ಸಾಲು ಸಾಲು ಸಂಭ್ರಮ.. ಒಂದೇ ದಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆಯ ಮೂರು ಜೋಡಿಗಳು..

ಇದೀಗ ಎಲ್ಲೆಡೆ ಮದುವೆ ಸಂಭ್ರಮ ಮೊಳಗುತ್ತಿದೆ. ನಮ್ಮ ಕನ್ನಡ ಕಿರುತೆರೆ ಕಲಾವಿದರ ಮನೆಯಲ್ಲಿ ಮದುವೆ ಸಂಭ್ರಮ ಸಡಗರ ನಡೆಯುತ್ತಿದೆ. ಈ ಕೋವಿಡ್ ಸಮಸ್ಯೆ ಮುಗಿದ ಬಳಿಕ ಸಾಕಷ್ಟು ಕಲಾವಿದರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಆಗುತ್ತಿರುವ ಜೋಡಿಗಳ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ಇದು ಈ ಕಲಾವಿದರ ಅಭಿಮಾನಿಗಳಿಗೂ ಸಂತೋಷ ತರುತ್ತಿದೆ ಎನ್ನುವುದು ವಿಶೇಷ. ಕಿರುತೆರೆ ಜೋಡಿಗಳ ಮದುವೆ ಅಂದ್ರೆ, ಅಲ್ಲಿ ಅದ್ಧೂರಿತನ, ಬರುವ ಗೆಸ್ಟ್ ಗಳು, ಶಾಸ್ತ್ರ ಸಂಪ್ರದಾಯ ನಡೆಯುವ ರೀತಿ ಎಲ್ಲವೂ ಸಹ ಗ್ರ್ಯಾಂಡ್ ಆಗಿಯೇ ಇರುತ್ತದೆ. ಇದೀಗ ಮೂರು ಕಿರುತೆರೆ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಆ ಜೋಡಿಗಳು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..

ಇತ್ತೀಚೆಗೆ ಕೆಲವೇ ದಿನಗಳ ಹಿಂದೆ ಲಕ್ಷ್ಮಿ ಬಾರಮ್ಮ ಧಾರಾವಹಿಯಿಂದ ಮನೆಮಾತಾಗಿದ್ದ ನಟಿ ರಶ್ಮಿ ಪ್ರಭಾಕರ್ ತಮ್ಮ ಬಾಲ್ಯದ ಗೆಳೆಯನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇತ್ತೀಚೆಗೆ ಕಾವ್ಯಂಜಲಿ ಧಾರಾವಹಿಯಿಂದ ಬಹಳ ಪಾಪ್ಯುಲರ್ ಆಗಿದ್ದ ನಟಿ ದೀಪಾ ಜಗದೀಶ್ ಅವರು ಸಾಗರ್ ಪುರಾಣಿಕ್ ಅವರೊಡನೆ ಮದುವೆಯಾದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿರುವ ಸುನೀಲ್ ಪುರಾಣಿಕ್ ಅವರ ಮಗ ಸಾಗರ್ ಪುರಾಣಿಕ್. ದೀಪಾ ಮತ್ತು ಸಾಗರ್ ಇಬ್ಬರದ್ದು ಪ್ರೇಮ ವಿವಾಹ. ಇವರಿಬ್ಬರ ಪ್ರೀತಿಯನ್ನು ಹಿರಿಯರು ಒಪ್ಪಿ ಸಂತೋಷವಾಗಿ ಮದುವೆ ಮಾಡಿಕೊಟ್ಟಿದ್ದಾರೆ.

ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಮತ್ತೊಬ್ಬ ಕಿರುತೆರೆ ಸೆಲೆಬ್ರಿಟಿ ನಾಗಿಣಿ2 ಧಾರವಾಹಿ ಖ್ಯಾತಿಯ ನಿನಾದ್ ಹರಿತ್ಸ. ನಾಗಿಣಿ2 ಧಾರಾವಾಹಿಯಲ್ಲಿ ತ್ರಿಶೂಲ್ ಪಾತ್ರದ ಮೂಲಕ ನಿನಾದ್ ಹೆಸರು ಗಳಿಸಿದ್ದಾರೆ. ತ್ರಿಶೂಲ್ ಎಂದೇ ಜನರು ಇವರನ್ನು ಗುರುತಿಸುವ ಹಾಗೆ ಆಗಿದೆ. ನಿನಾದ್ ಅವರು ಬಹುಕಾಲದ ಗೆಳತಿ ರಮ್ಯಾ ಅವರೊಡನೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರದ್ದು ಸಹ ಲವ್ ಮ್ಯಾರೇಜ್. ಕಾಮನ್ ಫ್ರೆಂಡ್ಸ್ ಮೂಲಕ ಇವರಿಬ್ಬರ ಪರಿಚಯವಾಯಿತು. ಬಳಿಕ ಇಬ್ಬರ ನಡುವೆ ಪ್ರೀತಿ ಮೂಡಿ, ಮದುವೆಯಾಗಲು ನಿರ್ಧಾರ ಮಾಡಿದರು. ಇವರಿಬ್ಬರ ಪ್ರೀತಿಯನ್ನು ಒಪ್ಪಿದ ಕುಟುಂಬದವರು ಶಾಸ್ತ್ರೋಕ್ತವಾಗಿ ಮದುವೆ ಮಾಡಿದ್ದಾರೆ.

