ಜೊತೆಜೊತೆಯಲಿ ಧಾರಾವಾಹಿಯಿಂದ ಹೊರ ನಡೆದ ನಟ ಅನಿರುದ್ಧ್.. ನಿಜಕ್ಕೂ ನಡೆದದ್ದೇನು ಗೊತ್ತಾ..

ಕನ್ನಡ ಕಿರುತೆರೆಯ ಸೆನ್ಸೇಷನಲ್ ಧಾರಾವಾಹಿ ಎಂದೇ ಹೆಸರಾಗಿದ್ದ ಜೊತೆಜೊತೆಯಲಿ ಧಾರಾವಾಹಿಗೆ ಇಷ್ಟು ದಿನ ಜೀವ ತುಂಬಿದ್ದ ನಟ ಅನಿರುದ್ಧ್ ಅವರು ನಿನ್ನೆ ಧಾರಾವಾಹಿಯ ಚಿತ್ರೀಕರಣದಿಂದ ಹೊರ ನಡೆದಿದ್ದಾರೆ.. ಹೌದು ಇನ್ನು ಮುಂದೆ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಅನಿರುದ್ಧ್ ಕಾಣಿಸುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ.. ಇದಕ್ಕೆ ನಿಜವಾದ ಕಾರಣ ಬೇರೆಯೇ ಇದೆ.. ಹೌದು ಧಾರಾವಾಹಿ ತಂಡ ಹಾಗೂ ಅನಿರುದ್ಧ್ ಅವರ ನಡುವಿನ ವೈಮನಸ್ಸು ಅಸಮಾಧಾನಗಳೇ ಇದಕ್ಕೆ ಕಾರಣ ಎನ್ನಲಾಗಿದೆ..

ಜೊತೆಜೊತೆಯಲಿ ಧಾರಾವಾಹಿ ಕಳೆದ ಮೂರು ವರ್ಷದ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಆರಂಭವಾಗಿತ್ತು.. ನಟ ಅನಿರುದ್ಧ್ ಅವರೂ ಸಹ ಈ ಧಾರಾವಾಹಿಯ ಮೂಲಕ ಸಿನಿಮಾದಿಂದ ಕಿರುತೆರೆಗೆ ಕಾಲಿಟ್ಟಿದ್ದರು.. ನಿರೀಕ್ಷೆಗೂ ಮೀರಿ ಈ ಧಾರಾವಾಹಿ ಸಕ್ಸಸ್ ತಂದುಕೊಟ್ಟಿತ್ತು.. ಆರ್ಯವರ್ಧನ್ ಪಾತ್ರಕ್ಕೆ ಜೀವ ತುಂಬಿದ್ದ ಅನಿರುದ್ಧ್ ಅವರನ್ನು ಜನರು ಆರ್ಯವರ್ಧನ್ ಎಂಬ ಹೆಸರಿನಲ್ಲಿಯೇ ಗುರುತಿಸಲು ಆರಂಭಿಸಿದರು.. ಅದರಲ್ಲೂ ಆರ್ಯ ಅನು ಜೋಡಿ ದೊಡ್ಡ ಹಿಟ್ ಆಗಿತ್ತು.. ಆದರೀಗ ಧಾರಾವಾಹಿ ಏಳನೂರು ಸಂಚಿಕೆ ಪೂರೈಸುತ್ತಿದ್ದಂತೆ ಅನಿರುದ್ಧ್ ಅವರನ್ನು ಧಾರಾವಾಹಿಯಿಂದ ಕೈ ಬಿಡಲಾಗಿದೆ..

ನಿನ್ನೆ ಗುರುವಾರ ಧಾರಾವಾಹಿಯ ಚಿತ್ರೀಕರಣ ನಡೆಯುವ ಸಮಯದಲ್ಲಿ ದೃಶ್ಯ ಒಂದರ ಚಿತ್ರೀಕರಣವಾಗುವಾಗ ಅನಿರುದ್ಧ್ ಅವರು ಆ ದೃಶ್ಯ ಹಾಗೆ ಬರೋದು ಬೇಡ ಎಂದು ಅಸಮಾಧಾನ ವ್ಯಕ್ತ ಪಡಿಸಿ ಬದಲಿಸುವಂತೆ ಹೇಳಿದರು.. ಆದರೆ ಧಾರಾವಾಹಿ ತಂಡ ಅದಕ್ಕೆ ಒಪ್ಪಲಿಲ್ಲ.. ಇದರಿಂದ ಕೋಪಗೊಂಡ ಅನಿರುದ್ಧ್ ಅವರು ಧಾರಾವಾಹಿಯಿಂದ ಹೊರನಡೆದರು..

