ಜೊತೆಜೊತೆಯಲಿ ಅಭಿಮಾನಿಗಳಿಗೆ ಸಿಹಿಸುದ್ದಿ…

ಕನ್ನಡ ಕಿರುತೆರೆಯ ಸೆನ್ಸೇಷನಲ್ ಧಾರಾವಾಹಿ, 200 ಸಂಚಿಕೆ ಪೂರೈಸಿ ಮೊದಲ ದಿನದಿಂದಲೂ ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಜೊತೆಜೊತೆಯಲಿ ಧಾರಾವಾಹಿ ಪ್ರಿಯರಿಗೆ ಇದೀಗ ಸಿಹಿ ಸುದ್ದಿಯೊಂದು ಬಂದಿದೆ..

ಹೌದು ಅದಾಗಲೇ ಕತೆಯಲ್ಲಿ ಆರ್ಯವರ್ಧನ್ ಅನು ಸಿರಿಮನೆಯ ಬಳಿ ತನ್ನ ಪ್ರೀತಿಯ ವಿಚಾರವನ್ನು ಮಾತಿನ ಮೂಲಕ ಹೇಳಿಕೊಳ್ಳಬೇಕೆಂದು ನಿರ್ಧಾರ ಮಾಡಿಯಾಗಿದೆ.. ಇತ್ತ ಅನುಗಾಗಿ ತಂದಿದ್ದ ಮುತ್ತಿನ ಹಾರ ಆರ್ಯವರ್ಧನ್ ತಾಯಿಯ ಮೂಲಕ ಅನು ಕೈ ಸೇರಿಯೂ ಆಗಿದೆ.. ಇನ್ನು ಪುಷ್ಪರಿಗೆ ಎಲ್ಲಮ್ಮ ತಾಯಿಯ ಸೂಚನೆಯೂ ಸಿಕ್ಕಿದ್ದು ಅನು ಆರ್ಯವರ್ಧನ್ ರ ಕಲ್ಯಾಣಕ್ಕಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆನ್ನಬಹುದು..

ಇನ್ನು ಕಳೆದ ಸಂಚಿಕೆಗಳಲ್ಲಿ ಅನು ಹಾಗೂ ಆರ್ಯವರ್ಧನ್ ಕೊಡವರ ಶೈಲಿಯಲ್ಲಿ ಉಡುಗೆ ತೊಟ್ಟು ವಿಷ್ಣುವರ್ಧನ್ ಅವರ ಮುತ್ತಿನ ಹಾರ ಸಿನಿಮಾ ನೆನೆಪಿಸಿದ ಸಂಚಿಕೆಗಳ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾ‌ಣದಲ್ಲಿ ಒಂದೇ ದಿನದಲ್ಲಿ ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದ್ದು ಅನಿರುದ್ಧ್ ಅವರು ಸಂತೋಷ ಹಂಚಿಕೊಂಡಿದ್ದರು..

ಇನ್ನು ಇದೆಲ್ಲದರ ನಡುವೆ ಇದೀಗ ಜೊತೆಜೊತೆಯಲಿ ಅಭಿಮಾನಿಗಳಿಗೆ ಇಂದು ಸಿಹಿ ಸುದ್ದಿಯೊಂದು ಬಂದಿದೆ.. ಹೌದು ಜೊತೆಜೊತೆಯಲಿ ಇಂದು ಮಹಾಸಂಚಿಕೆ ಪ್ರಸಾರವಾಗುತ್ತಿದ್ದು, ಇಂದು ರಾತ್ರಿ 8.30 ರಿಂದ 9.30 ರವರೆಗೆ ಅಭಿಮಾನಿಗಳಿಗೆ ಜೊತೆಜೊತೆಯಲಿ ಪ್ರೀತಿಯ ಹೂರಣ ಎನ್ನಬಹುದು.. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅನಿರುದ್ಧ್ ಅವರು ಇಂದು ಮಹಾ ಸಂಚಿಕೆ ಪ್ರಸಾರವಾಗಲಿದೆ ನೋಡಿ, ಎಂದಿನಂತೆ ನಿಮ್ಮ ಹಾರೈಕೆ ಇರಲಿ ಎಂದಿದ್ದಾರೆ..