ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಖ್ಯಾತ ನಟಿ.. ಹುಡುಗ ನಿಜಕ್ಕೂ ಯಾರು ಗೊತ್ತಾ..

ಕನ್ನಡದ ಮತ್ತೊಬ್ಬ ಕಿರುತೆರೆ ನಟಿಯ ಅದ್ಧೂರಿ ವಿವಾಹ: ವರ ಯಾರು ಗೊತ್ತಾ..?
ಸದ್ಯಕ್ಕೆ ಮದುವೆ ಸೀಸನ್‌ ನಡೆಯುತ್ತಿದೆ. ಪ್ರತಿ ಕುಟುಂಬದಲ್ಲಿ ಒಂದಲ್ಲ ಒಂದು ಮದುವೆ ಕಾರ್ಯಕ್ರಮಗಳು ನಡಿತಾನೇ ಇವೆ. ಇದಕ್ಕೆ ಕನ್ನಡದ ಕಿರುತೆರೆ ಹೊರತಾಗಿಲ್ಲ. ಕನ್ನಡದ ಫೇಮಸ್‌ ನಟಿಯೊಬ್ಬರ ಅದ್ಧೂರಿ ವಿವಾಹ ನೆರವೇರಿದೆ. ಈ ನಟಿಯ ವೈವಾಹಿಕ ಜೀವನಕ್ಕೆ ಶುಭಕೋರಲು ಕಿರುತೆರೆ ಸೇರಿದಂತೆ ಸ್ಯಾಂಡಲ್‌ವುಡ್‌ ಮಂದಿ ಕೂಡ ಬಂದಿದ್ದರು.
ಅಷ್ಟಕ್ಕು ಯಾರು ಆ ಪ್ರಸಿದ್ಧ ಕಿರುತೆರೆ ನಟಿ ಅಂತಿರಾ? ಅವರೆ ಕಾವ್ಯಾ ಗೌಡ. ಕಾವ್ಯಾ ಗೌಡ ಯಾರನ್ನು ವಿವಾಹವಾಗಿದ್ದಾರೆ ಅಂತ ತಿಳಿದುಕೊಳ್ಳಬೇಕೆಂದರೆ ಈ ಸ್ಟೋರಿಯನ್ನು ಸಂಪೂರ್ಣವಾಗಿ ಓದಿ..


ಕಿರುತೆರೆ ನಟಿ ಕಾವ್ಯಾ ಗೌಡ ಜೂನಿಯರ್‌ ರಾಧಿಕಾ ಪಂಡಿತ್‌ ಎಂದೇ ಕಿರುತೆರೆಯಲ್ಲಿ ಫೇಮಸ್‌. ಗಾಂಧಾರಿ, ಮೀರಾ ಮಾಧವ, ರಾಧಾ ರಮಣ ಸೀರಿಯಲ್‌ ಖ್ಯಾತಿಯ ಕಾವ್ಯಾ ಗೌಡ ಈಗ ತಮ್ಮ ಅದ್ಧೂರಿ ಮದುವೆ ಸಂಭ್ರಮದಲ್ಲಿದ್ದಾರೆ. ಅಂದಹಾಗೆ ಈ ನಟಿ ಮದುವೆಯಾಗುತ್ತಿರುವ ಹುಡುಗ ಯಾರು ಗೊತ್ತಾ.. ಆತನ ಹೆಸರು ಸೋಮಶೇಖರ್‌.. ಖ್ಯಾತ ಉದಯಮಿಯಾಗಿರುವ ಸೋಮಶೇಖರ್‌ ಬೆಂಗಳೂರು ಹಾಗೂ ದುಬೈನಲ್ಲಿ ತಮ್ಮ ಉದ್ಯಮಗಳನ್ನು ಹೊಂದಿದ್ದಾರೆ.. ಇತ್ತ ಕಾವ್ಯಾ ಗೌಡ ಅವರ ತಾಯಿ ಹುಡುಕಿರುವ ಸಂಬಂಧ ಇದಾಗಿದ್ದು ಸಂಪೂರ್ಣ ಅರೇಂಜ್‌ ಮ್ಯಾರೇಜ್‌ ಆಗಿದೆ.. ಸೋಮಶೇಖರ್‌ ಅವರೊಂದಿಗೆ ಕಾವ್ಯಾ ಡಿಸೆಂಬರ್‌ 2ಕ್ಕೆ ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಜೋಡಿಯ ಮದುವೆ ಬೆಂಗಳೂರಿನ ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ ತುಂಬಾ ಅದ್ಧೂರಿಯಾಗಿ ನೆರವೇರಿದೆ. ಡಿಸೆಂಬರ್‌ 1ರಂದು ಅದೇ ಸ್ಟಾರ್‌ ಹೋಟೆಲ್‌ನಲ್ಲಿಯೇ ಆರತಕ್ಷತೆ ಕಾರ್ಯಕ್ರಮ ಕೂಡ ಜರುಗಿತು. ಈ ಗ್ರ್ಯಾಂಡ್‌ ಮದುವೆಗೆ ಎರಡೂ ಕುಟುಂಬದ ಆಪ್ತರು, ಸ್ನೇಹಿತರು, ರಾಜಕೀಯ ಗಣ್ಯರು ಸೇರಿದಂತೆ ಕಿರುತೆರೆ ಮತ್ತು ಬೆಳ್ಳಿತೆರೆ ಸ್ಟಾರ್ಸ್‌ ಸಾಕ್ಷಿಯಾಗಿದ್ದರು. ಮದುವೆಯ ಶಾಸ್ತ್ರಗಳಾದ ಸಂಗೀತ್‌, ಮೆಹೆಂದಿ, ಅರಿಶಿಣ ಕಾರ್ಯಕ್ರಮಗಳು ಕೂಡ ಅದ್ಧೂರಿಯಾಗಿ ನಡೆದಿದೆ. ಇವರ ಮದುವೆಗೆ ಗಾಂಧಾರ ಲೋಕವನ್ನೇ ಧರೆಗಿಳಿಸಿದ್ದರು ಎಂದರೆ ತಪ್ಪಾಗಲಾರದು. ಕಾವ್ಯಾ ಗೌಡರ ಆಸೆಯಂತೆಯೇ ಮದುವೆಯ ಡೆಕೊರೇಷನ್‌ಗಳನ್ನು ವಿಭಿನ್ನವಾಗಿ ಮಾಡಲಾಗಿತ್ತು. ಅವರು ಕಂಡ ಕನಸಿನಂತೆಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಕಾವ್ಯಾ ಗೌಡ.