ಅನಿರುದ್ಧ್ ಅವರ ನಡವಳಿಕೆಯಿಂದ ಬೇಸತ್ತ ಧಾರಾವಾಹಿ ತಂಡ ಅನಿರುದ್ಧ್ ಅವರನ್ನು ಧಾರಾವಾಹಿಯಿಂದ ಕೈಬಿಡುವ ನಿರ್ಧಾರ ಮಾಡಿದರು.. ಅಷ್ಟೇ ಅಲ್ಲದೇ ಇವರ ನಿರ್ಧಾರವನ್ನು ವಾಹಿನಿಗೆ ತಿಳಿಸಲಾಗಿ ಅವರೂ ಸಹ ಸಮ್ಮತಿಸಿದರು.. ಜೊತೆಗೆ ನಿರ್ಮಾಪಕ ಆರೂರು ಜಗದೀಶ್ ಅವರು ತಮ್ಮ ನಿರ್ದೇಶಕರ ಜೊತೆ ಸೇರಿ ಕಿರುತೆರೆ ನಿರ್ಮಾಪಕರ ಸಂಘಕ್ಕೆ ಅನಿರುದ್ಧ್ ಅವರ ಮೇಲೆ ದೂರು ನೀಡಿದ್ದು ಇನ್ನೆಂದೂ ಯಾವ ನಿರ್ಮಾಪಕರೂ ಯಾವ ಧಾರಾವಾಹಿಗೂ ಅನಿರುದ್ಧ್ ಅವರನ್ನು ಹಾಕಿಕೊಳ್ಳಬಾರದು ಎಂದು ಮನವಿ‌ ಮಾಡಿಕೊಂಡರು.. ಇದಕ್ಕೆ ನಿರ್ಮಾಪಕರ ಸಂಘವೂ ಸಮ್ಮತಿ ನೀಡಿದೆ ಎನ್ನುವ ಮಾತುಗಳು ಕೇಳಿ ಬಂದಿದೆ..

ಆದರೆ ಅನಿರುದ್ಧ್ ಅವರದ್ದು ಇದು ಮೊದಲೇನಲ್ಲ.. ಈ ಹಿಂದೆಯೂ ಸಹ ಧಾರಾವಾಹಿಯಿಂದ ಕಿರಿಕ್ ಮಾಡಿಕೊಂಡು ಹೊರ ಹೋಗಿದ್ದರಂತೆ ಆಗ ವಾಹಿನಿ ಅನಿರುದ್ಧ್ ಅವರನ್ನು ಕರೆಸಿ ಸಮಾಧಾನ ಮಾಡಿ ಧಾರಾವಾಹಿಯಲ್ಲಿ ಮುಂದುವರೆಯುವಂತೆ ತಿಳಿಸಿದ್ದರಂತೆ.. ಆದರೆ ಈಗ ಮತ್ತೆ ಅದೇ ಘಟನೆ ಪುನರಾವರತೆಯಾದ ಕಾರಣ ಧಾರಾವಾಹಿ ತಂಡ ಈ ನಿರ್ಧಾರ ಮಾಡಿದ್ದು ಇನ್ನು ಮುಂದೆ ಆರ್ಯವರ್ಧನ್ ಪಾತ್ರಕ್ಕೆ ಬೇರೆ ನಟನ ಆಗಮಮವಾಗುವುದು ಬಹುತೇಕ ಖಚಿತವಾಗಿದೆ..

ಒಟ್ಟಿನಲ್ಲಿ ಸಿನಿಮಾದಿಂದ ಧಾರಾವಾಹಿಗೆ ಕಾಲಿಟ್ಟು ಯಶಸ್ಸು ಪಡೆದ ಅನಿರುದ್ಧ್ ಅವರು ಮೂರು ವರ್ಷಗಳ ಕಾಲ ಸತತವಾಗಿ ಜನರನ್ನು ಮನರಂಜಿಸಿದ್ದು ಇದೀಗ ಕಿರುತೆರೆಯಿಂದಲೂ ಬ್ರೇಕ್ ಪಡೆಯುವರಾ ಕಾದು ನೋಡಬೇಕಿದೆ.. ಇನ್ನು ಈ ಬಗ್ಗೆ ಧಾರಾವಾಹಿ ತಂಡವಾಗಲಿ ಅಥವಾ ಅನಿರುದ್ಧ್ ಅವರಾಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.. ಈ ಘಟನೆ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸುವರೋ ಕಾದು ನೋಡಬೇಕು..