ಶಾಕಿಂಗ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್.. ವೋಟ್ ಮಾಡಿದ್ದೆಲ್ಲಾ ವೇಸ್ಟ್? ಗೆಲ್ಲೋದೇ ಬೇರೆಯವರು..

ಬಿಗ್ ಬಾಸ್ ಸೀಸನ್ 7 ಅಂತಿಮ ಘಟ್ಟದಲ್ಲಿ ಸುದೀಪ್ ಅವರು ಶಾಕಿಂಗ್ ನ್ಯೂಸ್ ಒಂದನ್ನು ಬಿಚ್ಚಿಟ್ಟಿದ್ದಾರೆ.. ಹೌದು ನಿಜಕ್ಕೂ ಇದು ಬಿಗ್ ಬಾಸ್ ಪ್ರೇಕ್ಷಕರಿಗೆ ಬೇಸರದ ಸಂಗತಿ..

ನಮ್ಮ ನೆಚ್ಚಿನ ಸ್ಪರ್ಧಿಗಳನ್ನು ವೋಟಿಂಗ್ ಮೂಲಕ ಗೆಲ್ಲಿಸಬಹುದು ಎಂದು ಲಕ್ಷಾಂತರ ಜನರು ವೋಟ್ ಮಾಡಿದ್ದರು.. ಆದರೆ ಇದೀಗ ನಾವು ವೋಟ್ ಮಾಡಿದವರು ಗೆಲ್ಲೋದಿಲ್ಲ ಎಂಬ ಸತ್ಯ ಹೊರ ಬಿದ್ದಿದೆ..

ಹೌದು ಸುದೀಪ್ ಅವರು ನಿನ್ನೆಯ ಗ್ರಾಂಡ್ ಫಿನಾಲೆ ಸಂಚಿಕೆಯಲ್ಲಿ ಈ ವಿಚಾರ ತಿಳಿಸಿದ್ದಾರೆ.. ಉದಾಹರಣೆಗೆ ಶೈನ್ ಶೆಟ್ಟಿ ಅವರು ಗೆಲ್ಲಲಿ ಎಂದು ದಿನಕ್ಕೆ ನೂರಾರು ಬಾರಿ ಅದರಲ್ಲೂ ಅವರ ಸ್ನೇಹಿತರು ಸಾವಿರಾರು ಬಾರಿ ಓಟ್ ಮಾಡಿದ್ದೂ ಇದೆ.. ನೆಚ್ಚಿನ ಸದಸ್ಯರಿಗೆ ವೋಟ್ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡದ್ದಷ್ಟೇ ಅಲ್ಲದೆ ಕುಟುಂಬಸ್ಥರು ಈ ಬಾರಿ ಮೀಡಿಯಾಗಳ ಮುಂದೆಯೂ ಬಂದು ತಮ್ಮ ಮಕ್ಕಳಿಗೆ ವೋಟ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು..

ಆದರೆ ಒಬ್ಬ ವ್ಯಕ್ತಿ ದಿನಕ್ಕೆ ಸಾವಿರಾರು ವೋಟ್ ಮಾಡಿದ್ದರೆ ಅದು ಖಂಡಿತ ವೇಸ್ಟ್.. ಹೌದು ಸುದೀಪ್ ಅವರು ಹೇಳಿದ ಪ್ರಕಾರ ಒಬ್ಬ ವ್ಯಕ್ತಿಯ ಒಂದು ವೋಟ್ ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು.. ಅವರು ಐಪಿ ಅಡ್ರೆಸ್ ಚೇಂಜ್ ಮಾಡಿ ವೋಟ್ ಮಾಡಿದ್ರೂ ಕೂಡ ಅವರ ವೋಟ್ ಅನ್ನು ಲೆಕ್ಕಕ್ಕೆ ತೆಗೆದುಕೊಳ್ಳೋದಿಲ್ಲ..

ಒಬ್ಬರು ಅದೆಷ್ಟೇ ಬಾರಿ ವೋಟ್ ಮಾಡಿದ್ರೂ ಕೂಡ ಒಂದು ವೋಟ್ ಮಾತ್ರ ಲೆಕ್ಕಕ್ಕೆ ತೆಗೆದುಕೊಂಡು ಎಷ್ಟು ಜನರು ಆ ವ್ಯಕ್ತಿಗೆ ವೋಟ್ ಮಾಡಿರ್ತಾರೆ ಅನ್ನೋ ಆಧಾರದ ಮೇಲೆ ನಾವು ನಿರ್ಧಾರ ಮಾಡ್ತೀವಿ ಎಂದರು.. ಈ ವಿಚಾರವನ್ನು ಮೊದಲ ಸಂಚಿಕೆಯಲ್ಲೇ ತಿಳಿಸಿದಿದ್ದರೆ ವೋಟ್ ಮಾಡಲು ಸದಾ ಫೋನ್ ಬಳಸುತ್ತಿದ್ದ ಸಮಯವಾದರೂ ಉಳಿಯುತಿತ್ತು.. ಕೊನೆಯ ಸಂಚಿಕೆಯಲ್ಲಿ ಹೇಳಿದ್ದಾರೆ ಎಂದು ಸ್ಪರ್ಧಿಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ..

ಒಟ್ಟಿನಲ್ಲಿ ದಂಡಿ ದಂಡಿಯಾಗಿ ನಾವು ಯಾರಿಗೇ ಓಟ್ ಮಾಡಿದ್ದರೂ ಕೂಡ ಆತನಿಗೆ ಅತಿ ಹೆಚ್ಚು ಜನರು ಒಂದೊಂದು ವೋಟ್ ಮಾಡಿದ್ದರಷ್ಟೇ ಗೆಲ್ಲೋದು.. ಇಲ್ಲವಾದರೆ ಇಲ್ಲ..