ಇಪ್ಪತ್ತು ವರ್ಷಕ್ಕೆ ಜೀವ ಕಳೆದುಕೊಂಡಳು..‌ ಆದರೆ ಹೋಗುವ ಕೊನೆ ಕ್ಷಣದಲ್ಲಿ ಈಕೆ ಮಾಡಿದ ಕೆಲಸಕ್ಕೆ ವೈದ್ಯರೆಲ್ಲಾ ಎದ್ದು ನಿಂತು ಸಲ್ಯೂಟ್ ಮಾಡಿದರು..

ಕೆಲವರ ಜೀವನವೇ ಹಾಗೆ.. ಆಗ ತಾನೆ ಮುಂದಿನ ಜೀವನದ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಂಡು ವಿಧ್ಯಾಭ್ಯಾಸ ಮುಗಿಸುವ ಹೊಸ್ತಿಲಿಗೆ ಬಂದು ನಿಂತು ಮುಂದಿನ ಭವಿಷ್ಯದ ಬಗ್ಗೆ ಸಾಕಷ್ಟು ಯೋಜನೆ ಹಾಕಿಕೊಂಡು ಮುಂದಿನ ದಿನಗಳಲ್ಲಿ‌ ಕೆಲಸ ದುಡಿಮೆ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು.. ಮುಂದೆ ಮದುವೆಯಾಗಿ ಒಳ್ಳೆಯ ಸಂಗಾತಿಯಾಗಬೇಕು ಹೀಗೆ ಸಾಕಷ್ಟು ಯೋಜನೆಗಳು ಎಲ್ಲರ ಜೀವನದಲ್ಲಿಯೂ ಇದ್ದೇ ಇರುತ್ತವೆ.. ಆದರೆ ನಮ್ಮಗಳ ಬಗ್ಗೆ ಆ ಭಗವಂತನ ಯೋಜನೆಯೇ ಬೇರೆಯಾಗಿರುತ್ತದೆ.‌ ಹೌದು ಈ ಹೆಣ್ಣು ಮಗಳ ಬಾಳಿನಲ್ಲಿಯೂ ಅದೇ ಆಗಿರುವುದು.. ತಾನು ಕಂಡ ಕನಸೇ ಬೇರೆ ಆದರೆ ಭಗವಂತ ತೆಗೆದುಕೊಂಡ ನಿರ್ಧಾರವೇ ಬೇರೆ.. ಕೇವಲ ಇಪ್ಪತ್ತು ವರ್ಷಕ್ಕೆ ಬಾಳ ಪಯಣ ಮುಗಿಸಿದ ಈ ಹೆಣ್ಣು ಮಗಳು ಕೊನೆ ಕ್ಷಣದಲ್ಲಿ ಮಾಡಿದ ಕೆಲಸಕ್ಕೆ ಆಸ್ಪತ್ರೆಯ ವೈದ್ಯರು ಎದ್ದು ನಿಂತು ಸಲ್ಯೂಟ್ ಮಾಡಿ ಕಳುಹಿಸಿಕೊಟ್ಟಿದ್ದಾರೆ..

ಹೌದು ಈ ಹೆಣ್ಣು ಮಗಳ ಹೆಸರು ಕವನ ಮಳ್ಳಯ್ಯ ಹಿರೇಮಠ.. ವಯಸ್ಸು ಕೇವಲ ಇಪ್ಪತ್ತು.. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಳ್ಳೂರ ಗ್ರಾಮದ ನಿವಾಸಿ. ಬಡ ಕುಟುಂಬದ ಹೆಣ್ಣು ಮಗಳು ತಮ್ಮ ಕುಟುಂಬಕ್ಕೆ ಆದಷ್ಟು ಓದು ಮುಗಿಸಿ ನಂತರ ಶಿಕಾರಿಪುರದ ಗಾರ್ಮೆಂಟ್ಸ್ ನಲ್ಲಿ ಕೆಲಸಕ್ಕೆ ಸೇರಿಕೊಂಡು ತನ್ನ ಕುಟುಂಬದ ನಿರ್ವಹಣೆಗೆ ಸಹಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದರು.. ಜೀವನ ಒಳ್ಳೆಯ ರೀತಿ ಸಾಗುತಿತ್ತು.. ಅಪ್ಪ ಅಮ್ಮನಿಗೆ ಸಹಾಯ ಮಾಡುತ್ತಿರುವ ಸಾರ್ಥಕತೆ ಕವನಳಿಗೆ ಇತ್ತು.. ಆದರೆ ಆ ಸಾರ್ಥಕತೆ ಹೆಚ್ಚು ದಿನ ಉಳಿಯಲಿಲ್ಲ.. ಭಗವಂತನ ನಿರ್ಣಯ ಬೇರೆಯೇ ಇತ್ತು..

