ಜೊತೆಜೊತೆಯಲಿ ಧಾರಾವಾಹಿಗೆ ಹೊಸ ನಾಯಕಿ ಎಂಟ್ರಿ.. ಧಾರಾವಾಹಿ ಬಿಟ್ರಾ ಮೇಘಾ ಶೆಟ್ಟಿ..

ಕನ್ನಡ ಕಿರುತೆರೆಯಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದ ಧಾರಾವಾಹಿ ಜೊತೆಜೊತೆಯಲಿ. ಎರಡು ವರೆ ವರ್ಷದ ಹಿಂದೆ ಈ ಧಾರಾವಾಹಿ ಆರಂಭವಾದಾಗ ಜನರಲ್ಲಿ ಎಂತಹ ಕ್ರೇಜ್ ಸೃಷ್ಟಿಯಾಗಿತ್ತು ಎಂದು ನಾವರಲ್ಲರು ನೋಡಿದ್ದೇವೆ, ಸೀರಿಯಲ್ ಅಂದ್ರೆ ಮೂಗು ಮುರಿಯುತ್ತಿದ್ದವರು ಕೂಡ ರಾತ್ರಿ 8:30ಕ್ಕೆ ಬಂದು ಟಿವಿ ಮುಂದೆ ಕುಳಿತಿರುತ್ತಿದ್ದರು, ಅಷ್ಟರ ಮಟ್ಟಿಗೆ ಈ ಸೀರಿಯಲ್ ಜನರಿಗೆ ತುಂಬಾ ಇಷ್ಟವಾಗಿತ್ತು. ಮಧ್ಯದಲ್ಲಿ ತನ್ನ ಚಾರ್ಮ್ ಕಳೆದುಕೊಂಡಿದ್ದ ಜೊತೆ ಜೊತೆಯಲಿ ಧಾರಾವಾಹಿ ಈಗ ಮರಳಿ ಹಳೆಯ ಚಾರ್ಮ್ ಗೆ ಬರುತ್ತಿದೆ..ಪ್ರತಿದಿನ ಸೀರಿಯಲ್ ನಲ್ಲಿ ಹೊಸ ಟ್ವಿಸ್ಟ್ ಸಿಗುತ್ತಿದ್ದು, ಕಥೆಯ ಬಗ್ಗೆ ವೀಕ್ಷಕರಿಗೆ ಕುತೂಹಲ ಹೆಚ್ಚಾಗಿದೆ. ದಿನೇ ದಿನೇ ನಾಳೆ ಏನಾಗಬಹುದು ಎಂದು ಕಾಯುವ ಹಾಗೆ ಮಾಡುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಗೆ ಈಗ ಹೊಸ ನಾಯಕಿಯ ಎಂಟ್ರಿ ಆಗಿದೆ. ಹಾಗಿದ್ರೆ ಮೇಘಾ ಶೆಟ್ಟಿ ಸೀರಿಯಲ್ ಇಂದ ಹೊರಗೆ ಬರ್ತಾರಾ? ಈ ಹೊಸ ನಟಿ ಯಾರು?

ಜೊತೆ ಜೊತೆಯಲಿ ಸೀರಿಯಲ್ ನಟ ಅನಿರುದ್ಧ್ ಅವರ ಬದುಕಿಗೆ ಹೊಸ ಆಯಾಮ ಎನ್ನುವಂತಾದ ಸೀರಿಯಲ್ ಅಂದ್ರೆ ತಪ್ಪಾಗುವುದಿಲ್ಲ. ಚಿತ್ರರಂಗದಲ್ಲಿ ನಿರೀಕ್ಷೆಯ ಮಟ್ಟಕ್ಕೆ ಯಶಸ್ಸು ಮತ್ತು ಒಳ್ಳೆಯ ಪಾತ್ರಗಳು ಸಿಗದೆ ನಟನೆಯಿಂದ ದೂರ ಉಳಿದಿದ್ದ ಅನಿರುದ್ಧ್ ಅವರನ್ನು ಒಂದೇ ದಿನದಲ್ಲಿ ಸ್ಟಾರ್ ಮಾಡಿದ ಸೀರಿಯಲ್ ಜೊತೆ ಜೊತೆಯಲಿ. ಇಷ್ಟು ವರ್ಷದ ಕೆರಿಯರ್ ನಲ್ಲಿ ಅನಿರುದ್ಧ್ ಅವರಿಗೆ ಸಿಗದೆ ಇದ್ದ ಜನಪ್ರಿಯತೆ, ಜೊತೆ ಜೊತೆಯಲಿ ಸೀರಿಯಲ್ ಮೂಲಕ ಒಂದೆರೆಡೇ ಎಪಿಸೋಡ್ ನಲ್ಲಿ ಸಿಕ್ಕಿತು. ಆರ್ಯವರ್ಧನ್ ಪಾತ್ರದ ಗತ್ತು ಗಾಂಭೀರ್ಯ, ಪ್ರಭುದ್ಧವಾದ ಅಭಿನಯ ಇದೆಲ್ಲವನ್ನು ವೀಕ್ಷಕರು ತುಂಬಾ ಇಷ್ಟಪಟ್ಟರು. ಆರ್ಯವರ್ಧನ್ ಪಾತ್ರಕ್ಕೆ ಬೇರೆ ಯಾರು ಸರಿಹೊಂದುವುದಿಲ್ಲ ಎನ್ನುವ ಹಾಗೆ ಅನಿರುದ್ಧ್ ಅವರು ಪಾತ್ರದ ಪರಕಾಯ ಪ್ರವೇಶ ಮಾಡಿದ್ದಾರೆ..

