ಸಿಹಿಸುದ್ದಿ.. ಮೊಬೈಲಿಗೆ ಬಂತು ಕೆಜಿಎಫ್ 2.. ಸಂಪೂರ್ಣ ಉಚಿತವಾಗಿಯೇ ನೋಡಬಹುದು..

ಕೆಜಿಎಫ್ ಚಾಪ್ಟರ್2 ಈಸಿನಿಮಾ ಹೆಸರು ಕೇಳಿದರೆ ರೋಮಾಂಚನ ಆಗುತ್ತದೆ. ಅಷ್ಟರ ಮಟ್ಟಿಗೆ ಸಿನಿಪ್ರಿಯರಿಗೆ ಕ್ರೇಜ್ ಹುಟ್ಟಿಸಿದ ಸಿನಿಮಾ ಇದು. ನಮ್ಮ ಕನ್ನಡ ಸಿನಿಮಾ ಒಂದು ಮೊದಲ ಬಾರಿಗೆ ಬಾಲಿವುಡ್ ನಲ್ಲಿ ಮತ್ತು ಬೇರೆ ಎಲ್ಲಾ ಭಾಷೆಗಳಲ್ಲೂ ದಾಖಲೆ ಮಾಡಿದ ಸಿನಿಮಾ. ವಿಶ್ವಾದ್ಯಂತ 1,227 ಕೋಟಿ ರೂಪಾಯಿ ಹಣಗಳಿಸಿ, ಸಾಕಷ್ಟು ದೊಡ್ಡ ಸಿನಿಮಾಗಳ ರೆಕಾರ್ಡ್ ಗಳನ್ನೇ ಕೆಜಿಎಫ್2 ಬ್ರೇಕ್ ಮಾಡಿದೆ. ಇಂದಿಗೂ ಸಹ ಈ ಸಿನಿಮಾದ ಆರ್ಭಟ ಮುಗಿದಿಲ್ಲ. ಸಿನಿಮಾ ಬಿಡುಗಡೆಯಾಗಿ 40ಕ್ಕಿಂತ ಹೆಚ್ಚು ದಿನ ಕಳೆದಿದ್ದರೂ ಸಹ ಥಿಯೇಟರ್ ಗೆ ಈಗಲೂ ಜನರು ಬರುತ್ತಿದ್ದು, ಅದೇ ಪ್ರೀತಿ ಮತ್ತು ಕ್ರೇಜ್ ಇಂದ ಸಿನಿಮಾ ನೋಡುತ್ತಿದ್ದಾರೆ. ಇದೀಗ ಕೆಜಿಎಫ್2 ಪ್ರಿಯರಿಗೆ ಒಂದು ಸಿಹಿ ಸುದ್ದಿ ಸಿಕ್ಕಿದ್ದು, ಓಟಿಟಿಗೆ ಬರಲಿದೆ ಕೆಜಿಎಫ್2, ಫ್ರೀಯಾಗಿ, ಎಷ್ಟು ಸಾರಿ ಬೇಕಾದರೂ ಕೆಜಿಎಫ್2 ಸಿನಿಮಾ ನೋಡುವ ಅವಕಾಶ..

