ಕನ್ನಡದ ಪ್ರಖ್ಯಾತ ನಟಿ ಕಿಶೋರಿ ಬಲ್ಲಾಳ್ ಇನ್ನಿಲ್ಲ.. ಏನಾಗಿತ್ತು ಗೊತ್ತಾ?

ಕನಡದ ಪ್ರಖ್ಯಾತ ನಟಿ.. ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಅವರು ಇಂದು ಕೊನೆಯುಸಿರೆಳೆದಿದ್ದಾರೆ..

ಹೌದು ಕನ್ನಡ ಕಲಾರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ಹಿರಿಯ ತಾರೆಯೊಂದು ಮರೆಯಾಗಿದೆ.. ಕಿಶೋರಿ ಬಲ್ಲಾಳ್ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಲಳುತಿದ್ದರು.. ಉಸಿರಾಟದ ತೊಂದರೆ ತೀವ್ರವಾಗಿ ಕಾಡತೊಡಗಿತು..

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.. ಆದರೆ ಇಂದು ಬೆಂಗಳೂರಿನ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ..

1960 ರಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದ ಕಿಶೋರಿ ಬಲ್ಲಾಳ್ ಅವರು ಸುಮಾರು 80ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ಹಾಗೂ ಜಾಹಿರಾತುಗಳಲ್ಲಿಯೂ ಕಾಣಿಸಿಕೊಂಡಿದ್ದರು..

ಅಷ್ಟೇ ಅಲ್ಲದೆ ಹಿಂದಿ ಚಿತ್ರರಂಗದಲ್ಲಿಯೂ ಕುಶೋರಿ ಬಲ್ಲಾಳ್ ಅವರು ಶಾರುಕ್ ಖಾನ್ ಅವರ ಜೊತೆ ಅಭಿನಯಿಸಿದ್ದರು.. ಹಿರಿಯ ನಟಿಯ ನಿಧನಕ್ಕೆ ಕನ್ನಡ ಚಲನಚಿತ್ರ ಕಲಾವಿದರು ಹಾಗೂ ಕಿರುತೆರೆ ಕಲಾವಿದರು ಸಂತಾಪ ಸೂಚಿಸಿದ್ದಾರೆ.. ಕನ್ನಡದ ಹೆಮ್ಮೆಯ ಕಲಾವಿದೆ ಕಿಶೋರಿ ಬಲ್ಲಳ್ ಅವದ ಆತ್ಮಕ್ಕೆ ಶಾಂತಿ ಸಿಗಲಿ..