ಕಿರುತೆರೆ ಖ್ಯಾತ ನಟಿ ಕಾವ್ಯಾ ಶಾ ಮಾದುವೆಯ ದಿನವೇ ಎಂತಹ ಕೆಲಸ ಮಾಡಿದ್ದಾರೆ ನೋಡಿ..

ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಗುರುತಿಸಿಕೊಂಡಿರುವ ನಟಿ ಕಾವ್ಯ ಶಾ. ಇವರು ಕನ್ನಡದ ಹಲವು ಧಾರಾವಾಹಿಗಳಲ್ಲಿ ಹಾಗೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೆಲ್ತ್ ಫಿಟ್ನೆಸ್ ಕೋಚ್ ಆಗಿ ಸಹ ಕಾವ್ಯ ಶಾ ಗುರುತಿಸಿಕೊಂಡಿದ್ದಾರೆ. ಕಾವ್ಯ ಶಾ ಅವರು ಕನ್ನಡ ಮಾತ್ರವಲ್ಲದೆ ತಮಿಳಿನಲ್ಲಿ ಸಹ ಗುರುತಿಸಿಕೊಂಡಿದ್ದರು. ಇದೀಗ ಕಾವ್ಯ ಶಾ ಅವರಿಗೆ ಮದುವೆ ನಿಶ್ಚಯವಾಗಿದ್ದು, ಏಪ್ರಿಲ್ 18ರಂದು ಹಸೆಮಣೆ ಏರಲಿದ್ದಾರೆ. ಇವರು ಮದುವೆ ಆಗುತ್ತಿರುವ ಹುಡುಗ ಯಾರು? ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ ಆಗಿರುವ ನಟಿ ಕಾವ್ಯ ಶಾ, ಪುನೀತ್ ಅವರ ಸ್ಮರಣಾರ್ಥ, ತಮ್ಮ ಮದುವೆಯಲ್ಲಿ ಏನು ಮಾಡಲಿದ್ದಾರೆ ಗೊತ್ತಾ? ತಿಳಿದರೆ, ಅಭಿಮಾನ ಅಂದ್ರೆ ಇದು ಎಂದು ನಿಮಗೆ ಅನ್ನಿಸುವುದು ಖಂಡಿತ…

ನಟಿ ಕಾವ್ಯ ಶಾ, ಬಹಳಷ್ಟು ವರ್ಷಗಳಿಂದ ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯ ಸಕ್ರಿಯರಾಗಿದ್ದಾರೆ. ಫ್ಯಾಶನ್ ಲೋಕದಲ್ಲಿ ಮಾಡೆಲ್ ಆಗಿ ಸಹ ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿ ಹಲವು ರಿಯಾಲಿಟಿ ಶೋಗಳು ಹಾಗೂ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದು, ಚಿ.ಸೌ.ಸಾವಿತ್ರಿ ಹಾಗೂ ಇನ್ನಿತರ ಧಾರವಾಹಿಗಳಲ್ಲಿ ಸಹ ಅಭಿನಯಿಸಿದ್ದಾರೆ. ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ, ಮುಗಿಲುಪೇಟೆ ಹಾಗೂ ಇನ್ನಿತರ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಸಿನಿಮಾಗಳಲ್ಲಿ ಸಹ ನಟಿಸಿ ಖ್ಯಾತಿ ಪಡೆದುಕೊಂಡಿದ್ದಾರೆ ನಟಿ ಕಾವ್ಯ. ಇವರ ತಂದೆ ಸಹ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಅವರ ಹೆಸರು ನಾಗೇಂದ್ರ ಶಾ.

ಕಾವ್ಯ ಶಾ ಅವರು ಫಿಟ್ನೆಸ್ ಕೋಚ್ ಆಗಿ ಸಹ ಗುರುತಿಸಿಕೊಂಡಿದ್ದಾರೆ. ಕಾವ್ಯ ಶಾ ಅವರ ಸೋಷಿಯಲ್ ಮೀಡಿಯಾ ಖಾತೆ ನೋಡಿದರೆ, ಫಿಟ್ನೆಸ್ ಗೆ ಸಂಬಂಧಿಸಿದ ಹಾಗೆ ಸಾಕಷ್ಟು ವಿಚಾರಗಳನ್ನು ಶೇರ್ ಮಾಡಿಕೊಂಡಿರುತ್ತಾರೆ. ಇದೀಗ ಕಾವ್ಯ ಶಾ ಅವರು, ಮದುವೆ ಆಗುತ್ತಿದ್ದಾರೆ. ಇವರು ಮದುವೆ ಆಗುತ್ತಿರುವ ಹುಡುಗನ ಹೆಸರು ವರುಣ್, ಬಹಳಷ್ಟು ವರ್ಷಗಳಿಂದ ವರುಣ್ ಮತ್ತು ಕಾವ್ಯ ಅವರಿಗೆ ಪರಿಚಯವಿತ್ತು, ಬ್ಯೂಟಿ ಪೆಜೇಂಟ್ ಒಂದಕ್ಕೆ ಕಾವ್ಯ ಅವರು ಹೋಗಿದ್ದಾಗ ಅಲ್ಲಿ ವರುಣ್ ಭೇಟಿಯಾಗಿ, ಇಬ್ಬರ ನಡುವೆ ಸ್ನೇಹ ಶುರುವಾಯಿತು, ನಂತರ ಪ್ರೀತಿ ಮೂಡಿ ಇಬ್ಬರು ಮದುವೆಯಾಗುವ ನಿರ್ಧಾರ ಮಾಡಿದರು. ಇಬ್ಬರು ತಮ್ಮ ತಂದೆ ತಾಯಿಯರ ಒಪ್ಪಿಗೆ ಪಡೆದು ಮದುವೆ ಆಗುತ್ತಿದ್ದಾರೆ.