ನಿನಾದ್ ಮತ್ತು ರಮ್ಯಾ ನಿಶ್ಚಿತಾರ್ಥ ಇತ್ತೀಚೆಗೆ ನಡೆಯಿತು. ಮದುವೆ ಇಂದು ನಡೆದಿದ್ದು, ಕೆಲ ದಿನಗಳ ಹಿಂದೆಯೇ ನಿನಾದ್ ಮನೆಯಲ್ಲಿ ಸಂಭ್ರಮ ಶುರುವಾಗಿತ್ತು. ನಿನಾದ್ ರಮ್ಯಾ ಮದುವೆಯ ಮೆಹಂದಿ ಸಂಗೀತ್ ಕಾರ್ಯಕ್ರಮಕ್ಕೆ ನಾಗಿಣಿ2 ನಾಯಕಿ ನಮ್ರತಾ ಗೌಡ ಬಂದಿದ್ದರು. ನಿನಾದ್ ರಮ್ಯಾ ಮದುವೆಗೆ ಕೆಲವು ಸ್ಯಾಂಡಲ್ ಸೆಲೆಬ್ರಿಟಿಗಳು ಸಹ ಬಂದಿದ್ದರು. ಅಭಿಮಾನಿಗಳು ಸಹ ಇವರಿಬ್ಬರ ಮದುವೆ ವಿಚಾರ ತಿಳಿದು ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡುತ್ತಿದ್ದಾರೆ..

ವೈವಾಹಿಕ ಜೀವನಕ್ಕೆ ಕಾಲಿಟ್ಟ ಮತ್ತೊಂದು ಸೆಲೆಬ್ರಿಟಿ ಜೋಡಿ ಐಶ್ವರ್ಯ ಸಾಲಿಮಠ ಮತ್ತು ವಿನಯ್. ಐಶ್ವರ್ಯ ಅವರು ಅಗ್ನಿಸಾಕ್ಷಿ, ಸೇವಂತಿ ಧಾರಾವಾಹಿಗಳ ಮೂಲಕ ಫೇಮಸ್ ಆಗಿದ್ದಾರೆ. ಇವರನ್ನು ಮದುವೆ ಆಗಿರುವ ವಿನಯ್ ಅವರು ಮಹಾಸತಿ ಧಾರವಾಹಿ ಮೂಲಕ ಮನೆಮಾತಾಗಿದ್ದದು. ಈ ಜೋಡಿಗೆ ಕೆಲವು ವರ್ಷಗಳಿಂದ ಪರಿಚಯ ಇದ್ದು, ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರ ಮದುವೆ ಉತ್ತರ ಕರ್ನಾಟಕದಲ್ಲಿ ನಡೆದಿದೆ. ಅಲ್ಲಿನ ಶೈಲಿಯಲ್ಲಿ ಶಾಸ್ತ್ರ ಸಂಪ್ರದಾಯದ ಪ್ರಕಾರ ಐಶ್ವರ್ಯ ವಿನಯ್ ಮದುವೆ ನಡೆದಿದೆ. ಈ ಜೋಡುಗ ಸಂಗೀತ್, ಆರತಕ್ಷತೆ ಕಾರ್ಯಕ್ರಮ ಮತ್ತು ಮದುವೆ ಎಲ್ಲವೂ ಅದ್ಧೂರಿಯಾಗಿ ನಡೆದಿದೆ..

ವಿನಯ್ ಅವರು ಧಾರವಾಡದಾಗ್ ಒಂದ್ ಲವ್ ಸ್ಟೋರಿ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ, ಇದಕ್ಕಿಂತ ಮೊದಲು ಜೀವನದಿ, ಮಹಾದೇವಿ, ಲಕ್ಷ್ಮಿ ಸ್ಟೋರ್ಸ್ ಹಾಗೂ ಇನ್ನಿತರ ಧಾರವಾಹಿಗಳಲ್ಲಿ ನಟಿಸಿದ್ದರು. ಐಶ್ವರ್ಯ ಅವರು ಕನ್ನಡ ಮಾತ್ರವಲ್ಲದೆ ತಮಿಳು ಧಾರವಾಹಿಯಲ್ಲಿ ಸಹ ನಟಿಸಿ, ಖ್ಯಾತಿ ಪಡೆದಿದ್ದಾರೆ. ಚಂದು ಬಿ ಗೌಡ ನಾಯಕನಾಗಿದ್ದ ತಮಟೆ ಸಿನಿಮಾದಲ್ಲಿ ಐಶ್ವರ್ಯ ಸಾಲಿಮಠ ನಾಯಕಿಯಾಗಿದ್ದರು. ಹಾಗೂ ಯಾರಿವಳು ಮತ್ತು ನಾಗಕನ್ನಿಕೆ ಧಾರಾವಾಹಿಗೆ ಕಂಠದಾನ ಕಲಾವಿದೆಯಾಗಿ ಕೆಲಸ ಮಾಡಿದ್ದಾರೆ.

ಹಾಗೂ, ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಶೋ ಮೂಲಕ ಖ್ಯಾತಿ ಗಳಿಸಿದ್ದ ಸದಾ ಅವರು ಸಹ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಮದುವೆ ಸೀಸನ್ ನಲ್ಲಿ ಸೆಲೆಬ್ರಿಟಿಗಳ ಮದುವೆ ಜೋರಾಗಿಯೇ ನಡೆಯುತ್ತಿದೆ. ಇವರೆಲ್ಲರ ಜೀವನವು ಸದಾ ಕಾಲ ಚೆನ್ನಾಗಿರಲಿ ಎಂದು ಹಾರೈಸೋಣ.