200 ಸಂಚಿಕೆಗಳ ಬಳಿಕ ಜೊತೆಜೊತೆಯಲಿ ಧಾರಾವಾಹಿ ರೇಟಿಂಗ್ ಏನಾಗಿದೆ ಗೊತ್ತಾ?

ಕನ್ನಡ ಧಾರಾವಾಹಿ ಲೋಕದ ದಿಕ್ಕನ್ನೇ ಬದಲಿಸಿದ ಜೊತೆಜೊತೆಯಲಿ ಧಾರಾವಾಹಿ ಇದೀಗ ತನ್ನ 200 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದೆ.. ಕಿರುತೆರೆಯಲ್ಲಿ ಸಂಚಲನ ಮೂಡಿಸಿ ಸೌತ್ ಕಿರುತೆರೆ ಇಂಡಸ್ಟ್ರಿಗಳು ಸಹ ಕನ್ನಡದ ಧಾರಾವಾಹಿಯೊಂದರ ಬಗ್ಗೆ ಮಾತನಾಡುವಂತೆ ಮಾಡಿದ ಧಾರಾವಾಹಿ ಎಂದರೆ ಅದು ಜೊತೆಜೊತೆಯಲಿ ಎಂದರೆ ತಪ್ಪಾಗಲಾರದು.. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಧಾರಾವಾಹಿಯ ಪ್ರಸಾರ ಶುರುವಾಯಿತು.. ಧಾರಾವಾಹಿಯಲ್ಲಿ ಅದ್ಧೂರಿತನದ ಜೊತೆಗೆ ಕತೆಯ‌ ಗಟ್ಟಿತನ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.. ಮೊದಲವಾರವೇ ದಾಖಲೆಯ 11.8 ಟಿವಿಆರ್ ಅನ್ನು ಪಡೆದುಕೊಂಡು ನಿಬ್ಬೆರಗಾಗಿಸಿತು..

ಕತೆಯ ನಿರೂಪಣೆ, ಅನಿರುದ್ಧ್ ಅವರ ನಟನೆ, ಮದ್ಯಮ ವರ್ಗದ ಕುಟುಂಬದ ನೈಜ್ಯ ಚಿತ್ರಣಗಳು, ಎಲ್ಲಾ ಕಲಾವಿದರ ಸಹಜ ಅಭಿನಯ, ಮನಸೆಳೆಯುವಂತ ಶೀರ್ಷಿಕೆ ಗೀತೆ.. ಎಲ್ಲವೂ ಒಟ್ಟಾದಾಗ ಯಶಸ್ಸು ಖಂಡಿತ ಎನ್ನುವುದನ್ನು ಸಾಭೀತು ಮಾಡಿತು ಜೊತೆಜೊತೆಯಲಿ.. ಬರುಬರುತ್ತಾ ತನ್ನ ರೇಟಿಂಗ್ ಅನ್ನು ಹೆಚ್ಚಿಸಿಕೊಳ್ಳುತ್ತಲೇ ಬಂತು.. ಮೊದಲ ವಾರವೇ ಶುಭಾರಂಭ ಮಾಡಿದ ಜೊತೆ ಜೊತೆಯಲಿ ನಂತರದ ದಿನಗಳಲ್ಲಿ ಜೀ ವಾಹಿನಿಯ ಬಹಳಷ್ಟು ಧಾರಾವಾಹಿಗಳು ರೇಟಿಂಗ್ ನಲ್ಲಿ 10 ರ ಗಡಿ ದಾಟಿದವು..

ಇನ್ನು ಬಹಳಷ್ಟು ವಾರಗಳು ನಂಬರ್ ಒನ್ ಪಟ್ಟ ಉಳಿಸಿಕೊಂಡು ಬಂದ ಜೊತೆಜೊತೆಯಲಿ ಧಾರಾವಾಹಿಯನ್ನು ಕೆಲ ವಾರಗಳ ಹಿಂದೆ ಅದೇ ವಾಹಿನಿಯ ಗಟ್ಟಿಮೇಳ ಧಾರಾವಾಹಿ ಹಿಂದಿಕ್ಕಿ‌ ಮೊದಲ ಸ್ಥಾನ ಪಡೆದುಕೊಂಡಿತು.. ಕೆಲವು ವಾರಗಳು ಜೊತೆಜೊತೆಯಲಿ ಧಾರಾವಾಹಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು..

ಇದೀಗ 200 ರ ಸಂಚೆಕೆಯ ಸಂಭ್ರಮದಲ್ಲಿರುವ ಜೊತೆಜೊತೆಯಲಿ ಧಾರಾವಾಹಿ ತಂಡಕ್ಕೆ ಮತ್ತೊಂದು ಶುಭ ಸುದ್ದಿ.. ಹೌದು ಮೊನ್ನೆಯಷ್ಟೇ 200 ರ ಸಂಚಿಕೆ ಪ್ರಸಾರವಾದ ಸಂಭ್ರಮವನ್ನು ಧಾರಾವಾಹಿ ತಂಡದವರು ಹಂಚಿಕೊಂಡಿದ್ದರು.. ಇದೀಗ ಮತ್ತೊಮ್ಮೆ ಜೊತೆಜೊತೆಯಲಿ ಧಾರಾವಾಹಿ ರೇಟಿಂಗ್ ನಲ್ಲಿಯೂ ಸಹ ಮೊದಲ ಸ್ಥಾನ ಪಡೆದುಕೊಂಡಿದೆ.. ಹೌದು ಕಳೆದ ವಾರದ ಕಿರುತೆರೆ ಕಾರ್ಯಕ್ರಮಗಳ ರೇಟಿಂಗ್ ಬಿಡುಗಡೆಯಾಗಿದ್ದು ಮತ್ತೆ ಜೊತೆಜೊತೆಯಲಿ ಮೊದಲ ಸ್ಥಾನಕ್ಕೆ ಮರಳಿದೆ.. ಇನ್ನುಳಿದಂತೆ ಗಟ್ಟಿಮೇಳ ಎರಡನೇ ಸ್ಥಾನ ಪಡೆದುಕೊಂಡಿದೆ..