ವರುಣ್ ಮತ್ತು ಕಾವ್ಯ ಇಬ್ಬರು ಸಹ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಾಗಿದ್ದಾರೆ. ವರುಣ್ ಅವರು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಪುನೀತ್ ಅವರ ಜೊತೆ ಕೆಲಸ ಮಾಡಿದ್ದರು. ಪುನೀತ್ ಅವರೊಡನೆ ಆತ್ಮೀಯ ಗೆಳೆತನವನ್ನು ಸಹ ಹೊಂದಿದ್ದರು. ಪುನೀತ್ ಅವರಿಗೂ ವರುಣ್ ಕಾವ್ಯ ರಿಲೇಶನ್ಷಿಪ್ ಬಗ್ಗೆ ತಿಳಿದಿತ್ತು, ಮದುವೆ ಯಾವಾಗ ಎಂದು ಆಗಾಗ ಕೇಳುತ್ತಿದ್ದರಂತೆ ಅಪ್ಪು. ಆದರೆ ಈಗ ಪುನೀತ್ ಅವರು ಇಲ್ಲದೆ ಇರುವುದು ಕಾವ್ಯ ಮತ್ತು ವರುಣ್ ಇಬ್ಬರಿಗೂ ಬೇಸರದ ವಿಚಾರ. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಹಾಗೂ ಶಿವಣ್ಣ ಅವರು ತಮ್ಮ ಮದುವೆಗೆ ಬರಬೇಕು ಎಂದು ಅಪೇಕ್ಷೆ ಪಟ್ಟಿದ್ದಾರೆ ಕಾವ್ಯ ವರುಣ್.

ಪುನೀತ್ ಅವರ ಮೇಲಿನ ಅಭಿಮಾನದಿಂದ ತಮ್ಮ ಮದುವೆಗೆ ಕಾಡಿನ ಥೀಮ್ ಸೆಲೆಕ್ಟ್ ಮಾಡಿದ್ದಾರೆ. ಗಂಧದಗುಡಿ ಡಾಕ್ಯುಮೆಂಟರಿಯಲ್ಲಿ ಕರ್ನಾಟಕದ ವನ್ಯಪರಿಸರವನ್ನು ತೋರಿಸಿಕೊಡಲಿದ್ದಾರೆ, ಅದೇ ಥೀಮ್ ನಲ್ಲಿ ಇವರ ಮದುವೆ ಸಹ ನಡೆಯಲಿದೆ. ಇದಷ್ಟೇ ಅಲ್ಲದೆ, ಪುನೀತ್ ಅವರ ಮೇಲಿನ ಅಭಿಮಾನದಿಂದ ಕಾವ್ಯ ಶಾ ಮತ್ತು ವರುಣ್ ಅವರು ತಮ್ಮ ಮದುವೆಯಲ್ಲಿ ಮತ್ತೊಂದು ವ್ಯವಸ್ಥೆ ಮಾಡಿದ್ದು, ಇದು ತುಂಬಾ ಒಳ್ಳೆಯ ವಿಚಾರ ವಾಗಿದೆ. ತಮ್ಮ ಮದುವೆಗೆ ಬರುವ ಅತಿಥಿಗಳಿಗೆ ಅಂಗಾಂಗ ದಾನ ಮತ್ತು ನೇತ್ರದಾನ ಮಾಡಲು ಆಸಕ್ತಿ ಇದ್ದರೆ ಅವರು ಮಾಡಬಹುದು.

ಅಂಗಾಂಗ ದಾನ ಮತ್ತು ನೇತ್ರದಾನ ಮಾಡಲು ಬೇಕಿರುವ ಅರೇಂಜ್ಮೆಂಟ್ಸ್ ಗಳನ್ನು ಕಾವ್ಯ ಶಾ ಅವರ ಮದುವೆಯಲ್ಲಿ ಮಾಡಿರುವುದು ವಿಶೇಷವಾಗಿದೆ. ಪುನೀತ್ ಅವರಲ್ಲಿದ್ದ ಒಳ್ಳೆಯ ವಿಷಯಗಳು ಎಲ್ಲರಿಗು ತಲುಪಬೇಕು, ನಾವು ಹೋದಮೇಲು ನಮ್ಮಿಂದ ನಾಲ್ಕು ಜನರಿಗೆ ಸಹಾಯ ಆಗಬೇಕು ಎಂದು ಕಾವ್ಯ ಶಾ ಅವರು ತಮ್ಮ ಮದುವೆಯಲ್ಲಿ ಮಾಡಿರುವ ಈ ವ್ಯವಸ್ಥೆ ನಿಜಕ್ಕೂ ಮೆಚ್ಚುವಂಥದ್ದು. ಪುನೀತ್ ಅವರ ಮೇಲಿನ ಅಭಿಮಾನ ಹೇಗಿರಬೇಕು ಎನ್ನುವುದನ್ನು ಕಾವ್ಯ ಶಾ ತೋರಿಸಿಕೊಟ್ಟಿದ್ದಾರೆ ಎಂದರೆ ತಪ್ಪಾಗುವುದಿಲ್ಲ.