ವಿಶೇಷ ಸುದ್ದಿ ಜೊತೆಗೆ ಸಂತೋಷ ಹಂಚಿಕೊಂಡ ಅನಿರುದ್ಧ್..

ಕನ್ನಡ ಕಿರುತೆರೆಯ ಸೆನ್ಸೇಷನಲ್ ಧಾರಾವಾಹಿ ಎನ್ನಲಾಗುವ ಜೊತೆಜೊತೆಯಲಿ ಧಾರಾವಾಹಿ‌ ಇದೀಗ ಮತ್ತೊಂದು ದಾಖಲೆ ಬರೆದಿದೆ.. ಹೌದು ಕಳೆದ ವರ್ಷ 2019 ರ ಸೆಪ್ಟೆಂಬರ್ ತಿಂಗಳಿನಲ್ಲಿ ಜೀ ಕನ್ನಡ ವಾಹಿನಿಯಲ್ಲಿ ತನ್ನ ಪ್ರಸಾರವನ್ನು ಆರಂಭಿಸಿದ ಜೊತೆಜೊತೆಯಲಿ ಶುರುವಿನಲ್ಲಿಯೇ ಮೊದಲ ವಾರವೇ ಭರ್ಜರಿ 11.8 ರೇಟಿಂಗ್ ಪಡೆಯುವ ಮೂಲಕ ದಾಖಲೆ ಬರೆದಿತ್ತು.. ಜೊತೆಜೊತೆಯಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಅನಿರುದ್ಧ್ ಅವರನ್ನು ಕನ್ನಡ ಕಿರುತೆರೆಯ ಪ್ರೇಕ್ಷಕರು ಭರ್ಜರಿಯಾಗಿ ಸ್ವಾಗತಿಸಿದರು..

ಇನ್ನು ಒಂದರ ಹಿಂದೆ ಒಂದಂತೆ ರೇಟಿಂಗ್ ವಿಚಾರದಲ್ಲಿ ಅನೇಕ ದಾಖಲೆ ಬರೆದ ಜೊತೆಜೊತೆಯಲಿ ಧಾರಾವಾಹಿ ತನ್ನ ಒಂದು ವರ್ಷದ ಜರ್ನಿಯನ್ನು ಪೂರೈಸಿದೆ.. ಜನರ ಅಚ್ಚುಮೆಚ್ಚಿನ ಧಾರಾವಾಹಿ ಎನಿಸಿಕೊಂಡಿದೆ..

ಇದೀಗ ಜೊತೆಜೊತೆಯಲಿ ಮತ್ತೊಂದು ದಾಖಲೆ ಬರೆದಿದಿದ್ದು ನಟ ಅನಿರುದ್ಧ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸಂತೋಷ ಹಂಚಿಕೊಂಡಿದ್ದಾರೆ.. ಹೌದು ಎಲ್ಲರಿಗೂ ತಿಳಿದಿರುವಂತೆ ಜೊತೆಜೊತೆಯಲಿ ಧಾರಾವಾಹಿ ಎಷ್ಟು ಫೇಮಸ್ಸೋ ಅಷ್ಟೇ ಧಾರಾವಾಹಿಯ ಶೀರ್ಷಿಕೆ ಗೀತೆಯೂ ಸಹ ಫೇಮಸ್ ಆಗಿತ್ತು.. ಕಳೆದ ವರ್ಷವಂತೂ ನವ ವಿವಾಹಿತರ ಪ್ರೀವೆಡ್ಡಿಂಗ್ ಆಲ್ಬಂ ಗಳಲ್ಲೆಲ್ಲಾ ಜೊತೆ ಜೊತೆಯಲಿ ಶೀರ್ಷಿಕೆ ಗೀತೆಯದ್ದೇ ಕಾರುಬಾರಾಗಿತ್ತು..

ಇನ್ನು ಶುರುವಿನಲ್ಲಿ ಕೆಲ ಸಾಲುಗಳನ್ನಷ್ಟೇ ಪ್ರಸಾರ ಮಾಡಿದ್ದ ವಾಹಿನಿ.. ನಂತರದ ದಿನಗಳಲ್ಲಿ ಸಂಪೂರ್ಣ ಗೀತೆಯನ್ನು ಬಿಡುಗಡೆ ಮಾಡಿತ್ತು.. ಇದೀಗ ಜೊತೆಜೊತೆಯಲಿ ಶೀರ್ಷಿಕೆ ಗೀತೆ ಬರೋಬ್ಬರಿ 15 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ.. ಹೌದು ಇದುವರೆಗೂ ಯಾವ ಧಾರವಾಹಿಯ ಶೀರ್ಷಿಕೆ ಗೀತೆಯೂ ಸಹ ಬರೆಯದ ದಾಖಲೆಯನ್ನು ಜೊತೆಜೊತೆಯಲಿ ಬರೆದಿದೆ..

ಈ ವಿಚಾರ ತಿಳಿಸಿರುವ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಅವರು “ಜೊತೆಜೊತೆಯಲಿ ಶೀರ್ಷಿಕೆ ಗೀತೆ 15 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.. ನಿಮ್ಮೆಲ್ಲರ ಪ್ರೀತಿ ಸದಾ ಹೀಗೆ ಇರಲಿ.. ಜೊತೆಜೊತೆಯಲಿ ಸಂಪೂರ್ಣ ಕುಟುಂಬ ಈ ಪ್ರೀತಿಗೆ ಚಿರಋಣಿ ಎಂದಿದ್ದಾರೆ..”

ಇನ್ನು ಕತೆಯ ವಿಚಾರಕ್ಕೆ ಬಂದರೆ ಸದ್ಯ ಆರ್ಯವರ್ಧನ್ ಹಾಗೂ ಅನುವಿನ ಪ್ರೇಮ ನಿವೇದನೆಯಾಗಿದ್ದು ಪ್ರೇಮೋತ್ಸವದ ಸಂಚಿಕೆಗಳು ಜನಮೆಚ್ಚುಗೆಗೆ ಪಾತ್ರವಾಗಿದ್ದು ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ಬಳಸಿ ಚಿತ್ರೀಕರಣ ಮಾಡಿದ್ದು ಜೊತೆಜೊತೆಯಲಿ ಧಾರಾವಾಹಿಯ ಮತ್ತೊಂದು ವಿಶೇಷ ಎನ್ನಬಹುದು..

ಇನ್ನು ಸದ್ಯದಲ್ಲಿಯೇ ಎಲ್ಲರೂ ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಅನು ಆರ್ಯವರ್ಧನ್ ಕಲ್ಯಾಣೋತ್ಸವವೂ ನೆರವೇರಬಹುದಾಗಿದ್ದು ಲಾಕ್ ಡೌನ್ ಬಳಿಕ ಭರ್ಜರಿಯಾಗಿಯೇ ಜೊತೆಜೊತೆಯಲಿ ಕಂ ಬ್ಯಾಕ್ ಮಾಡಿದ್ದು ಮತ್ತೆ ಎಂದಿನಂತೆ ಜನರ ಪ್ರೀತಿಗೆ ಪಾತ್ರವಾಗಿದೆ..