ಕನ್ನಡತಿ ನಟ ಕಿರಣ್ ರಾಜ್ ತೆಗೆದುಕೊಂಡ ನಿರ್ಧಾರ ನೋಡಿ‌.. ಯಾರ್ ಮಾಡ್ತಾರ್ ಗುರು ಇಂತಾ ಕೆಲಸ.. ನಿಜಕ್ಕೂ ಗ್ರೇಟ್..

ಕಿರುತೆರೆ ಕಲಾವಿದರು ಜನರ ಮನಸ್ಸಿಗೆ ಅವರ ಜೀವನಕ್ಕೆ ಬಹಳ ಬೇಗ ಹತ್ತಿರವಾಗಿ ಬಿಡ್ತಾರೆ ಅನ್ನೋ ಮಾತು ಸತ್ಯ.. ಅದೇ ರೀತಿ ಕನ್ನಡದ ಖ್ಯಾತ ಧಾರಾವಾಹಿಗಳಲ್ಲಿ‌ ಒಂದಾಗಿರುವ ಕನ್ನಡತಿ ಧಾರಾವಾಹಿಯ ಹರ್ಷ ಹಾಗೂ ಭುವಿಗೆ ಕನ್ನಡ ಕಿರುತೆರೆ ಪ್ರೇಕ್ಷಕರು ಅಷ್ಟೇ ಪ್ರೀತಿ ನೀಡಿದ್ದಾರೆಂಬುದು ಸತ್ಯ.. ಆದರೆ ಆ ಪ್ರೀತಿಗೆ ಬದಲಾಗಿ ನಟ ಕಿರಣ್ ರಾಜ್ ನಡೆದುಕೊಳ್ಳುತ್ತಿರುವ ರೀತಿ ನಿಜಕ್ಕೂ ಮೆಚ್ಚುವಂತದ್ದು.. ಹೌದು ಸಾಮಾನ್ಯವಾಗಿ ಸೆಲಿಬ್ರೆಟಿಗಳಿಗೆ ತಮ್ಮ ಹುಟ್ಟಿದ ದಿನ ಸ್ವಲ್ಪ ಹೆಚ್ಚಾಗೇ ಸ್ಪೆಷಲ್.. ಅದರಲ್ಲಿಯೂ ಹುಟ್ಟು ಹಬ್ಬದ ದಿನ ಅಭಿಮಾನಿಗಳಿಂದ ಆಚರಣೆ ಮಾಡಿಸಿಕೊಳ್ಳೋದು ಉಡುಗೊರೆಗಳನ್ನು ಪಡೆಯೋದು ಹೊಸ ವಿಚಾರವೇನೂ ಅಲ್ಲ.. ಆದರೆ ನಟ ಕಿರಣ್ ರಾಜ್ ಅವರು ಮಾಡಿರುವ‌ ಕೆಲಸ ಮಾತ್ರ ಅವರ ದೊಡ್ಡಗುಣವನ್ನು ತೋರುತ್ತದೆ..

ಹೌದು ಕಿರಣ್ ರಾಜ್‌ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿರುವ ನಟ. ಅವರು ನಟಿಸಿರುವ ಕನ್ನಡತಿ ಧಾರಾವಾಹಿ ದೊಡ್ಡ ಯಶಸ್ಸನ್ನು ನೀಡಿದೆ.. ಹಾಗೆಯೇ ಅವರಿಗೆ ದೊಡ್ಡ ಪ್ರಮಾಣದ ಅಭಿಮಾನಿ ಬಳಗವೂ ಈ ಧಾರಾವಾಹಿಯ ಮೂಲಕ ದೊರಕಿತೆನ್ನಬಹುದು‌‌.. ಇನ್ನು ಇದೇ ಜುಲೈ 5 ರಂದು ಕಿರಣ್‌ ರಾಜ್ ಅವರು ಹುಟ್ಟುಹಬ್ಬ ಆಚರಿಸಿಕೊಂಡರು.. ಆದರೆ ಕಳೆದ ವರ್ಷದಿಂದಲೂ ಕಿರಣ್ ತಮ್ಮ ಹುಟ್ಟುಹಬ್ಬವನ್ನು ಬೇರೆಯದ್ದೇ ರೀತಿಯಲ್ಲಿ ಬಹಳ ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಉಡುಗೊರೆ ನೀಡುತ್ತಾರೆ. ಆದರೆ ಇಲ್ಲಿ ಕತೆಯೇ ಬೇರೆ..