ಕೆಜಿಎಫ್2 ಮಾಡಿರುವ ದಾಖಲೆಗಳು ಒಂದೆರಡಲ್ಲ, ಬಾಲಿವುಡ್ ಒಂದರಲ್ಲೂ 430 ಕೋಟಿಗಿಂತ ಹೆಚ್ಚಿನ ಹಣಗಳಿಕೆ ಮಾಡಿದೆ. ಈ ಹಿಂದೆ ಬಾಲಿವುಡ್ ನ ಯಾವ ನಟನ ಸಿನಿಮಾ ಕೂಡ ಅಷ್ಟು ಕಡಿಮೆ ಸಮಯದಲ್ಲಿ 200 ಕೋಟಿ ಗಳಿಕೆ ಮಾಡಿರಲಿಲ್ಲ ಎನ್ನುತ್ತವೆ ಬಾಲಿವುಡ್ ಮೂಲಗಳು. ಇನ್ನು ತೆಲುಗು ಮತ್ತು ತಮಿಳಿನಲ್ಲಿ ಸಹ 100ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ ಕೆಜಿಎಫ್2. ಅಭಿಮಾನಿಗಳಲ್ಲಿ ಸಿನಿಮಾ ಮೇಲಿನ ಕ್ರೇಜ್ ಹೇಗಿತ್ತು ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ. ಥುಯೇಟರ್ ನಲ್ಲಿ ಕಮಾಲ್ ಮಾಡಿದ ಕೆಜಿಎಫ್2 ಇದೀಗ ಓಟಿಟಿಯಲ್ಲಿ ಕಮಾಲ್ ಮಾಡಲು ಸಜ್ಜಾಗಿದೆ.

ಕೆಜಿಎಫ್ ಸಿನಿಮಾವನ್ನು ಸಿನಿಪ್ರಿಯರು ಒಂದು ಸಾರಿ ಅಲ್ಲ ಪದೇ ಪದೇ ನೋಡಲು ಬಯಸಿದರು. ಸಿನಿಮಾದ ಮ್ಯಾಜಿಕ್, ವಿಶುವಲ್ ಹಾಗಿದ್ದವು. ಅಷ್ಟು ಅದ್ಭುತವಾಗಿ ಮೂಡಿಬಂದಿದ್ದ ಸಿನಿಮಾವನ್ನು ಎಷ್ಟು ಸಾರಿ ನೋಡಿದರು ಮೊದಲ ಸಾರಿ ನೋಡಿರ ಅನುಭವವೇ ಆಗುತ್ತಿದ್ದು ನಿಜವೇ. ಹಾಗಾಗಿ ಸಿನಿಪ್ರಿಯರು ಪದೇ ಪದೇ ಥಿಯೇಟರ್ ಗೆ ಬಂದು ಕೆಜಿಎಫ್2 ಸಿನಿಮಾ ವೀಕ್ಷಿಸುತ್ತಿದ್ದರು. ಕೆಲವರು ಒಂದು ಸಾರಿ ಸಿನಿಮಾ ನೋಡಿದ ಮತ್ತೊಮ್ಮೆ ನೋಡಲು ಅಮೆಜಾನ್ ಪ್ರೈಮ್ ಗೆ ಸಿನಿಮಾ ಬರಲಿ ಎಂದು ಕಾಯುತ್ತಿದ್ದರು. ಇನ್ನು ಕೆಲವರು ಥಿಯೇಟರ್ ನಲ್ಲಿ ಸಿನಿಮಾ ನೋಡಲು ಸಾಧ್ಯವಾಗದೆ ಓಟಿಟಿ ಗೆ ಸಿನಿಮಾ ಬರಲಿ ಎಂದು ಎದುರುನೋಡುತ್ತಿದ್ದರು.

