ಬಾವಿಗೆ ಬಿದ್ದ ಕನ್ನಡತಿ‌ ನಟಿ ರಂಜನಿ ರಾಘವನ್.. ಜೆಸಿಬಿ ಹಾಗೂ ಹಗ್ಗದ ಸಹಾಯದಿಂದ ಮೇಲೆತ್ತಿದ ಸಿಬ್ಬಂದಿ..

ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿ ಕನ್ನಡತಿ ಧಾರಾವಾಹಿಯ ನಾಯಕ ನಟಿ ಭುವಿ ಪಾತ್ರಧಾರಿ ರಂಜನಿ ರಾಘವನ್ ಬಾವಿಗೆ ಬಿದ್ದಿದ್ದು, ಜೆಸಿಬಿ ಮೂಲಕ ಅವರನ್ನು ಮೇಲೆತ್ತಲಾಗಿದ್ದು ತಮಗಾದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ… ಹೌದು ಕನ್ನಡತಿ ಧಾರಾವಾಹಿ ಕಳೆದ ಎರಡು ವರ್ಷಗಳಿಂದ ಪ್ರಸಾರವಾಗುತ್ತಿದ್ದ ಕಿರುತೆರೆ ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಿದೆ.. ಅದರಲ್ಲೂ ಡಿಜಿಟಲ್ ನಲ್ಲಿ ಟಾಪ್ ನಲ್ಲಿರುವ‌ ಕನ್ನಡತಿ ಧಾರಾವಾಹಿ ಕನ್ನಡ ಕಿರುತೆರೆಯ ಟಾಪ್ ಹತ್ತು ಧಾರಾವಾಹಿಗಳ ಪಟ್ಟಿಯಲ್ಲಿಯೂ ಸಹ ಒಂದಾಗಿದ್ದು ತನ್ನ ವಿಭಿನ್ನ ಕಥಾ ನಿರೂಪಣಾ ಶೈಲಿ ಹಾಗೂ ಸಂಭಾಷಣೆ ಹಾಗೂ ಧಾರಾವಾಹಿಯಲ್ಲಿ ಭುವಿ ಹಾಗೂ ಹರ್ಷ ನಡುವಿನ ಪ್ರಬುದ್ಧ ಪ್ರೀತಿಯಿಂದಾಗಿ ಜನರ ಮನಗೆದ್ದಿರೋದು ನಿಜ..

ಇನ್ನು ಧಾರಾವಾಹಿ ವಿಚಾರ ಹೊರತು ಪಡಿಸಿದರೆ ಕನ್ನಡತಿ ಮೂಲಕ ಈ ಧಾರಾವಾಹಿಯ ಎಲ್ಲಾ ಕಲಾವಿದರೂ ಸಹ ಖ್ಯಾತಿಯನ್ನು ಗಳಿಸಿದ್ದು ಕನ್ನಡತಿ ಧಾರಾವಾಹಿಯ ಪಾತ್ರದ ಮೂಲಕವೇ ಗುರುತಿಸಿಕೊಳ್ಳುವಂತಾಗಿದ್ದು ಯಶಸ್ಸನ್ನು ಪಡೆದಿದ್ದಾರೆ.. ಇನ್ನು ಇತ್ತ ಪುಟ್ಟ ಗೌರಿ ಮದುವೆಯಲ್ಲಿ ಗೌರಿಯಾಗಿದ್ದ ರಂಜನಿ ರಾಘವನ್ ಕೆಲ ವರ್ಷಗಳ ಬ್ರೇಕ್ ನ ನಂತರ ಕನ್ನಡತಿ ಭುವಿಯಾಗಿ ಎಂಟ್ರಿ ಕೊಟ್ಟು ಮತ್ತೊಮ್ಮೆ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು..

ಸದಾ ತನ್ನವರಿಗಾಗಿ ಮಿಡಿಯುವ ಭುವಿ ತನ್ನ ಸರಳತೆ ಹಾಗೂ ಕನ್ನಡ ಭಾಷೆಯನ್ನು ಬಳಸುವ ರೀತಿಯಿಂದಲೇ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದರು.‌. ಇನ್ನು ಧಾರಾವಾಹಿಯ ಪಾತ್ರ ಮಾತ್ರವಲ್ಲ.. ರಂಜನಿ ಅವರು ಕತೆಗಾರ್ತಿಯೂ ಆಗಿದ್ದು ಕತೆಡಬ್ಬಿ ಎಂಬ ಪುಸ್ತಕ ಬರೆದು ಸಾಕಷ್ಟು ಖ್ಯಾತಿ ಗಳಿಸಿದ್ದರು.. ಇನ್ನು ಸಾಮಾಜಿಕ ಜಾಲತಾಣದಲ್ಲಿ ಭುಬಿ ಅವರು ಆಕ್ಟೀವ್ ಆಗಿದ್ದು ಆಗಾಗ ತಮ್ಮ ಜೀವನದ ಆಗುಹೋಗುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.. ಅದೇ ರೀತಿ ಮೊನ್ನೆ‌ಮೊನ್ನೆಯಷ್ಟೇ ತಾವು ಬಾವಿಗೆ ಬಿದ್ದಿದ್ದು ಜೆಸಿಬಿ ಸಹಾಯದಿಂದ ಮೇಲೆತ್ತಲಾದ ವಿಚಾರವನ್ನು ಸಹ ಹಂಚಿಕೊಂಡಿದ್ದಾರೆ..

