ನಿರ್ದೇಶಕನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಕಿರುತೆರೆಯ ಮತ್ತೊಬ್ಬ ಖ್ಯಾತ ನಟಿ..

ಇತ್ತೀಚೆಗೆ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಾಕಷ್ಟು ಕಲಾವಿದರು ಒಬ್ಬರಾದ ಮೇಲೆ ಒಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ನಟಿ ನಿಕ್ಕಿ ಗಲ್ರಾನಿ ಹಾಗೂ ನಟ ಆದಿ ಪಿನಿಶೆಟ್ಟಿ ಆದ್ದೂರಿಯಾಗಿ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಂತರ ದಾಸಪುರಂದರ ಖ್ಯಾತಿಯ ನಟಿ ಲಾವಣ್ಯ ಮತ್ತು ಶಶಿ ಹೆಗ್ಡೆ, ಸೇರಿದಂತೆ ನಾಗಿಣಿ 2 ಖ್ಯಾತಿಯ ನಟ ನೀನಾಧ್ ಕೂಡ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇನ್ನು ಇದೀಗ ಕನ್ನಡ ಕಿರುತೆರೆಯ ಮತ್ತೊಬ್ಬ ಖ್ಯಾತ ನಟ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಾಗಾದರೆ ಯಾರು ಈ ನಟಿ ಎಂದು ತಿಳಿಯುವ ಕುತೂಹಲ ನಿಮಗೂ ಇದ್ದರೆ, ಮುಂದಕ್ಕೆ ಓದಿ..

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳ ಪೈಕಿ ಕನ್ಯಾಕುಮಾರಿ ಧಾರವಾಹಿ ಕೂಡ ಒಂದು. ತನ್ನ ವಿಭಿನ್ನ ಕಥೆ ಹಾಗೂ ಧಾರಾವಾಹಿಯಲ್ಲಿ ದಿನದಿಂದ ದಿನಕ್ಕೆ ಹೊಸ ತಿರುವುಗಳ ಮೂಲಕ ಧಾರವಾಹಿ ಮುಂದಕ್ಕೆ ಸಾಗುತ್ತಿದೆ. ಈ ಧಾರಾವಾಹಿಯ ಮೂಲಕ ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರತಿಭೆಗಳಿಗೆ ತಮ್ಮ ಜೀವನ ರೂಪಿಸಿಕೊಳ್ಳಲು ಒಂದು ಅವಕಾಶ ಮಾಡಿ ಕೊಟ್ಟಿದೆ. ದೈವಶಕ್ತಿ ಹಾಗೂ ದುಸ್ತಶಕ್ತಿ ನಡುವೆ ನಡೆಯುವ ಯುದ್ಧ ಈ ಧಾರಾವಾಹಿಯ ಕಥೆಯಾಗಿದ್ದು, ಸದಾ ದೇವರಲ್ಲಿ ನಂಬಿಕೆ ಇಡುವ ಹುಡುಗಿ, ದೇವಿಯ ರೂಪ ಕನ್ನಿಕಾ ಹಾಗೂ ಕೆಲಸವನ್ನೇ ದೇವರು ಎಂದು ನಂಬುವ ಹುಡುಗ ಚರಣ್ ಈ ಇಬ್ಬರ ನಡುವೆ ಈ ಧಾರಾವಾಹಿಯ ಕಥೆ ಸಾಗಲಿದೆ.

ಈ ಧಾರಾವಾಹಿಯ ಖಳನಾಯಕಿಯಾಗಿ ನಟಿ ರಶ್ಮಿತಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಈ ಧಾರವಾಹಿಯಲ್ಲಿ ಯಾಮಿನಿ ಪಾತ್ರದಲ್ಲಿ ನಟಿ ರಶ್ಮಿತಾ ನಟಿಸುತ್ತಿದ್ದಾರೆ. ಚರಣ್ ನನ್ನು ಬಲಿ ಕೊಟ್ಟು ತನ್ನ ಚರಣ್ ನನ್ನ ಬಲಿಕೊಟ್ಟು ಚಿರಕಾಲ ಯವ್ವನದಿಂದ ಬಾಳುವ ಆಸೆ ಯಾಮಿನಿಯದ್ದು, ಆದರೆ ಈ ದಾರಿಗೆ ಕನ್ನಿಕಾ ಮುಳ್ಳಾಗಿ ನಿಂತಿದ್ದಾಳೆ. ಚರಣ್ ಹಾಗೂ ಅವನ ಕುಟುಂಬಕ್ಕೆ ಕನ್ನಿಕಾ ಕಾವಳಾಗಿ ನಿಂತಿದ್ದಾಳೆ. ಈ ಧಾರಾವಾಹಿಯಲ್ಲಿ ರಶ್ಮಿತಾ ಅವರ ಅಭಿನಯಕ್ಕೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ಇದೀಗ ನಟಿ ರಶ್ಮಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಇದೀಗ ನಟಿ ರಶ್ಮಿತಾ ಅವರ ಮದುವೆಯ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.

