ಕಾಂತಾರ ಸಿನಿಮಾ ನೋಡಿ ಪಂಜುರ್ಲಿ ವೇಷ ಧರಿಸಿ ರೀಲ್ಸ್ ಮಾಡಿದ ಯುವತಿಯ ಸ್ಥಿತಿ ಏನಾಯ್ತು ನೋಡಿ..

ಕಾಂತಾರ ಸಿನಿಮಾ ಸಧ್ಯ ಕೆಜಿಎಫ್ ನಂತರ ಭಾರತ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರನ್ನು ಮಾಡಿದ್ದು ಕಲೆಕ್ಷನ್ ನಲ್ಲಿಯೂ ನಾನೂರು ಕೋಟಿಯನ್ನು ದಾಟುತ್ತಿದೆ.. ಇನ್ನು ಸಿನಿಮಾದಲ್ಲಿ ನಮ್ಮ ನಾಡಿನ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದು ದೈವಗಳ ಮೇಲಿನ ಭಕ್ತಿ ಹೆಚ್ಚಾಗಿದೆ.. ಆದರೆ ಚಿತ್ರ ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ಕಂಡಾಗಲೇ ಈ ಘಟನೆಗಳು ನಡೆಯಬಹುದೆಂದು ಊಹಿಸಿದ್ದ ರಿಷಭ್ ಶೆಟ್ಟಿ ಅವರು ಯಾರೂ ಸಹ ದೈವದ ವೇಷ ಹಾಕಿ ರೀಲ್ಸ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು.. ಇನ್ನು ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹಿಟ್ ಆದ ದೃಶ್ಯಗಳನ್ನು ರೀಲ್ಸ್ ಮಾಡುವುದು ಡ್ಯಾನ್ಸ್ ಮಾಡುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ.. ಆ ಕಾರಣಕ್ಕೆ ರಿಷಭ ಅವರು ಮನವಿ ಮಾಡಿಕೊಂಡಿದ್ದರು..

ಆದರೂ ಸಹ ಆ ಮಾತುಗಳನ್ನು ಮೀರಿ ಯುವತಿಯೊಬ್ಬಳು ಪಂಜುರ್ಲಿ ದೈವದ ವೇಷ ಹಾಕಿ ರೀಲ್ಸ್ ಮಾಡಿದ್ದು ಈಗ ಆಕೆಯ ಸ್ಥಿತಿ ಏನಾಗಿದೆ ನೋಡಿ.. ಹೌದು ಕಾಂತಾರ ಚಿತ್ರದ ಪಂಜುರ್ಲಿ ದೈವದ ವೇಷವನ್ನು ಧರಿಸಿ ರೀಲ್ಸ್ ಮಾಡಿದ್ದ ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿ ವಿರುದ್ಧ ಅಸಮಾಧಾನ ಕೇಳಿ ಬಂದ ಬೆನ್ನಲ್ಲೆ ಕಲಾವಿದೆಯು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ತಪ್ಪು ಕಾಣಿಕೆ ಹಾಕಿ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯ ಮುಂದೆ ಕ್ಷಮೆಯಾಚಿಸಿದ್ದಾರೆ. ಕುಟುಂಬ ಸಮೇತ ಧರ್ಮಸ್ಥಳಕ್ಕೆ ಆಗಮಿಸಿದ ಪ್ರಸಾದನ ಕಲಾವಿದೆ ಶ್ವೇತಾ ರೆಡ್ಡಿ, ಅರಿಯದೆ ಮಾಡಿರುವ ಕೆಲಸಕ್ಕೆ ಕ್ಷಮೆ ನೀಡೆಂದು ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನೂ ಭೇಟಿಯಾಗಿ ಕ್ಷಮೆ ಕೋರಿದ್ದಾರೆ.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ವೇತಾ ರೆಡ್ಡಿ, ಪಂಜುರ್ಲಿ ದೈವದ ವೇಷ ಹಾಕಿದ ಬಳಿಕ ಸಾಕಷ್ಟು ನೆಗೆಟಿವ್ ಕಮೆಂಟ್‌ಗಳು ಬಂತು. ನಾನು ಯಕ್ಷಗಾನ ಮತ್ತು ದೈವಾರಾಧನೆ ಒಂದೇ ಅಂತಾ ಭಾವಿಸಿದ್ದೆ. ಬೇರೆಯವರ ಭಾವನೆಗಳಿಗೆ ಘಾಸಿ ಮಾಡಿರೋದಕ್ಕೆ ಕ್ಷಮೆಯಾಚಿಸುತ್ತೇನೆ. ಧರ್ಮಸ್ಥಳ ಕ್ಕೆ ಬಂದು ಈ ಕೆಲಸ ಮಾಡಿರೋದಕ್ಕೆ ತಪ್ಪು ಕಾಣಿಕೆ ಹಾಕಿದ್ದೇನೆ ಎಂದರು.