ಹೌದು ಕಲಾವಿದರ ಬದುಕು ಬಣ್ಣ ಹಚ್ಚಿಕೊಂಡು ಕ್ಯಾಮರಾ ಮುಂದೆ ನಿಂತು ನಾಲ್ಕು ಮಾತನಾಡಿದರೆ ಸಾಕು ಕೈ ತುಂಬಾ ಸಂಭಾವನೆ ಪಡೆಯಬಹುದು ಎನ್ನುವ ಕಲ್ಪನೆ ಇದೆ.. ಆದರೆ ಅವರಿಗೂ ಸಹ ನಮ್ಮ ನಿಮ್ಮಗಳಂತೆ ಕೆಲಸದಲ್ಲಿ ಸಾಕಷ್ಟು ಸವಾಲುಗಳು ಇದ್ದು ಎಲ್ಲವನ್ನೂ ಸಹ ಎದುರಿಸಿ ನಿಂತಾಗ ಮಾತ್ರವೇ ಅವರೂ ಕಲಾವಿದರಾಗಿ ಭದ್ರವಾಗಿ ನೆಲೆಯೂರಲು ಸಾಧ್ಯ.. ಅದೇ ರೀತಿ ಭುವಿ ಬಾವಿಗೆ ಬಿದ್ದದ್ದು ಕೂಡ ಅದೇ ಕಾರಣಕ್ಕೆ..

ಹೌದು ಭುವಿ ಈ‌ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ ಈ ಹಿಂದಿನ ಧಾರಾವಾಹಿ ಪುಟ್ಟ ಗೌರಿ‌ಮದುವೆ ಧಾರಾವಾಹಿಯಲ್ಲಿ ನನಗೆ ಸಾಕಷ್ಟು ಸವಾಲುಗಳು ಇದ್ದವು.. ಕಾಡಿನಲ್ಲಿ ಚಿತ್ರೀಕರಣವಿತ್ತು.. ಬೀಳುವುದು ಏಳುವುದು ಗಾಯಗಳಾಗುವುದು ಎಲ್ಲವೂ ಸಾಕಷ್ಟಿತ್ತು.. ಆದರೆ ಕನ್ನಡತಿ ಧಾರಾವಾಹಿಯಲ್ಲಿ ಬಹಳ ಸರಳ ಪಾತ್ರವಾಗಿದ್ದು ಅದಕ್ಕಿಂತ ಹೆಚ್ಚು ಪ್ರೀತಿ ಜನರಿಂದ ಸಿಗುತ್ತಿದೆ.. ಆದರೆ ಮುಂದೆ ಈ ಪಾತ್ರದಲ್ಲಿಅಂತಹ ಸವಾಲುಗಳುಳ್ಳು ಸನ್ನಿವೇಶಗಳು ಬಂದರೆ ಮಾಡಲು ಸಿದ್ಧವೆಂದಿದ್ದರು..

ಅಂತಹುದೇ ಸನ್ನಿವೇಶವೊಂದು ಕನ್ನಡತಿ ಧಾರಾವಾಹಿಯಲ್ಲಿ ಎದುರಾಗಿದ್ದು ಸುಮಾರು ಅರವತ್ತು ಅಡಿ ಆಳದ ಬಾವಿಗೆ ಭುವಿ ಬಿದ್ದಿದ್ದಾರೆ.. ಹೌದು ಧಾರಾವಾಹಿಯ ಕತೆಯಲ್ಲಿ ಸಧ್ಯ ಹರ್ಷ ಹಾಗೂ ಭುವಿ ನಡಿವಿನ ಪ್ರೀತಿಯ ವಿಚಾರ ವರೂಧಿನಿಗೆ ತಿಳಿದಿದ್ದು ವರೂ ತನ್ನ ಸ್ನೇಹಿತೆಯಿಂದಲೇ ಹರ್ಷನನ್ನು ಕಿತ್ತುಕೊಳ್ಳುವ ಸಲುವಾಗಿ ಹಸಿರುಪೇಟೆಯ ಭುವಿ ಮನೆಗೆ ಆಗಮಿಸಿದ್ದು ಸಂಚಿಕೆಗಳು ಕುತೂಹಲ ಮೂಡಿಸಿದೆ.. ಅಂತಹುದೇ ಒಂದು ಸಂದರ್ಭದಲ್ಲಿ ವರೂ ಭುವಿಯನ್ನು ಬಾವಿಗೆ ತಳ್ಳುವ ದೃಶ್ಯವಿದ್ದು ಆ ದೃಶ್ಯಕ್ಕಾಗಿ ಭುವಿ ಬಾವಿಗೆ ಬೀಳುವ ಸಾಹಸ ಮಾಡಿದ್ದು ಯಾಬುದೇ ಡೂಪ್ ಆಗಲಿ ಅಥವಾ ಬೊಂಬೆಯನ್ನಾಗಲಿ ಬಳಸದೇ ಇರುವುದು ರಂಜನಿ ಅವರಿಗೆ ತಮ್ಮ ಕೆಲಸದ ಮೇಲಿನ ಶ್ರದ್ಧೆಯನ್ನು ತೋರುತ್ತದೆ.‌. ಇನ್ನು ಸಧ್ಯ ಬಾವಿಗೆ ಬಿದ್ದ ಭುವಿಯನ್ನು ಜೆಸಿಬಿ ಹಾಗೂ ಹಗ್ಗದ ಸಹಾಯದಿಂದ ಮೇಲೆತ್ತಲಾಗಿದ್ದು ವೀಡಿಯೋ ಹಂಚಿಕೊಂಡಿರುವ ಭುವಿ ತೆರೆ ಹಿಂದಿನ ಶ್ರಮ ತೆರೆ ಮೇಲೆ ಬರಲಿದೆ ಎಂದು ಬರೆದು ಪೋಸ್ಟ್ ಮಾಡಿದ್ದು ವೀಡಿಯೋ ನೋಡಿದ ಅಭಿಮಾನಿಗಳು ಭುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..