ಜೀವನದಲ್ಲಿ ಯಾವ ಸಮಯದಲ್ಲಿ ಯಾವಾಗ ಏನಾಗುವುದು ಯಾರೂ ಊಹಿಸಲಾರರು.. ಅದರಲ್ಲೂ ನಮ್ಮಗಳ ಸಣ್ಣ ಸಣ್ಣ ಆಸೆಗಳಿಂದ ಒಮ್ಮೊಮ್ಮೆ ಜೀವವೇ ಹೋಗಿ ಬಿಡುತ್ತದೆ.. ಅಂತಹ ಸಾಕಷ್ಟು ಘಟನೆಗಳು ಕಣ್ಣ ಮುಂದೆಯೇ ನಡೆದಿದ್ದರೂ ಸಹ ಜನರು ಎಚ್ಚರಿಕೆ ವಹಿಸದಿರುವುದು ನಿಜಕ್ಕೂ ಬಂಡತನ ಎಂದರೆ ತಪ್ಪಾಗಲಾರದು.. ಹೌದು ಸೆಲ್ಫಿ ತೆಗೆದುಕೊಳ್ಳುವ ಸಲುವಾಗಿ ಅಪಾಯದ ಜಾಗಗಳಿಗೆ ಹೋದ ಸಾಕಷ್ಟು ಮಂದಿ ಜೀವ ಕಳೆದುಕೊಂಡ ಎಷ್ಟೋ ಘಟನೆಗಳು ಆಗಾಗ ನಡೆಯುತ್ತಿದ್ದರೂ ಸಹ ಸೆಲ್ಫಿ ಗೀಳಿಗೆ ಬಿದ್ದ ಹೆಣ್ಣು ಮಗಳೊಬ್ಬಳು ಇದೀಗ ಗಂಡನ ಕಣ್ಣ ಮುಂದೆಯೇ ನೀರು ಪಾಲಾಗಿದ್ದಾಳೆ.

ಹೌದು ಇಂತಹದೊಂದು ಮನಕಲಕುವ ಘಟನೆ ಮೈಸೂರಿನಲ್ಲಿ ನಡೆದಿದ್ದು ಮೂವತ್ತೆಂಟು ವರ್ಷದ ಮಹಿಳೆ ಗಂಡ ಹಾಗೂ ಮಗಳ ಮುಂದೆಯೇ ನದಿಯಲ್ಲಿ ಮುಳುಗಿ ಹೋಗಿದ್ದು ಕಾಪಾಡಿ ಕಾಪಾಡಿ ಎಂದು ಕೂಗಿಕೊಂಡರೂ ಸಹ ಯಾರೂ ಹತ್ತಿರ ಹೋಗದೇ ಇದ್ದದ್ದು ಆ ಹೆಣ್ಣು ಮಗಳ ಆ ಕೊನೆಯ ಘಳಿಗೆಯಲ್ಲಿ ಅನುಭವಿಸಿದ ನೋವು ನೆನೆದರೆ ನಿಜಕ್ಕೂ ಮನಕಲಕುವಂತಿದೆ..

ಹೌದು ಮೈಸೂರಿನ ಶ್ರೀ ಕ್ಷೇತ್ರ ಸಂಗಮದಲ್ಲಿ ಈ ಘಟನೆ ನಡೆದಿದ್ದು ಕಪಿಲಾ ನದಿಯಲ್ಲಿ ಸೆಲ್ಫಿಗಾಗಿ ಹೋದ ಮಹಿಳೆ ಮರಳಿ ಬಾರಲೇ ಇಲ್ಲ.. ಈ ಹೆಣ್ಣು ಮಗಳ ಹೆಸರು ಕವಿತಾ.. ಚಾಮರಾಜನಗರ ಜಿಲ್ಲೆಯ ನಂಜದೇವನಪುರ ಗ್ರಾಮದ ಗಿರೀಶ್ ಎಂಬುವವರ ಪತ್ನಿ.. ಈಕೆ ಮೈಸೂರು ತಾಲೂಕಿನ ದೂರ ಗ್ರಾಮದ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಡಿ ಬಿ ನಾಗರಾಜ್ ಎಂಬುವವರ ಪುತ್ರಿ.. ಈಕೆಗೆ ಪುಟ್ಟದೊಂದು ಮಗಳೂ ಸಹ ಇದ್ದು ಕುಟುಂಬದ ಸಮೇತ ರಜೆ ಕಳೆಯಲು ತಂದೆಯ ಮನೆಗೆ ಬಂದಿದ್ದಾರೆ..

