ಹಾಡುಹಗಲೇ ಕೆ.ಆರ್ ಪೇಟೆ ಬಸ್ ನಿಲ್ದಾಣದಲ್ಲಿ ಮೈ ಮರೆತ ಜೋಡಿ‌‌ ಮಾಡಿರುವ ಕೆಲಸ ನೋಡಿ..

ಫೆಬ್ರವರಿ ತಿಂಗಳು ಬಂದಾಗಿದೆ.. ಪ್ರೇಮಿಗಳು ಅದಾಗಲೇ ವ್ಯಾಲೆಂಟೈನ್ಸ್ ಡೇ ಗೆ ತಯಾರಿ ನಡೆಸಿಕೊಳ್ಳುತ್ತಿದ್ದಾರೆ.. ಪ್ರೇಮಿಗಳ ದಿನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ಕೆಲವರು ತಮ್ಮ ಮನ ಮೆಚ್ಚಿದ ಹುಡುಗ ಹುಡುಗಿಗೆ ಗಿಫ್ಟ್ ತೆಗೆದುಕೊಳ್ಳುವ ತಯಾರಿಯಲ್ಲಿದ್ದರೆ.. ಇನ್ನೂ ಕೆಲ ಪ್ರೇಮಿಗಳು ಇದೇ ಫೆಬ್ರವರಿ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಮದುವೆಯ ಸಂಭ್ರಮದಲ್ಲಿದ್ದಾರೆ.. ಇನ್ನು ಅದೇ ದಿನ ಸ್ಯಾಂಡಲ್ವುಡ್ ಕಲಾವಿದರಾದ ಲವ್ ಮಾಕ್ಟೈಲ್ ಜೋಡಿ ಮಿಲನಾ ನಾಗರಾಜ್ ಹಾಗೂ ಕೃಷ್ಣ ಜೋಡಿ ಮತ್ತು ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ಸಿದ್ದಾರ್ಥ್ ಹೆಗ್ಡೆ ಅವರ ಪುತ್ರ ಅಮರ್ತ್ಯ ಹೆಗ್ಡೆ ಅವರು ಸೇರಿದಂತೆ ಇನ್ನೂ ಅನೇಕ ತಾರಾ ಜೋಡಿಗಳು ಸಹ ಅದೇ ದಿನ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ವಿಶೇಷ..

ಇನ್ನೂ ಪ್ರೇಮಿಗಳ ದಿನ ಬಂತೆಂದರೆ ಪಾರ್ಕ್ ಗಳು ಹೊಟೆಲ್ ಗಳು ಪಿಜ್ಜಾ ಕಾರ್ನರ್ ಗಳು.. ಕಾಫಿ ಡೇ ಗಳು ಪ್ರೇಮಿಗಳಿಂದ ತುಂಬಿ ತುಳುಕೋದು ಸಹಜ‌.. ಆದರೆ ಇಲ್ಲೊಂದು ಜೋಡಿ ಪ್ರೇಮಿಗಳ ದಿನಕ್ಕೂ ಮುಂಚೆಯೇ ಬಸ್ ನಿಲ್ದಾಣದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿ ಹೋಗಿದ್ದಾರೆ.. ಹೌದು ಈ ಘಟನೆ ನಡೆದಿರೋದು ಬೇರೆಲ್ಲೂ ಅಲ್ಲ.. ನಮ್ಮದೇ ರಾಜ್ಯದ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಬಸ್ ನಿಲ್ದಾಣದಲ್ಲಿ.. ಹೌದು ಸಾರ್ವಜನಿಕ ಸ್ಥಳದಲ್ಲಿ ಕೆಲವೊಮ್ಮೆ ಜೋಡಿಗಳು ಮಾಡೋ ಕೆಲಸ ಬಹಳಷ್ಟು ಇರುಸು ಮುರಿಸು ತರಿಸಿಬಿಡುತ್ತದೆ..