ಹೌದು ಕೆಲ ದಿನಗಳ ಹಿಂದೆ ಸೆಪ್ಟೆಂಬರ್ ಒಂಭತ್ತರಂದು ಹೊನ್ನಾಳಿ ತಾಲೂಕಿನ ಸೊರಟೂರ ಗ್ರಾಮದ ಬಳಿ ಓಮಿನಿ ಹಾಗೂ ಚಕ್ಕಡಿ ಗಾಡಿ ನಡುವೆ ನಡೆದ ಘಟನೆಯಿಂದಾಗಿ ಸ್ಥಳದಲ್ಲಿಯೇ ಇಬ್ಬರು ಜೀವ ಕಳೆದುಕೊಂಡರು.. ಇತ್ತ ಅದೇ ವಾಹನದಲ್ಲಿ ಹೋಗುತ್ತಿದ್ದ ಕವನ ಹಿರೇಮಠ ಕೂಡ ಗಾಯಗೊಂಡು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.. ಆದರೆ ವಿಧಿಯ ನಿರ್ಣಯ ಬೇರೆಯೇ ಇತ್ತು.. ಕವನಾಳ ಬ್ರೈನ್ ಡೆಡ್ಡಾಗಿತ್ತು.. ಇನ್ನು ಕವನ ಉಳಿಯುವುದಿಲ್ಲ ಎಂಬುದು ಸ್ಪಷ್ಟವಾಯಿತು.. ಅತ್ತ ಕವನಾಳ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.. ಕಣ್ಣೆದುರಿಗೆ ಮಗಳನ್ನು ನೋಡುನೋಡುತ್ತಾ ಕಳೆದುಕೊಳ್ಳುವ ನೋವು ಯಾವ ಶತ್ರುವಿಗೂ ಬಾರದಿರಲಿ ಎನ್ನುವಂತಿತ್ತು.. ಇನ್ನೇನು ಕವನ ಹೋಗುವ ಸಮಯ ಹತ್ತಿರವಾಗುತಿತ್ತು.. ಬದುಕಿ ಬಾಳಬೇಕಾದ ಹೆಣ್ಣು ಮಗಳು ಕವನ ಹಿರೇಮಠ ಇಪ್ಪತ್ತು ವರ್ಷಕ್ಕೆ ಬಾಳ ಪಯಣ ಮುಗಿಸಿ ಹೊರಟು ಬಿಟ್ಟಳು.. ಆದರೆ ಹೋಗುವ ಕೊನೆ ಕ್ಷಣದಲ್ಲಿಯೂ ಸಾರ್ಥಕತೆ ಮೆರೆದು ಹೋದಳು..

ಹೌದು ಮಗಳಂತೂ ಉಳಿಯೋದಿಲ್ಲ ಆಕೆಯಿಂದ ನಾಲ್ಕು ಜನ ಉಳಿಯಲಿ ಎಂದು ಅಂಗಾಂಗ ದಾನ ಮಾಡಲು ಆಕೆಯ ಹೆತ್ತವರು ನಿರ್ಧರಿಸಿದರು.. ಅದರಂತೆ ಕವನಾಳ ಎರಡು ಕಿಡ್ನಿ, ಹೃದಯ, ಲಿವರ್, ಕಣ್ಣುಗಳು ಹಾಗೂ ಕವನಾಳ ಚರ್ಮವನ್ನೂ ಸಹ ದಾನ ಮಾಡಲಾಯಿತು.. ಏಳು ಮಂದಿಯ ಜೀವ ಉಳಿಸಿ ತಾನು ಕೊನೆಯುಸಿರೆಳೆದ ಕವನಾಳಿಗೆ ಆಸ್ಪತ್ರೆಯ ಸಿಬ್ಬಂದಿಗಳು ವೈದ್ಯರು ಅಧಿಕಾರಿಗಳು ಎಲ್ಲರೂ ಸಹ ಸಾಲುಗಟ್ಟಿ ನಿಂತು ಸಲ್ಯೂಟ್ ಮಾಡುವ ಮೂಲಕ ಗೌರವ ಅರ್ಪಿಸಿದರು..

ಹಳ್ಳಿಯ ಬಡ ಕುಟುಂಬದ ಹೆಣ್ಣು ಮಗಳು ಆದರೆ ಹೋಗುವ ಸಮಯದಲ್ಲಿ ಬೆಲೆಕಟ್ಟಲಾಗದಷ್ಟು ಶ್ರೀಮಂತಳಾಗಿ ಹೋದಳು.. ತನ್ನ ಹೆತ್ತವರ ಜೀವನಕ್ಕೆ ದಾರಿಯಾಗಬೇಕು ಎಂದುಕೊಂಡವಳು ಕೊನೆಗೆ ಏಳು ಜನರಿಗೆ ಜೀವನವನ್ನೇ ಕೊಟ್ಟು ಹೋದಳು.. ಆ ಹೆಣ್ಣು ಮಗಳಿಗೆ ಶಾಂತಿ ಸಿಗಲಿ.. ಕವನಾಳ ಹೆತ್ತವರಿಗೆ ನೋವು ತಡೆಯುವ ಶಕ್ತಿ ನೀಡಲಿ.. ಕೊನೆ ಕ್ಷಣದಲ್ಲಿ ಇಂತಹ ನಿರ್ಧಾರ ತೆಗೆದುಕೊಂಡ ಆ ಬಡ ತಂದೆ ತಾಯಿಗೆ ಸರ್ಕಾರ ಸಹಾಯ ಮಾಡಿ ಮಗಳ ಕಳೆದುಕೊಂಡು ನೋವಿನಲ್ಲಿರುವ ಆ ತಂದೆ ತಾಯಿಯ ಬದುಕಿಗೆ ಆಸರೆಯಾಗುವಂತಾಗಲಿ‌.. ಆಕೆಯ ಹೆತ್ತವರಿಗೆ ಸರ್ಕಾರ ಜೀವನ ಕಟ್ಟಿಕೊಳ್ಳಲು ನೆರವು ನೀಡಿ ಅವರ ಬದುಕಿಗೆ ನೆರವಾಗುವಂತಾಗಲಿ..