ಕೈಗೆ ಕ್ವಾರಂಟೈನ್ ಸೀಲ್ ಹಾಕಿಕೊಂಡು ಕೇರಳ ಸುತ್ತಿದ ಕನ್ನಡ ಕಿರುತೆರೆಯ ಕಲಾವಿದರು.. ಕಾರಣವೇನು ಗೊತ್ತಾ?

ಕೊರೊನಾ ಕಾರಣದಿಂದಾಗಿ ಲಾಕ್ ಡೌನ್ ಆದ ಕಾರಣ ಕಲಾವಿದರು ಕೆಲ ತಿಂಗಳು ಹೊರಗೆಲ್ಲೂ ಹೋಗದೇ ಕುಟುಂಬದೊಂದಿಗೇ ಕಾಲ ಕಳೆದಿದ್ದರು. ಆದರ್ವ್ ಸದಾ ಸುತ್ತಾಟದ ಹವ್ಯಾಸವಿದ್ದವರಿಗೆ ಕಾಲು ಕಟ್ಟಿ ಹಾಕಿದಂತಾಗಿತ್ತು.. ಇದೀಗ ಲಾಕ್ ಡೌನ್ ಸಡಿಲ ಗೊಂಡ ನಂತರ ಸಾಲು ಸಾಲು ಕಲಾವಿದರು ಪ್ರವಾಸ ಟ್ರೆಕ್ಕಿಂಗ್ ಹೀಗೆ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.. ಹೌದು ಕೆಲ ದಿನಗಳ ಹಿಂದಷ್ಟೇ ವಿಜಯ ರಾಘವೇಂದ್ರ ಅವರು ಕುಟುಂಬ ಸಮೇತ ಚಿಕ್ಕಮಗಳೂರು‌ಪ್ರವಾಸ ಕೈಗೊಂಡಿದ್ದರು.. ಜೊತೆಜೊತೆಯಲಿ ಧಾರಾವಾಹಿಯ ನಟ ಅನಿರುದ್ಧ್ ಅವರೂ ಸಹ ಚಿಕ್ಕಮಗಳೂರು ಪ್ರವಾಸ ಕೈಗೊಂಡಿದ್ದರು..

ಇನ್ನು ಲಕ್ಷ್ಮೀ ಬಾರಮ್ಮ ಧಾರಾವಾಹೊಯ ಕಲಾವಿದರು ಹಾಗೂ ಮತ್ತವರ ಸ್ನೇಹಿತರು ವೀಕೆಂಡ್ ಗಳಲ್ಲಿ ಟ್ರೆಕ್ಕಿಂಗ್ ಗೆ ತೆರಳುತ್ತಿದ್ದರು.. ಶಿವಗಂಗೆ ಮಾಕಳಿ ದುರ್ಗ ಹೀಗೆ ಕೆಲ ಸ್ಥಳಗಳಿಗೆ ಸ್ನೇಹಿತರೊಡನೆ ಪ್ರವಾಸ ಮಾಡುತ್ತಿದ್ದು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು..

ತಮ್ಮದೇ ಆದ ಪೀಸ್ ಫ್ಯಾಕ್ಟರಿ 2020 ಎಂಬ ಹೆಸರನ್ನು ಇಟ್ಟುಕೊಂಡು ನಟ ಚಂದನ್, ದಿಲೀಪ್ ಆರ್ ಶೆಟ್ಟಿ, ಕವಿತಾ ಗೌಡ, ನೇಹಾ ಗೌಡ, ಸೋನು ಗೌಡ, ಬಿಗ್ ಬಾಸ್ ಖ್ಯಾತಿಯ ಕಿಶನ್, ನೇಹಾ ಗೌಡ ಅವರ ಪತಿ ಚಂದನ್, ರಶ್ಮಿ ಪ್ರಭಾಕರ್ ಹಾಗೂ ಕೆಲ ಸ್ನೇಹಿತರು ವಾರಂತ್ಯದಲ್ಲಿ ಕೆಲಸದಿಣ್ದ ಬಿಡುವು ಮಾಡಿಕೊಂಡು ಪ್ರವಾಸ ಕೈಗೊಂಡಿದ್ದರು..