ಈ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಹೊಸ ಪ್ರತಿಭೆ ಮೇಘಾ ಶೆಟ್ಟಿ. ನಾಯಕಿ ಅನು ಸಿರಿಮನೆ ಪಾತ್ರದಲ್ಲಿ, ಮುದ್ದಾದ ಮತ್ತು ಮುಗ್ಧವಾದ ನಟನೆ ಮೂಲಕ ಮೇಘಾ ಶೆಟ್ಟಿ ಎಲ್ಲರ ಮನೆಮಗಳಂತೆಯೇ ಆಗಿಬಿಟ್ಟರು. ಅದೆಷ್ಟೋ ಹುಡುಗರ ಕ್ರಶ್ ಆಗಿಬಿಟ್ಟರು ಅನು. ಈಗ ಮೇಘಾ ಶೆಟ್ಟಿ ಅವರಿಗೆ ಕಿರುತೆರೆ ಮಾತ್ರವಲ್ಲ ಬೆಳ್ಳಿತೆರೆಯಲ್ಲು ಕೂಡ ಭಾರಿ ಡಿಮ್ಯಾಂಡ್ ಇದೆ. ಮೇಘಾ ನಟಿಸಿರುವ ಮೊದಲ ಸಿನಿಮಾ ಬಿಡುಗಡೆ ಆಗುವ ಮೊದಲೇ ಸಾಲು ಸಾಲು ಅವಕಾಶಗಳು ಮೇಘಾರನ್ನು ಹುಡುಕಿಕೊಂಡು ಬರುತ್ತಿವೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಾಯಕ ಮತ್ತು ನಾಯಕಿಯ ಪಾತ್ರಗಳು ಮಾತ್ರವಲ್ಲದೆ ಅದ್ಭುತವಾದ ಕಲಾವಿದರಿದ್ದಾರೆ. ಅವರೆಲ್ಲರ ಪಾತ್ರಗಳು ಕೂಡ ಜನರಿಗೆ ಇಷ್ಟವಾಗಿದೆ.

ಆರ್ಯ ಅನು ಮದುವೆ ಆಗುವ ವರೆಗೂ ಒಂದು ರೀತಿ ಹೋಗುತ್ತಿತ್ತು ಕಥೆ, ಹೆಚ್ಚಾಗಿ ಅನು ಆರ್ಯನ ಪ್ರೀತಿ, ಅವರಿಬ್ಬರು ಬರುವ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಹೇಗೆ ಒಂದಾಗುತ್ತಾರೆ ಎನ್ನುವುದರ ಮೇಲೆಯೇ ಹೆಚ್ಚು ಗಮನ ಹರಿಸಲಾಗುತ್ತಿತ್ತು. ಆದರೆ ಅನು ಆರ್ಯ ಮದುವೆ ನಂತರ ಧಾರಾವಾಹಿಯ ಕಥೆ ಬಹಳ ಕುತೂಹಲವಾಗಿ ಸಾಗುತ್ತಿದೆ. ಆರ್ಯವರ್ಧನ್ ಬಗ್ಗೆ ಯಾರೂ ಊಹಿಸಿರದ ವಿಚಾರಗಳು ಹೊರಬರುತ್ತಿವೆ. ಆರ್ಯವರ್ಧನ್ ಹೆಸರು ನಿಜಕ್ಕೂ ಅವರ ಹೆಸರೇ ಅಲ್ಲ. ನಿಜವಾದ ಹೆಸರು ಸುಭಾಷ್ ಪಾಟೀಲ್ ಎಂದು ತಿಳಿದು ಅನು ಕೂಡ ಶಾಕ್ ಆಗಿದ್ದಾಳೆ.

