾ ನೋಡಬಹುದಾಗಿದೆ. ಇನ್ನು ಚಿತ್ರ ತೆರೆ ಮೇಲೆ ಬರುವುದೊಂದೇ ಬಾಕಿ. ಲವ್ ಮಾಕ್ಟೈಲ್ ಸಿನಿಮಾದ ಅಭಿಮಾನಿಗಳು ಲವ್ ಮಾಕ್ಡೈಲ್-2 ಚಿತ್ರ ನೋಡಲು ಕಾಯುತ್ತಿದ್ದಾರೆ. ಸಿನಿಮಾ ಹೇಗೆ ಮೂಡಿದೆ ಎಂದು ನೋಡಲು ಕಾತುರರಾಗಿದ್ದಾರೆ.