ವಾಣಿ, ಸಾರಿಕಾ, ಗೌತಮಿ ಬಳಿಕ ಇದೀಗ ಮತ್ತೊಬ್ಬ ಸ್ಟಾರ್ ನಟಿಯ ಜೊತೆ ಕಮಲ್ ಹಾಸನ್ ಲಿವ್ ಇನ್ ರಿಲೇಶನ್ ಶಿಪ್.. ಖುದ್ದು ಸ್ಪಷ್ಟನೆ ಕೊಟ್ಟ ನಟಿ..

ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ನಟನೆಯ ವಿಚಾರದಲ್ಲಿ ಟಾಪ್ ಮೋಸ್ಟ್ ಸ್ಥಾನಗಳಲ್ಲಿ ಒಬ್ಬರಾಗಿರುವ ಕಮಲ್ ಹಾಸನ್ ಅವರ ಹೆಸರು ಸದ್ಯ ವ್ಯಯಕ್ತಿಕ ವಿಚಾರವೊಂದಕ್ಕೆ ಸಂಬಂಧಪಟ್ಟಂತೆ ಸುದ್ದಿಯಾಗುತ್ತಿದೆ.. ಹೌದು ನಟ ಕಮಲ್ ಹಾಸನ್ ಅವರು ಇದೀಗ ಸಾರಿಕ, ಗೌತಮಿ ಅವರ ಬಳಿಕ ಮತ್ತೊಬ್ಬ ಸ್ಟಾರ್ ನಟಿಯ ಜೊತೆ ಲಿವ್ ಇನ್ ರಿಲೇಶನ್ ನಲ್ಲಿ ಇದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ..

ಕಮಲ್ ಹಾಸನ್ ಅವರು ವಾಣಿ ಗಣಪತಿ ಅವರನ್ನು 1978 ರಲ್ಲಿ ಮದುವೆಯಾಗಿದ್ದರು.. ಆನಂತರ 1988 ರಲ್ಲಿ ವಾಣಿ ಅವರಿಂದ ದೂರವಾಗಿ ಸಾರಿಕಾ ಅವರನ್ನು ಮದುವೆಯಾಗಿದ್ದರು.. ಆನಂತರ ಮತ್ತೆ ಸಾರಿಕಾ ಅವರಿಂದಲೂ 2004 ರಲ್ಲಿ ದೂರಾದರು.. ಆ ಬಳಿಕ ನಟಿ ಗೌತಮಿ ಅವರೊಡನೆ ಲಿವ್ ಇನ್ ರಿಲೇಷನ್ ನಲ್ಲಿ ಇದ್ದ ಕಮಲ್ ಹಾಸನ್ ಅವರು ಅದ್ಯಾಕೋ ಸಂಬಂಧ ಸರಿ ಬಾರದ ಕಾರಣ 2016 ರಲ್ಲಿ ಗೌತಮಿ ಅವರಿಂದಲೂ ದೂರಾದರು..

ಆನಂತರ ಇದೀಗ ಕಮಲ್ ಹಾಸನ್ ಅವರ ಹೆಸರು ಮತ್ತೊಂದು ನಟಿಯ ಜೊತೆ ಕೇಳಿ ಬರುತ್ತಿದೆ.. ಹೌದು ಕಮಲ್ ಹಾಸನ್ ಅವರು ನಟಿ ಪೂಜಾ ಕುಮಾರ್ ಅವರ ಜೊತೆ ಡೇಟಿಂಗ್ ನಲ್ಲಿ ಇದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು.

ಕಮಲ್ ಹಾಸನ್ ಅವರ ಜೊತೆ 3 ಸಿನಿಮಾಗಳಲ್ಲಿ ಅಭಿನಯಿಸಿರುವ ಪೂಜಾ ಅವರು ವಿಶ್ವರೂಪಂ, ವಿಶ್ವರೂಪಂ 2, ಉತ್ತಮ್ ವಿಲನ್ ಸಿನಿಮಾದಲ್ಲಿ ಕಮಲ್ ಅವರ ಜೊತೆ ತೆರೆ ಹಂಚಿಕೊಂಡಿದ್ದರು.. ನಂತರ ಇಬ್ಬರ ನಡುವಿನ ಬಾಂಧವ್ಯ ಸ್ನೇಹಕ್ಕಿಂತ ಹೆಚ್ಚಾಗಿತ್ತು..

ನಾಲ್ಕೈದು ವರ್ಷಗಳಿಂದ ಪೂಜಾ ಅವರು ಕಮಲ್ ಅವರ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂದು ಅಲ್ಲಿನ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಸುದ್ದಿಯಾಗಿತ್ತು.. ಕಮಲ್ ಹಾಸನ್ ಅವರ ಪ್ರತಿ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿಯೂ ಪೂಜಾ ಹಾಜರಿರುತ್ತಿದ್ದರು.. ಇಬ್ಬರು ಲಿವ್ ಇನ್ ರಿಲೇಶನ್ ನಲ್ಲಿದ್ದಾರೆ ಎಂಬ ಸುದ್ದಿ ಮೂರ್ನಾಲ್ಕು ದಿನದಿಂದ ವೈರಲ್ ಆದ ಕಾರಣ ಸದ್ಯ ಈ ಬಗ್ಗೆ ಖುದ್ದು ಪೂಜಾ ಅವರೇ ಸ್ಪಷ್ಟನೆ ನೀಡಿದ್ದಾರೆ..

ನನಗೆ ಕಮಲ್ ಹಾಸನ್ ಅವರು ನಾಲ್ಕೈದು ವರ್ಷಗಳಿಂದ ಬಹಳ ಪರಿಚಯ.. ಅವರ ಕುಟುಂಬದವರೂ ನನಗೆ ಆಪ್ತರು‌‌. ಅವರ ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ನಾನು ಭಾಗಿಯಾಗಿದ್ದೇನೆ.. ಅವರ ಮಕ್ಕಳು ಶೃತಿ ಹಾಗೂ ಅಕ್ಷರ ಕೂಡ ನನಗೆ ಕ್ಲೋಸ್.. ಆದರೆ ನಮ್ಮಿಬ್ಬರ ನಡುವೆ ಅಂತಹ ಯಾವುದೇ ಸಂಬಂಧವಿಲ್ಲ.. ನಾವು ಡೇಟಿಂಗ್ ಮಾಡ್ತಿಲ್ಲ ಇದೆಲ್ಲಾ ಗಾಳಿ ಸುದ್ದಿಯಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ..