ಸನ್ ರೈಸರ್ಸ್ ಹೈದರಾಬಾದ್ ತಂಡದ ಓನರ್ ಕಾವ್ಯ ನಿಜಕ್ಕೂ ಯಾರು? ಎಷ್ಟು ಸಾವಿರ ಕೋಟಿ ಆಸ್ತಿಯ ಒಡತಿ ಗೊತ್ತಾ? ಶಾಕ್‌ ಆಗ್ತೀರಾ..

ಐಪಿಎಲ್ ಅಂದ್ರೆ ನಮ್ಮ ದೇಶದ ಜನರಿಗೆ ಎಲ್ಲಿಲ್ಲದ ಕ್ರೇಜ್. ಐಪಿಎಲ್ ಪಂದ್ಯಗಳು ಶುರುವಾದವು ಅಂದ್ರೆ ಪ್ರತಿ ಮನೆಗಳಲ್ಲೂ, ಸಂಜೆಯಾದರು ಧಾರಾವಾಹಿ ನೋಡಬೇಕು ಅಥವಾ ಐಪಿಎಲ್ ನೋಡಬೇಕು ಎನ್ನುವ ಜಗಳ ಶುರುವಾಗುತ್ತದೆ. ಭಾರತದಲ್ಲಿ ನಡೆಯುವ ಐಪಿಎಲ್ ಪಂದ್ಯಗಳ ಮೇಲೆ ವಿದೇಶಿ ಜನರಿಗೂ ಸಹ ದೊಡ್ಡ ಮಟ್ಟದ ಕ್ರೇಜ್ ಇದೆ ಎಂದರೆ ತಪ್ಪಾಗುವುದಿಲ್ಲ. ಐಪಿಎಲ್ ಪಂದ್ಯಗಳು ಶುರುವಾಗಿ ಈಗ 15 ವರ್ಷ ಕಳೆಯುತ್ತಿದೆ. ಆದರೆ ವರ್ಷದಿಂದ ವರ್ಷಕ್ಕೆ ಇದರ ಮೇಲಿರುವ ಕ್ರೇಜ್ ಹೆಚ್ಚಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ.

ಐಪಿಎಲ್ ನಲ್ಲಿ ನಮಗೆಲ್ಲ ಗೊತ್ತಿರುವ ಹಾಗೆ, ಭಾರತದ ಹಲವು ರಾಜ್ಯಗಳನ್ನು ಪ್ರತಿನಿಧಿಸುವ ಹಾಗೆ, ತಂಡಗಳು ಇರುತ್ತವೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಲ್ಕತ್ತಾ, ಮುಂಬೈ, ಗುಜರಾತ್, ಲಕ್ನೌ, ಪಂಜಾಬ್, ಹೀಗೆ ಈ ತಂಡಗಳು ಐಪಿಎಲ್ ನಲ್ಲಿ ಪ್ರದರ್ಶನ ನೀಡುತ್ತವೆ. ವಿವಿಧ ಆಟಗಾರರು ಆಯಾ ತಂಡಗಳಿಗೆ ಇರುತ್ತಾರೆ. ಪ್ರತಿ ವರ್ಷ ಐಪಿಎಲ್ ಆಕ್ಷನ್ ನಲ್ಲಿ ತಂಡದ ಮಾಲೀಕರು ಆಟಗಾರರನ್ನು ಕೋಟಿ ಕೋಟಿ ಹಣ ಕೊಟ್ಟು ಖರೀದಿ ಮಾಡಿಕೊಳ್ಳುತ್ತಾರೆ. ಐಪಿಎಲ್ ನಲ್ಲಿ ಪ್ರಮುಖವಾದ ತಂಡಗಳಲ್ಲಿ ಒಂದು ಸನ್ ರೈಸರ್ಸ್ ಹೈದರಾಬಾದ್ ತಂಡ. ಈ ತಂಡದ ಓನರ್ ಕಾವ್ಯ ಮಾರನ್ ನಿಜಕ್ಕೂ ಯಾರು? ಈಕೆ ಎಷ್ಟು ಸಾವಿರ ಕೋಟಿ ಆಸ್ತಿಯ ಒಡತಿ ಗೊತ್ತಾ?

ಸನ್ ರೈಸರ್ಸ್ ಹೈದರಾಬಾದ್ ತಂಡ, ದಕ್ಷಿಣ ಭಾರತದ ಆಂಧ್ರಪ್ರದೇಶ ಮತ್ತು ತೆಲಂಗಾಣವನ್ನು ಪ್ರತಿನಿಧಿಸುತ್ತದೆ. ಹೈದರಾಬಾದ್ ತಂಡ ಐಪಿಎಲ್ ಶುರುವಿನಿಂದಲೂ ಬಲಿಷ್ಠವಾದ ತಂಡ ಎಂದೇ ಹೆಸರು ಪಡೆದುಕೊಂಡಿದೆ. ಕೆಲವು ವರ್ಷಗಳಿಂದ, ಕಳೆದ ಸೀಸನ್ ವರೆಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಕ್ರಿಕೆಟರ್ ಡೇವಿಡ್ ವಾರ್ನರ್ ಅವರು ತಂಡದ ಕ್ಯಾಪ್ಟನ್ ಆಗಿದ್ದರು, ಆದರೆ ಈ ವರ್ಷ ಕ್ಯಾಪ್ಟನ್ಸಿ ಬದಲಾಗಿದೆ. ತಂಡದ ಓನರ್ ಕಾವ್ಯ ಮಾರನ್ ಅವರು, ಕಳೆದ ವರ್ಷ ಸನ್ ರೈಸರ್ಸ್ ಹೈದರಾಬಾದ್ ತಂಡ ಫಾರ್ಮ್ ನಲ್ಲಿ ಇಲ್ಲದ ಕಾರಣ ಚೇಂಜಸ್ ತಂದಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ತಂಡದ ಓನರ್ ಕಾವ್ಯ ಮಾರನ್ ಅವರು ಮತ್ಯಾರು ಅಲ್ಲ, ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಸಾಕಷ್ಟು ಚಾನೆಲ್ ಗಳನ್ನು ಹೊಂದಿರುವ, ಖ್ಯಾತ ಟಿವಿ ನೆಟ್ವರ್ಕ್ ಸನ್ ಟಿವಿಯ ಮುಖ್ಯಸ್ಥರಾದ ಕಲಾನಿಧಿ ಮಾರನ್ ಅವರ ಮಗಳು, ಇವರ ತಂದೆ ದೊಡ್ಡ ಉದ್ಯಮಿ. ಇವರ ತಂದೆಯ ಒಟ್ಟು ಆಸ್ತಿ ಹತ್ತು ಸಾವಿರ ಕೋಟಿ ರೂಪಾಯಿಗಳು, ಆ ಆಸ್ತಿಗೆಲ್ಲ ಕಾವ್ಯ ಮಾರನ್ ಅವರೇ ಒಡತಿ. ಕಲಾನಿಧಿ ಮಾರನ್ ಮತ್ತು ಕಾವೇರಿ ಮಾರನ್ ದಂಪತಿಗೆ ಒಬ್ಬಳೇ ಮಗಳು ಕಾವ್ಯ ಮಾರನ್. ಇವರ ಕುಟುಂಬದವರು ಸಿನಿಮಾ ಪೋಲಿಟಿಕ್ಸ್ ನಲ್ಲಿ ಸಕ್ರಿಯರಾಗಿದ್ದಾರೆ.

ತಂದೆ ದೊಡ್ಡ ಉದ್ಯಮಿ ಆದರೂ ಸಹ ಕಾವ್ಯ ಮಾರನ್ ಅವರಿಗೆ ತಂದೆಯ ದುಡ್ಡಿನಲ್ಲಿ ಜೀವನ ಮಾಡಲು ಇಷ್ಟವಿಲ್ಲದೆ, ತಾವೇ ಸ್ವಂತ ಉದ್ಯಮ ಶುರು ಮಾಡಿ, ಸಕ್ಸಸ್ ಕಂಡು ಒಂದು ಸಾವಿರ ಕೋಟಿವರೆಗೂ ಹಣ ಸಂಪಾದನೆ ಮಾಡಿದ್ದಾರೆ ಕಾವ್ಯ. ಇವರಿಗೆ ಸ್ಪೋರ್ಟ್ಸ್ ನಲ್ಲಿ ಹೆಚ್ಚಿನ ಆಸಕ್ತಿ ಇರುವ ಕಾರಣ, ತಂದೆಯ ಒಪ್ಪಿಗೆ ಪಡೆದು, ಸನ್ ರೈರರ್ಸ್ ಹೈದರಾಬಾದ್ ತಂಡವನ್ನು ಖರೀದಿ ಮಾಡಿದ್ದಾರೆ. ಸನ್ ರೈಸರ್ಸ್ ತಂಡಕ್ಕೆ ಉತ್ತಮವಾದ ಸಪೋರ್ಟ್ ನೀಡುತ್ತಾರೆ. ಮ್ಯಾಚ್ ನೋಡುವ ಸಲುವಾಗಿ ಕಾವ್ಯ ಅವರು ಮೈದಾನಕ್ಕೆ ಬಂದರೆ, ಕ್ಯಾಮೆರಾ ಮ್ಯಾನ್ ಕಾವ್ಯ ಅವರನ್ನು ಸೆರೆಹಿಡಿಯುತ್ತಾರೆ. ಕಾವ್ಯ ಅವರಿಗೆ ಈಗ 27 ವರ್ಷವಷ್ಟೇ ವಯಸ್ಸಾಗಿದೆ.