ಆದರೆ ಬಸ್ ನಿಲ್ದಾಣದಲ್ಲಿ ಎಲ್ಲರೂ ನೋಡುತ್ತಿದ್ದಾರೆ ಎಂದು ತಿಳಿದರೂ ಸಹ ಮೈ ಮರೆತು ಈ ಜೋಡಿ ಚುಂಬನದಲ್ಲಿ‌ ಮುಳುಗಿ ಹೋಗಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.. ಹೌದು ಕೆ ಆರ್ ಪೇಟೆ ಬಸ್ ನಿಲ್ದಾಣದಲ್ಲಿ ಯುವ ಜೋಡಿಯೊಂದು ಬಸ್ ಬಳಿ ಬಂದು ನಿಂತಿದೆ.. ಆನಂತರ ಬಸ್ ಹಿಂಭಾಗ ತೆರಳಿ ಅಕ್ಕ ಪಕ್ಕ ನೋಡಿ ನಂತರ ಚುಂಬಿಸಲು ಆರಂಭಿಸಿದ್ದಾರೆ.. ದೂರದಲ್ಲಿ ಯಾರೋ ವೀಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರು ಯುವ ಜೋಡಿಯ ನಡೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ..

ಸುತ್ತ ಮುತ್ತ ಜನರು ಓಡಾಡುತ್ತಿರುವುದನ್ನು ನೋಡಿಯೂ ಸಹ ಈ ಜೋಡಿ ಯಾವುದೇ ಮುಜುಗರವಿಲ್ಲದೇ ತಮ್ಮ ಕೆಲಸವನ್ನು ಮುಂದುವರೆಸಿದ್ದು ಸಾರ್ವಜನಿಕರು ಇರುಸು ಮುರುಸು ವ್ಯಕ್ತ ಪಡಿಸಿದ್ದಾರೆ.. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಆ ಕ್ರೋಶವ್ಯಕ್ತಪಡಿಸಿದ್ದಾರೆ..

ಇನ್ನೂ ಬುದ್ದಿ ಪ್ರೌಢತೆ ಇಲ್ಲದ ವಯಸ್ಸು.. ವಯಸ್ಸಿನ ಆಕರ್ಷಣೆಗೆ ಒಳಗಾಗಿ ಅಪ್ಪ ಅಮ್ಮನ ಯೋಚನೆ ಇಲ್ಲದೇ ಕಂಡಕಂಡಲ್ಲಿ ಈ ರೀತಿಯಾಗಿ ನಿಂತು ಮೈ ಮರೆಯುವ ಜೋಡಿಗಳು ಈ ರೀತಿಯಾಗಿ ತಮ್ಮ ವೀಡಿಯೋವನ್ನು ಹೆತ್ತವರು ನೋಡಿದಾಗ ಇಂತಹ ಮಕ್ಕಳನ್ನು ಹೆತ್ತಿದ್ದಕ್ಕೆ ಸಾರ್ಥಕ ಎನಿಸಬೇಕು.. ಸಂಬಂಧಿಕರ ಮುಂದೆ ತಲೆ ಎತ್ತಿ ನಡೆಯುವಂತಹ ಕಾರ್ಯ ಮಾಡಿರುವ ಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿಯೇ ಮರ್ಯಾದೆ ದೊರೆತಿದೆ..

ಒಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಇನ್ನಾದರೂ ಇಂತಹ ಕೆಲಸಗಳು‌ ನಿಲ್ಲಲಿ.. ಮಕ್ಕಳು ಮಾಡುವ ಕೆಲಸ ಹೆತ್ತವರಿಗೆ ಅವಮಾನವಾಗದಂತಿರಲಿ..‌ ಮಕ್ಕಳನ್ನು ಶಾಲೆ ಕಾಲೇಜುಗಳಿಗೆ ನಂಬಿಕೆ ಇಂದ ಕಳುಹಿಸುತ್ತಿರುವ ಹೆತ್ತವರಿಗೆ ಇಂತಹ ವೀಡಿಯೋಗಳಿಂದ ಮಕ್ಕಳ ಮೇಲಿನ ನಂಬಿಕೆ ಹಾಳಾಗದಿರಲಿ..