ಇದೀಗ ಎಲ್ಲಾ ಅಭಿಮಾನಿಗಳು ಓಟಿಟಿ ಮೂಲಕ ಕೆಜಿಎಫ್2 ನೋಡಬಹುದಾದ ಸಮಯ ಹತ್ತಿರ ಬಂದಿದೆ. ಅಮೆಜಾನ್ ಪ್ರೈಮ್ ನಲ್ಲಿ ಈಗಾಗಲೇ ಕೆಜಿಎಫ್2 ಸಿನಿಮಾ ಬಿಡುಗಡೆಯಾಗಿದೆ. ಆದರೆ ಅಭಿಮಾನಿಗಳು ಫ್ರೀಯಾಗಿ ನೋಡುವ ಹಾಗಿಲ್ಲ, ಕೆಜಿಎಫ್2 ಸಿನಿಮಾ ರೆಂಟ್ ಪಡೆಯಬೇಕಿತ್ತು, ಪೇ ಪರ್ ವ್ಯೂ ಮಾಡಿತ್ತು ಅಮೆಜಾನ್ ಪ್ರೈಮ್. ಇದರ ಪ್ರಕಾರ ಅಮೆಜಾನ್ ಪ್ರೈಮ್ ನಲ್ಲಿ ಒಂದು ಸಾರಿ ಕೆಜಿಎಫ್2 ಸಿನಿಮಾ ನೋಡಬೇಕು ಎಂದರೆ ಅಮೆಜಾನ್ ಪ್ರೈಮ್ ಚಂದಾದಾರಿಕೆ ಇದ್ದರೂ ಸಹ ₹199 ರೂಪಾಯಿ ಪಾವತಿ ಸಿನಿಮಾ ನೋಡುವ ಹಾಗಿತ್ತು. ಇದರಿಂದ ಸಿನಿಪ್ರಿಯರಿಗೆ ಸ್ವಲ್ಪ ಬೇಸರವಾಗಿದ್ದಂತೂ ನಿಜ. ಆದರೆ ಈಗ ಅಮೆಜಾನ್ ನಲ್ಲಿ ಫ್ರೀಯಾಗಿ ಸಿನಿಮಾ ಅವಕಾಶ ಶುರುವಾಗಲಿದೆ.

ಜೂನ್ 3ರಂದು ಕೆಜಿಎಫ್2 ಸಿನಿಮಾ ಬಿಡುಗಡೆಯಾಗಿ 50 ದಿನ ಪೂರೈಸಲಿದ್ದು, ಇದೇ ಸಂತೋಷದ ದಿನ ಓಟಿಟಿಗೆ ಲಗ್ಗೆ ಇಡಲಿದೆ ಕೆಜಿಎಫ್2. ಜೂನ್ 3 ರಿಂದ ಅಭಿಮಾನಿಗಳು ಹೆಚ್ಚುವರಿ ಹಣ ನೀಡದೆಯೇ ಕೆಜಿಎಫ್2 ಸಿನಿಮಾ ವೀಕ್ಷಿಸಬಹುದು. ಅಂದರೆ ಪೇ ಪರ್ ವ್ಯೂ ಇಲ್ಲದೆ, ಹೆಚ್ಚುವರಿಯಾಗಿ ₹199 ರೂಪಾಯಿ ಹಣ ನೀಡದೆಯೇ ಅಭಿಮಾನಿಗಳು ಕೆಜಿಎಫ್2 ಸಿನಿಮಾವನ್ನು ವೀಕ್ಷಿಸಬಹುದು. ಇದಕ್ಕೆ ನಿಮ್ಮ ಬಳಿ ಅಮೆಜಾನ್ ಪ್ರೈಮ್ ಸದಸ್ಯತ್ವ ಇದ್ದರೆ ಸಾಕು, ಹೆಚ್ಚುವರಿ ಹಣ ಕೊಡುವ ಅಗತ್ಯವಿಲ್ಲ. ಈ ಸಿಹಿ ಸುದ್ದಿಯನ್ನು ಅಮೆಜಾನ್ ಪ್ರೈಮ್ ಸಂಸ್ಥೆ ಮತ್ತು ಚಿತ್ರತಂಡ ತಿಳಿಸಿದ್ದು, ಅಭಿಮಾನಿಗಳು ಸಹ ಇದನ್ನು ಕೇಳಿ ಸಂತೋಷಗೊಂಡಿದ್ದು, ಕೆಜಿಎಫ್2 ಸಿನಿಮಾ ಇನ್ನುಮುಂದೆ ಏನೆಲ್ಲಾ ದಾಖಲೆಗಳನ್ನು ಮಾಡಲಿದೆ ಎಂದು ಕಾದು ನೋಡಬೇಕಿದೆ.