ಹೌದು ಕಿರಣ್ ಅವರೇ ತಮ್ಮ ಅಭಿಮಾನಿಗಳಿಗೆ ದುಬಾರಿ ಬೆಲೆಯ ಉಡುಗೊರೆಗಳನ್ನು ಕಳುಹಿಸಿ ಕೊಟ್ಟಿದ್ದಾರೆ.. ಕಿರಣ್ ರಾಜ್ ಆ ನಿಟ್ಟಿನಲ್ಲಿ ಕಳೆದ ವರ್ಷದಿಂದಲೂ ಈ ಅಭ್ಯಾಸವನ್ನು ಮಾಡಿಕೊಂಡು ಬರುತ್ತಿದ್ದು ಹೊಸ ಹೆಜ್ಜೆ ಇಟ್ಟಿದ್ದಾರೆ ಎನ್ನಬಹುದು.. ತಮ್ಮ ಹುಟ್ಟುಹಬ್ಬದ ಅಂಗವಾಗಿ ಅವರು ಅಭಿಮಾನಿಗಳಿಗೆ ಉಡುಗೊರೆಗಳನ್ನು ಕಳುಹಿಸಿಕೊಟ್ಟಿದ್ದಾರೆ.. ಈ ಮೂಲಕ ವಿಭಿನ್ನ ರೀತಿಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರುವ ಕಿರಣ್ ಅವರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.. ಈ ಬಗ್ಗೆ ಈ ಮೊದಲೇ ತಿಳಿಸಿದ್ದ ಕಿರಣ್ ರಾಜ್.. ಜುಲೈ 5 ನನ್ನ ಹುಟ್ಟುಹಬ್ಬವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ನೂರು ದಿನಗಳಿಂದ ಸಾಕಷ್ಟು ಜನ ಅಭಿಮಾನಿಗಳು ಸಿಡಿಪಿ ಹಾಕಿಕೊಳ್ಳುವ ಮೂಲಕ ನನಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಯಗಳನ್ನು ತಿಳಿಸುತ್ತ ಬಂದಿದ್ದಾರೆ. ಅಂತಹ ಅಭಿಮಾನಿಗಳನ್ನು ಗುರುತಿಸಿ ನಾನೇ ಅವರಿಗೆ ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಶೇಷ ಉಡುಗೊರೆ ನೀಡಬೇಕು ಎಂದು ನಿರ್ಧರಿಸಿದ್ದೇನೆ. ಈಗಾಗಲೇ ಅವರಿಗೆ ಉಡುಗೊರೆ ತಲುಪಿಸುವ ವ್ಯವಸ್ಥೆ ಮಾಡಿದ್ದೇನೆ.. ಎಂದಿದ್ದರು..

ಕಿರಣ್ ರಾಜ್ ಅವರ ಅಭಿಮಾನಿಗಳಿಗೆ ಮಾತ್ರ ಉಡುಗೊರೆ ನೀಡುತ್ತಿಲ್ಲ, ಬದಲಿಗೆ ತಮ್ಮ ಹುಟ್ಟುಹಬ್ಬದ ಅಂಗವಾಗಿ ಕರ್ನಾಟಕದ ವಿವಿಧ ಊರುಗಳಲ್ಲಿರುವ ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ಅನ್ನದಾನ, ಬ್ಲಾಂಕೆಟ್‌ ವಿತರಣೆ ಮುಂತಾದ ಉತ್ತಮ ಕಾರ್ಯಗಳನ್ನು ಸಹ ಕಿರಣ್ ರಾಜ್ ಮಾಡಿದ್ದಾರೆ..

ಈ ಹಿಂದೆಯೂ ಕೂಡ ಅನೇಕ ಬಾರಿ ಸಾಮಾಜಿಕ ಕಾರ್ಯಗಳಿಂದ ಕಿರಣ್ ರಾಜ್ ಮೆಚ್ಚುಗೆ ಗಳಿಸಿದ್ದರು. ಕಿರಣ್ ರಾಜ್ ಫೌಂಡೇಶನ್‌ ಮೂಲಕ ಅನೇಕ ಉತ್ತಮ ಕೆಲಸಗಳನ್ನು ಅವರು ಮಾಡಿದ್ದಾರೆ. ಮಂಗಳಮುಖಿಯರಿಗೂ ನಟ ಕಿರಣ್ ರಾಜ್ ಸಹಾಯಹಸ್ತ ಚಾಚಿದ್ದರು. ನಟ ಕಿರಣ್ ರಾಜ್ ಅವರ ಸಹಾಯ ನೆನೆದು ಮಂಗಳಮುಖಿಯರು ಭಾವುಕರಾಗಿದ್ದರು. ಈಚೆಗೆ ಬೆಂಗಳೂರಿನ ರಾಮಸಂದ್ರದ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳು, ಶೀತಲಗೊಂಡಿದ್ದ ತಮ್ಮ ಶಾಲೆಯನ್ನು ದುರಸ್ತಿ ಮಾಡಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದರು. ಮಕ್ಕಳ ಕೋರಿಕೆಗೆ ಕಿರಣ್ ರಾಜ್ ಸ್ಪಂದಿದ್ದರು. ಶಾಲೆಯನ್ನು ದುರಸ್ತಿ ಮಾಡಿಕೊಟ್ಟಿದ್ದರು.