ಮತ್ತೊಂದು ಕಡೆ ಅನು ಪಾತ್ರದ ಬಗ್ಗೆ ಕೂಡ ಹೊಸ ಟ್ವಿಸ್ಟ್ ಸಿಗುತ್ತಿದೆ. ರಾಜನಂದಿನಿಯ ಪುನರ್ಜನ್ಮ ಎಂದು ಶಾರದಾದೇವಿಗೆ ನಂಬಿಕೆ ಬಂದಿದೆ. ಯಾಕಂದ್ರೆ ರಾಜನಂದಿನಿ ಗುಣಗಳು ಮತ್ತು ಅನು ಗುಣಗಳು ತುಂಬಾ ಹೋಲಿಕೆ ಆಗುತ್ತಿದೆ. ರಾಜನಂದಿನಿ ಸಾವು ಮತ್ತು ಅನು ಹುಟ್ಟಿದ ಸಮಯ ಈ ಎರಡಕ್ಕೂ ಸಂಬಂಧ ಇದೆ ಎಂದು ತೋರಿಸಲಾಗುತ್ತಿದೆ. ಕಥೆ ಇಷ್ಟು ಕುತೂಹಲಕಾರಿಯಾದ ಹಂತ ತಲುಪುವ ಸಮಯದಲ್ಲಿ ಜೊತೆ ಜೊತೆಯಲಿ ಧಾರಾವಾಹಿಗೆ ಹೊಸ ನಾಯಕಿಯ ಎಂಟ್ರಿ ಆಗಿದೆ. ಒಂದು ಸಣ್ಣ ಸುಳಿವಿನ ಮೂಲಕ ಆ ಹೊಸ ನಾಯಕಿ ಯಾರು ಎನ್ನುವುದು ಗೊತ್ತಾಗಿದೆ.

ಜೊತೆ ಜೊತೆಯಲಿ ಧಾರಾವಾಹಿಗೆ ಹೊಸ ಎಂಟ್ರಿ ಕೊಟ್ಟಿರುವುದು ಸ್ಯಾಂಡಲ್ ವುಡ್ ನ ಖ್ಯಾತ ನಟಿ ಸೋನು ಗೌಡ. ಹೊಸ ನಟಿ ಬಂದಿದ್ದಾರೆ ಅಂದ್ರೆ ಮೇಘಾ ಶೆಟ್ಟಿ ಸೀರಿಯಲ್ ಇಂದ ಹೊರ ಹೋಗ್ತಾ ಇದ್ದಾರಾ ಎನ್ನುವ ಪ್ರಶ್ನೆ ನಿಮ್ಮಲ್ಲಿ ಕಾಡಬಹುದು. ಆದರೆ ಮೇಘಾ ಶೆಟ್ಟಿ ಅವರು ಅನು ಸಿನಿಮನೆ ಪಾತ್ರದಲ್ಲೆ ನಟಿಸಲಿದ್ದಾರೆ, ಜೊತೆ ಜೊತೆಯಲಿ ಧಾರಾವಾಹಿ ಮುಗಿಯುವವರೆಗೂ ಮೇಘಾ ಶೆಟ್ಟಿ ಸೀರಿಯಲ್ ಇಂದ ಹೊರಬರುವುದಿಲ್ಲ. ನಟಿ ಸೋನು ಗೌಡ ಎಂಟ್ರಿ ಕೊಡುತ್ತಿರುವುದು ರಾಜನಂದಿನಿ ಪಾತ್ರದ ಮೂಲಕ ಎನ್ನಲಾಗಿದೆ. ಈಗಾಗಲೇ ರಾಜನಂದಿನಿ ಅಭಿನಯದ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದ್ದು, ಶೀಘ್ರದಲ್ಲೇ ಪ್ರಸಾರವಾಗಲಿದೆ. ಈ ಹೊಸ ಕಥೆ ಮತ್ತು ನಾಯಕಿಯ ಎಂಟ್ರಿ ಜೊತೆ ಜೊತೆಯಲಿ ಸೀರಿಯಲ್ ಅನ್ನು ಇನ್ನು ದೊಡ್ಡ ಹಿಟ್ ಮಾಡುವುದರಲ್ಲಿ ಯಾವುದೇ ಸಂದೇಹ ಇಲ್ಲ.