ಆದರೆ ಮೊನ್ನೆ ಮೊನ್ನೆಯಷ್ಟೇ ಕೇರಳದ ವೈನಾಡಿಗೆ ಈ ತಂಡ ಪ್ರವಾಸಕ್ಕೆಂದು ತೆರಳಿತ್ತು.. ಆದರೆ ಹೊರ ರಾಜ್ಯಕ್ಕೆ ಹೋದ ಕಾರಣ ಅಲ್ಲಿ ಇವರ ಎಲ್ಲರ ಕೈಗಳಿಗೆ ಕ್ವಾರಂಟೈನ್ ಸೀಲ್ ಗಳನ್ನು ಹಾಕಲಾಗಿತ್ತು.. ಹೌದು ಚಂದನ್ ಕವಿತಾ ನೇಹಾ ದಿಲೀಪ್‌ ಕಿಶನ್ ಸೇರಿದಂತೆ ಹದಿಮೂರು ಜನ ಸ್ನೇಹಿತರು ಕೇರಳಾಗೆ ತೆರಳಿದ್ದರು.. ಆದರೆ ಕೇರಳಕ್ಕೆ ಪ್ರವೇಶ ಮಾಡುತ್ತಿದ್ದ ಹಾಗೆ ಇವರೆಲ್ಲರಿಗೂ ಕೊರೊನಾ ವೈರಸ್ ಪರೀಕ್ಷೆ ಮಾಡಲಾಗಿತ್ತು.. ಎಲ್ಲರ ಕೈಗಳಿಗೂ ಕ್ವಾರಂಟೈನ್ ಸೀಲ್ ಕೂಡ ಹಾಕಿದ್ದಾರೆ.. ಈ ಸೀಲ್ ಇಟ್ಟುಕೊಂಡು ಎಲ್ಲರೂ ಹೋಟೆಲ್ ಪ್ರವೇಶ ಮಾಡಿದ್ದರು.. ಇದನ್ನು ನೋಡಿದ ಆಟೋ ಡ್ರೈವರ್ ಸಾಮಾಜಿಕ ಜವಾಬ್ದಾರಿ ಮೆರೆದು ಅಲ್ಲಿನ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದನು.. ಹೀಗಾಗಿ ಪೊಲೀಸರು ಬಂದು ಇವರೆಲ್ಲರನ್ನು ವಿಚಾರಣೆ ಮಾಡಿ ಫೋನ್ ನಂಬರ್ ಗಳನ್ನು ತೆಗೆದುಕೊಂಡು ಹೋಗಿದ್ದರು.. ಯಾರಿಗಾದರೂ ಕೊರೊನಾ ವೈರಸ್ ಬಂದರೆ ಮಾಹಿತಿ ನೀಡುತ್ತೇವೆ ಎಂಬ ಭರವಸೆ ಕೂಡ ಕೊಡುತ್ತಾರಂತೆ. ಇದು ಅಲ್ಲಿನ ನಿಯಮ.. ಕೊರೊನಾ ನಿಯಂತ್ರಣ ಮಾಡುವಲ್ಲಿ ಕೇರಳ ಈ ರೀತಿ ಬಹಳಷ್ಟು‌ ನಿಯಮಗಳನ್ನು ಮಾಡಿಕೊಂಡಿರುವುದು ನಿಜಕ್ಕೂ ಮೆಚ್ಚುವ ವಿಚಾರವೇ..

ಆನಂತರ ಪೊಲೀಸರಿಗೆ ಪ್ರವಾಸಕ್ಕೆ ಬಂದಿರುವ ಮಾಹಿತಿ ನೀಡಿದ ಈ ಸ್ನೇಹಿತರು.. ನಂತರ ವೈನಾಡಿನ ವೈತಿರಿಯಲ್ಲಿನ ರೆಸಾರ್ಟ್‌ನಲ್ಲಿ ಉಳಿದುಕೊಂಡು ಅಲ್ಲಿನ ಅಕ್ಕಪಕ್ಕದ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿ ಮರಳಿದ್ದಾರೆ.. ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈನಾಡಿನ ಪ್ರವಾಸ ಫೋಟೋಗಳು ವೀಡಿಯೋಗಳು ಹಾಗೂ ಈ ಕ್ವಾರಂಟೈನ್ ಅನುಭವವನ್ನು ಹಂಚಿಕೊಂಡಿದ್ದಾರೆ..

ಸದ್ಯದಲ್ಲಿಯೇ ಲಡಾಕ್ ಗೆ ಪ್ರವಾಸ ಹೋಗಲಿದ್ದಾರಂತೆ ಈ ತಂಡ.. ಹೌದು 2020 ರ ಈ ಕಹಿ ವರ್ಷದಲ್ಲಿ ಏನಾದರೂ ಒಂದಿಷ್ಟು ಒಳ್ಳೆಯ ನೆನಪುಗಳು ಇರಲಿ ಎನ್ನುವ ಕಾರಣಕ್ಕೆ ಪೀಸ್ ಫ್ಯಾಕ್ಟರಿ ಎಂಬ ಹೆಸರನ್ನಿಟ್ಟುಕೊಂಡಿರುವ ಈ ತಂಡ ತಮ್ಮ ಮುಂದಿನ ಪ್ರವಾಸವನ್ನು ಲಡಾಕ್ ಗೆ ಕೈಗೊಳ್ಳಲಿದ್ದಾರಂತೆ.. ಈ ಬಗ್ಗೆ ಮಾತನಾಡಿರುವ ನಟಿ‌ಸೋನು ಗೌಡ ಅವರು ಇದೊಂದು ರೀತಿಯ ಹೊಸ ಅನುಭವ.. ಆದರೆ ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡೇ ಪ್ರವಾಸ ಮಾಡುತ್ತಿದ್ದೇವೆ ಎಂದಿದ್ದಾರೆ..