ಒಟ್ಟೊಟ್ಟಿಗೆ 2 ಗುಡ್ ನ್ಯೂಸ್ ಕೊಟ್ಟ ಆರ್ಯವರ್ಧನ್..

ಕನ್ನಡ ಕಿರುತೆರೆಯ ಅಚ್ಚುಮೆಚ್ಚಿನ ಧಾರಾವಾಹಿ ಜೊತೆಜೊತೆಯಲಿ ಹೀರೋ ನಮ್ಮ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಅವರು ಅಭಿಮಾನಿಗಳಿಗೆ ಎರೆಡೆರೆಡು ಗುಡ್ ನ್ಯೂಸ್ ಗಳನ್ನು ಕೊಟ್ಟಿದ್ದಾರೆ..

ಅನಿರುದ್ಧ್ ಅವರು ಕಿರುತೆರೆಗೆ ಕಾಲಿಡುತ್ತಲೇ ಒಂದು ಸಂಚಲನವೇ ಮೂಡಿದೆ. ಧಾರಾವಾಹಿ ನೋಡದವರೆಲ್ಲಾ ಧಾರಾವಾಹಿ ನೋಡುವಂತಾಗಿದೆ.. ರಾತ್ರಿ 8.30 ಆಯಿತೆಂದರೆ ಟಿವಿ ಮುಂದೆ ಗಂಡಸರೂ ಕೂಡ ಹಾಜರಾಗುತ್ತಿದ್ದಾರೆ ಎಂದರೆ ಅದು ಆರ್ಯವರ್ಧನ್ ಮಾಡಿರುವ ಮೋಡಿ ಎನ್ನಬಹುದು.

ಇನ್ನು ಆರ್ಯವರ್ಧನ್ ಅವರು ಕೊಟ್ಟ ಗುಡ್ ನ್ಯೂಸ್ ಗಳ ಬಗ್ಗೆ ಮಾತನಾಡೋಣ.. ಅನಿರುದ್ಧ್ ಅವರು ಕಿರುತೆರೆಗೆ ಬರುವ ಮುನ್ನ ಸಾಮಾಜಿಕ ಕಳಕಳಿಯುಳ್ಳ ಕಿರುಚಿತ್ರ ಗಳ ತಯಾರಿಯಲ್ಲಿ ತಮ್ಮನ್ನು‌ ತಾವು ತೊಡಗಿಸಿಕೊಂಡಿದ್ದರು.. ಒಂದಲ್ಲಾ ಎರಡಲ್ಲಾ ಒಂದೇ ದಿನ ಅದರಲ್ಲೂ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನದಂದು ಬರೋಬ್ಬರಿ 6 ಕಿರುಚಿತ್ರಗಳನ್ನು ಬಿಡುಗಡೆ ಮಾಡಿದ್ದರು.

ಅನಿರುದ್ಧ್ ಅವರಿಗೆ ಬೆನ್ನೆಲುಬಾಗಿ ನಿಂತದ್ದು ಮತ್ಯಾರೂ ಅಲ್ಲ ಕೀರ್ತಿ ವಿಷ್ಣುವರ್ಧನ್ ಅವರು. ಹೌದು ಕೀರ್ತಿ ಇನೋವೇಷನ್ಸ್ ಅಡಿಯಲ್ಲಿ ಈ ಎಲ್ಲಾ ಕಿರುಚಿತ್ರಗಳು ನಿರ್ಮಾಣಗೊಂಡಿದ್ದವು.

ಈ ಎಲ್ಲಾ ಕಿರುಚಿತ್ರಗಳು ವಿವಿಧ ವಿಭಾಗದಡಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅನಿರುದ್ಧ್ ಅವರ ಹೆಸರಿನಲ್ಲಿ ಬರೋಬ್ಬರಿ 17 ವಿಶ್ವ ದಾಖಲೆಗಳು ನಿರ್ಮಾಣಗೊಂಡಿವೆ. ಈ ಬಗ್ಗೆ ನಿನ್ನೆಯಷ್ಟೇ ಸಂತೋಷ ಹಂಚಿಕೊಂಡಿರುವ ಅನಿರುದ್ಧ್ ಅವರು ಇದೆಲ್ಲಾ ಡಾ.ವಿಷ್ಣುವರ್ಧನ್ ಅವರು ಹಾಗೂ ಎಲ್ಲಾ ಕನ್ನಡಿಗರ ಆಶೀರ್ವಾದದ ಫಲ ಎಂದಿದ್ದಾರೆ.

ಇನ್ನು ಎರಡನೇ ಸಿಹಿ ಸುದ್ದಿಯೂ ಕೂಡ ದಾಖಲೆಯ ಕುರಿತಾಗಿಯೇ ಆದರೆ ಇದು ಕಿರುಚಿತ್ರದ ದಾಖಲೆಯಲ್ಲ.. ಬದಲಾಗಿ ನಮ್ಮ ನಿಮ್ಮೆಲ್ಲರ ಮೆಚ್ಚಿನ ಜೊತೆಜೊತೆಯಲಿ ಧಾರಾವಾಹಿಯ ದಾಖಲೆ.. ಹೌದು ಈ ವಾರ ಜೊತೆಜೊತೆಯಲಿ ಧಾರಾವಾಹಿ ದಾಖಲೆಯ 15.2 ಟಿ ಆರ್ ಪಿ ಯನ್ನು ಪಡೆದು ಹೊಸ ಇತಿಹಾಸವನ್ನು ಸೃಷ್ಟಿಸಿದೆ.. ಇದುವರೆಗೂ ಯಾವುದೇ ಧಾರಾವಾಹಿ ಪಡೆಯದ ರೇಟಿಂಗ್ ಅನ್ನು ಜೊತೆಜೊತೆಯಲಿ ಪಡೆದುಕೊಂಡಿದ್ದು, ನಿಜಕ್ಕೂ ಕನ್ನಡ ಕಿರುತೆರೆಯ ಕಡೆ ಬೇರೆ ಇಂಡಸ್ಟ್ರಿಗಳು ಮುಖ ಮಾಡುವಂತಾಗಿದೆ.

ಈ ಸಂಭ್ರಮದ ಫೋಟೋವನ್ನು ಹಂಚಿಕೊಂಡಿರುವ ಅನಿರುದ್ಧ್ ಅವರು ಪ್ರೇಕ್ಷಕರಿಗೆ ಹಾಗೂ ತಮ್ಮ ಜೊತೆಜೊತೆಯಲಿ ಧಾರಾವಾಹಿ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

Latest from News

Go to Top