ಇದೇ ಸಮಯದಲ್ಲಿ ನಿನ್ನೆ ಕವಿತಾ ತನ್ನ ಪತಿ ಹಾಗೂ ಮಗಳ ಜೊತೆ ನಂಜನಗೂಡಿನ ಶ್ರೀ ಕ್ಷೇತ್ರ ಸಂಗಮಕ್ಕೆ ತೆರಳಿದ್ದಾರೆ.. ದೇವಸ್ಥಾನಕ್ಕೆ ಹೋಗುವ ಮುನ್ನ ಕಾಲು ತೊಳೆಯಲು ಕಪಿಲಾ ನದಿ ಬಳಿ ಬಂದ ಕವಿತಾ ಹಾಗೂ ಕುಟುಂಬ ಕಾಲು ತೊಳೆದು ಬರುವಾಗ ಅತ್ತ ಕವಿತಾ ಮಾತ್ರ ಸೆಲ್ಫು ತೆಗೆಯಲು ನಿಂತಿದ್ದು ಕಾಲು ಜಾರಿ ನದಿಯೊಳಗೆ ಬಿದ್ದಿದ್ದಾರೆ.. ತಕ್ಷಣ ಪತಿ ಗಿರೀಶ್ ಹಾಗೂ ಮಗಳು ಕವಿತಾರನ್ನು ರಕ್ಷಣೆ ಮಾಡಲು ಮುಂದಾದರೂ ಸಹ ಸಾಧ್ಯವಾಗಲಿಲ್ಲ.. ಅಷ್ಟೇ ಅಲ್ಲದೇ ಮೂವರೂ ಸಹ ಕಾಪಾಡಿ ಎಂದು ಕೂಗಿ ನೆರವಿಗೆ ಕರೆದರೂ ಸಹ ಯಾರೂ ಹತ್ತಿರ ಬಾರದ ಕಾರಣ ಕವಿತಾ, ಗಂಡ ಹಾಗೂ ಮಗಳ ಮುಂದೆಯೇ ನದಿಯಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದಾರೆ..

ಸಂತೋಷವಾಗಿ ದೇವರ ದರ್ಶನ ಮಾಡಲು ಬಂದ ಕುಟುಂಬ ಒಂದೇ ಒಂದು ಸೆಲ್ಫಿಯ ಕಾರಣದಿಂದಾಗಿ ಇಂದು ಕುಟುಂಬದಲ್ಲಿ ಅರಗಿಸಿಕೊಳ್ಳಲಾಗದ ನೋವು ತುಂಬಿ ಹೋಯಿತು.. ಇಂತಹ ಘಟನೆಗಳು ಪದೇ ಪದೇ ನಡೆದರೂ ಸಹ ಜನರು ಎಚ್ಚೆತ್ತುಕೊಳ್ಳದೇ ಇಂತಹ ಅಪಾಯಗಳನ್ನು ತಂದುಕೊಳ್ಳುತ್ತಿರುವುದು ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ.. ಒಂದು ಕ್ಷಣದ ಸಂತೋಷಕ್ಕಾಗಿ ದಯವಿಟ್ಟು ಜೀವ ಜೀವನವನ್ನು ಕಳೆದುಕೊಳ್ಳಬೇಡಿ.. ಈಗ ಆ ಕುಟುಂಬದಲ್ಲಿ ಕವಿತಾರ ಮಗಳು ಜೀವನ ಪೂರ್ತಿ ತಾಯಿ ಇಲ್ಲದೇ ಕೊರಗಬೇಕಾಗಿದೆ.. ಅಂತಹ ಸ್ಥಿತಿ ಬೇರೆ ಯಾರಿಗೂ ಬಾರದಿರಲಿ..

ಇತ್ತ ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕವಿತಾರ ಪಾರ್ಥೀವವನ್ನು ಹೊರ ತೆಗೆದು ಆಸ್ಪತ್ರೆಗೆ ಕಳುಹಿಸಿದ್ದಾರೆ.. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..