ಇನ್ನು ಮದುವೆಗೆ ಸಂಬಂಧಪಟ್ಟ ಎಲ್ಲ ಉಡುಗೆ ತೊಡುಗೆಗಳನ್ನು ಇವರು ಸ್ಟಾರ್‌ ಡಿಸೈನರ್‌ ಬಳಿ ವಿಸ್ತ್ರವಿನ್ಯಾಸ ಮಾಡಿಸಿದ್ದಾರಂತೆ. ಕಾವ್ಯಾ ಸೋಮಶೇಕರ್‌ ಜೋಡಿಗೆ ಅವರ ಫ್ರೆಂಡ್ಸ್‌ ಮತ್ತು ಕಸಿನ್ಸ್‌ ಸೇರಿ ರೆಸಾರ್ಟ್‌ ಒಂದರಲ್ಲಿ ಬ್ಯಾಚುಲರ್‌ ಪಾರ್ಟಿ ನೀಡಿದ್ದು ಆ ಪಾರ್ಟಿ ಈ ಹೊಸ ಜೋಡಿಗೆ ತಂಬಾನೆ ಖುಷಿಕೊಟ್ಟಿದೆ ಎಂದು ನವ ಜೋಡಿ ಹೇಳಿಕೊಳ್ಳುತ್ತಿದೆ. ಮದುವೆಗೆ ಬಂದ ಅತಿಥಿಗಳಿಗೆ ರಿಟರ್ನ್‌ ಗಿಫ್ಟ್‌ ಆಗಿ ಸಸಿಗಳನ್ನು ನೀಡಿದರು. ಈ ಮೂಲಕ ಈ ಜೋಡಿ ತಮ್ಮ ಅದ್ಧೂರಿ ಮದುವೆ ಸಂದರ್ಭದಲ್ಲಿ ಪರಿಸರ ಕಾಳಜಿ ಕುರಿತು ಜಾಗೃತೆ ಮೂಡಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಕಾವ್ಯಾ ಸೋಮಶೇಕರ್‌ ಮದುವೆಯಾಗಬೇಕಿತ್ತು. ಕೊರೊನಾ ಕಾರಣದಿಂದಾಗಿ ತಮ್ಮ ಮದುವೆಯನ್ನು ಮುಂದೂಡಿದ್ದಾಗಿ ಸ್ವತಃ ಕಾವ್ಯಾ ಅವರೇ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ದೇಶವೇ ಕೊರೊನಾದಿಂದ ನರಳುತ್ತಿರುವಾದ ಈ ಸಮಯದಲ್ಲಿ ಮದುವೆಯಾಗುವುದು ಸರಿ ಎಲ್ಲ ಎಂಬುದು ಅವರ ಅಭಿಪ್ರಾಯವಾಗತ್ತು, ಹಾಗಾಗಿ ಅವರು ಈಗ ಮದುವೆಯಾಗಿದ್ದಾರೆ. ಕಾವ್ಯಾ ಗೌಡರವರಿಗೆ ಕಳೆದ ಎರಡು ವರ್ಷಗಳಿಂದ ಸಿನಿಮಾ, ಸೀರಿಯಲ್‌ಗಳಗೆ ನಟನೆ ಆಫರ್‌ಗಳು ಬಂದರೂ, ಇವರು ನಟನೆಗೆ ಒಪ್ಪಿಕೊಳ್ಳುತ್ತಿಲ್ಲ. ಕಾವ್ಯಾ ನಟನೆ ಬಿಟ್ಟು ಆಭರಣ ಡಿಸೈನ್‌ ಕಲಿಯುತ್ತಿದ್ದಾರೆ. ಆಭರಣ ಡಿಸೈನ್‌ಅನ್ನೇ ಮುಂದೆ ತಮ್ಮ ವೃತ್ತಿಯಾಗಿಸಿಕೊಳ್ಳುತ್ತಾರಂತೆ ಈ ನಟಿ. ಹಾಗಾಗಿ ಇನ್ನು ಮುಂದೆ ಕಾವ್ಯಾ ಗೌಡ ನಟನೆ ಬಿಟ್ಟು ಆಭರಣ ಡಿಸೈನರ್‌ ಆಗಿ ಮುಂದುವರೆಯಲಿದ್ದಾರೆ. ಕಾವ್ಯಾ ಹಾಗು ಸೋಮಶೇಖರ್‌ ನವ ದಂಪತಿಗಳಿಗೆ ನಮ್ಮ ಕಡೆಯಿಂದ ವೈವಾಹಿಕ ಜೀವನದ ಶುಭಾಶಯಗಳು..