ನಟಿ ರಶ್ಮಿತಾ ಶೆಟ್ಟಿ ಕಿರುತೆರೆ ಲೋಕದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ. ಸುಬ್ಬಲಕ್ಷ್ಮೀ, ತ್ರಿವೇಣಿ ಸಂಗಮ ಸೇರಿದಂತೆ ಇನ್ನು ಹಲವಾರು ಧಾರವಾಹಿಗಳಲ್ಲಿ ನಟಿ ರಶ್ಮಿತಾ ನಟಿಸಿದ್ದಾರೆ. ಇದೀಗ ನಟಿ ತಮ್ಮ ಮದುವೆಯಾಗಿದ್ದು, ಅವರ ಮದುವೆ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ನಟಿ ರಶ್ಮಿತಾ ನಿರ್ದೇಶಕ ಹೊನ್ನೇಶ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ಕನ್ವೆನ್ಷನ್ ಹಾಲ್ ನಲ್ಲಿ ನಟಿ ರಶ್ಮಿತಾ ಹಾಗೂ ಹೊನ್ನೇಶ್ ಅವರ ಮದುವೆ ಅದ್ದೂರಿಯಾಗಿ ನೆರವೇರಿದೆ. ಕುಟುಂಬಸ್ಥರು, ಆಪ್ತರು, ಸ್ನೇಹಿತರು ಹಾಗೂ ಕಿರುತೆರೆ ಕಲಾವಿದರೂ ಈ ಮದುವೆಗೆ ಬಾಗಿಯಾಗಿದ್ದರು.

ನಟಿ ರಶ್ಮಿತಾ ಹಾಗೂ ಹೊನ್ನೇಶ್ ಅವರ ಮದುವೆ ನೆನ್ನೆ ಬೆಂಗಳೂರಿನ ಕನ್ವೆನ್ಷನ್ ಹಾಲ್ ನಲ್ಲಿ ಸಾಂಪ್ರದಾಯಿಕವಾಗಿ ಜರುಗಿದೆ. ಇನ್ನು ಮದುವೆಯಲ್ಲಿ ನಟಿ ಕೆಂಪು ಬಣ್ಣದ ಧಾರೆ ಸೀರೆ ಧರಿಸಿದ್ದು, ಅದಕ್ಕೆ ತಕ್ಕಂತೆ ಆಭರಗಳನ್ನು ಧರಿಸಿದ್ದಾರೆ. ಈ ಸೀರೆಯಲ್ಲಿ ನಟಿ ತುಂಬಾ ಮುದ್ದಾಗಿ ಕಾಣಿಸುತ್ತಿದ್ದಾರೆ. ಮದುವೆಗೆ ಕನ್ಯಾಕುಮಾರಿ ಧಾರವಾಹಿಯ ಇಡೀ ತಂಡ ಬಾಗಿಯಾಗಿದ್ದು, ಅವರು ಹಂಚಿಕೊಂಡಿರುವ ಫೋಟೋಗಳ ಮೂಲಕ ನಟಿ ಮದುವೆಯಾಗುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಈ ಫೋಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ. ಇನ್ನು ಈ ನವದಂಪತಿಗೆ ಅಭಿಮಾನಿಗಳು ಸೇರಿದಂತೆ ಕಲಾವಿದರು ಎಲ್ಲರೂ ಸಹ ಶುಭ ಕೋರುತ್ತಿದ್ದಾರೆ.