ನಾನು ಮೂಲತಃ ಬೆಂಗಳೂರಿನವಳು. ನನಗೆ ದೈವಾರಾಧನೆಯ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ. ಕಾಂತಾರ ಚಿತ್ರ ನೋಡಿ ಈ ತರಹದ ವೇಷ ಹಾಕಿದ್ದೇನೆ. ಆ ಬಳಿಕ ನಾನು ಮಾಡಿರೋದು ತುಂಬಾ ತಪ್ಪು ಎಂಬುದು ಗೊತ್ತಾಗಿದೆ. ಇನ್ನು ಈ ತರಹ ಮಾಡೋದಿಲ್ಲ. ಹುಡುಗಿಯರು ಈ ತರಹದ ವೇಷ ಹಾಕಬಾರದೆಂದು ಗೊತ್ತಾಗಿದೆ. ಇದಕ್ಕೂ ಬಹಳ ಕಟ್ಟುಪಾಡುಗಳಿವೆ ಅಂತಾ ಗೊತ್ತಾಗಿದೆ. ದೈವ ಕೋಲ ನೋಡಬೇಕು ಅಂತಾ ಮನಸ್ಸಿನಲ್ಲಿ ಆಸೆ ಇದೆ. ಹಿರಿಯರ ಅಭಿಪ್ರಾಯ ಪಡೆದು ಮುಂದೆ ನೋಡುತ್ತೇನೆ ಎಂದಿದ್ದಾರೆ ಶ್ವೇತಾ ರೆಡ್ಡಿ.

ದೈವಕ್ಕೆ, ಅದರ ಸಂಪ್ರದಾಯಕ್ಕೆ ಅಪಚಾರ ಆಗಬಾರದೆಂದು ಹಲವು ಮುಂಜಾಗೃತೆಗಳನ್ನು ತೆಗೆದುಕೊಂಡೇ ಚಿತ್ರೀಕರಣ ಮಾಡಿದ್ದೆವು ಎಂದು ನಿರ್ದೇಶಕ, ನಟ ರಿಷಬ್ ಶೆಟ್ಟಿ ಹಲವು ಸಂದರ್ಶನಗಳಲ್ಲಿ ಹೇಳಿದ್ದರು. ಅಲ್ಲದೆ, ದೈವ ಕೂಗುವ ರೀತಿಯನ್ನು ಅನುಕರಣೆ ಮಾಡಿ ದೈವಕ್ಕೆ ಅಪಮಾನ ಮಾಡಬೇಡಿ ಎಂದು ಸಹ ಅವರು ಮನವಿ ಮಾಡಿದ್ದರು. ಹಾಗಿದ್ದೂ ಕೆಲವರು ಸಾಮಾಜಿಕ ಜಾಲತಾಣದ ರೀಲ್ಸ್‌ಗಳಲ್ಲಿ ದೈವವನ್ನು ಅನುಕರಣೆ ಮಾಡುತ್ತಿದ್ದಾರೆ, ಅದರ ಕೂಗನ್ನು ಅನುಕರಣೆ ಮಾಡುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಹೀಗೆ ಪ್ರಚಾರಕ್ಕಾಗಿ ದೈವದ ರೀತಿ ವೇಷ ಧರಿಸಿ ವಿಡಿಯೋ ಹಂಚಿಕೊಳ್ಳುವವರ ವಿರುದ್ಧ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್, ಶ್ರೀ ಅಂಬಾ ಭವಾನಿ ದೈವ ಶಕ್ತಿ ಜ್ಯೋತಿಷ್ಯರು.. ಮೊ.9845642321 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ‌ ಉಲ್ಭಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ.. ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ.. 9845642321 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ತೊಂದರೆ ಪ್ರೀತಿಯಲ್ಲಿ ನಂಬಿ ಮೋಸ.. ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ವಿಚಾರ ಜನರ ದೃಷ್ಟಿಯಿಂದ ಮನೆಯಲ್ಲಿ ಆಗುವ ತೊಂದರೆ ಹಣಕಾಸಿನ ತೊಂದರೆ ಸ್ತ್ರೀ ಪುರುಷ ವಶೀಕರಣ ಇನ್ನೂ ಅನೇಕ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321