ತಮ್ಮ ಗಳಿಕೆಯಲ್ಲಿ ಒಂದಷ್ಟು ಪಾಲನ್ನು ಬಡವರಿಗೆ ಸಹಾಯ ಮಾಡಲೆಂದೇ ಕಿರಣ್ ರಾಜ್ ಮೀಸಲಿಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅನಾಥಾಶ್ರಮ, ಬಡವರ ಮನೆಗೆ ತೆರಳಿದ್ದ ಕಿರಣ್ ರಾಜ್ ಆಹಾರ ವಿತರಣೆ ಮಾಡಿದ್ದರು. ಲಾಕ್‌ಡೌನ್ ಸಮಯದಲ್ಲಿ ಹಲವರಿಗೆ ಕಿರಣ್ ರಾಜ್ ಸಹಾಯ ಹಸ್ತ ಚಾಚಿದ್ದರು.

ಇನ್ನು, ಸಿನಿಮಾ ವಿಚಾರಕ್ಕೆ ಬರುವುದಾದರೆ, ಕಿರಣ್ ರಾಜ್ ಹೀರೋ ಆಗಿರುವ ಬಡ್ಡೀಸ್ ಸಿನಿಮಾ ಈಚೆಗಷ್ಟೇ ತೆರೆಗೆ ಬಂದಿತ್ತು. ಜೊತೆಗೆ ಅವರ ಭರ್ಜರಿ ಗಂಡು ಸಿನಿಮಾ ರಿಲೀಸ್ ಆಗುವುದಕ್ಕೆ ರೆಡಿ ಇದೆ. ಒಟ್ಟಿನಲ್ಲಿ ಹಿರಿತೆರೆ ಮತ್ತು ಕಿರುತೆರೆಯಲ್ಲಿ ಕಿರಣ್ ರಾಜ್ ಭರ್ಜರಿ ಯಶಸ್ಸು ಪಡೆಯುವತ್ತ ಮುನ್ನಡೆಯುತ್ತಿದ್ದಾರೆ. ಜೊತೆಗೆ ತಮ್ಮ ವ್ಯಯಕ್ತಿಕ ಬದುಕಿನಲ್ಲಿಯೂ ಮತ್ತಷಟು ಜನರಿಗೆ ಮಾದರಿಯಾಗುವಂತೆ ಬದುಕುತ್ತಿದ್ದಾರೆನ್ನಬಹುದು..

ಪ್ರಖ್ಯಾತ ಜ್ಯೋತಿಷಿ.. ದೈವಜ್ಞಾ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್.. 98808 68514 ನೂರಕ್ಕೆ ನೂರು ಪರಿಹಾರ‌.. ವಿದ್ಯೆ ಉದ್ಯೋಗ ಕುಟುಂಬ ಸಮಸ್ಯೆ ಸಂತಾನ ದಾಂಪತ್ಯದಲ್ಲಿ ತೊಂದರೆ ಸಾಲದ ಬಾಧೆ ಕೋರ್ಟ್ ಕೇಸ್ ಜಾಗದ ವಿಚಾರ.. ಅರೋಗ್ಯ ಬಿಸಿನೆಸ್.. ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳಿಗೆ ಫೋನ್ ಅಥವಾ ವಾಟ್ಸಪ್ ಮೂಲಕ ಶಾಶ್ವತ ಪರಿಹಾರ.. ನಿಮ್ಮ ಒಂದು ಕರೆ ನಿಮ್ಮ ಭವಿಷ್ಯ ಬದಲಿಸಬಹುದು.. ಕರೆ ಮಾಡಿ.. 98808 68514