ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್.. ಅನುಗೆ ಪ್ರೀತಿಯನ್ನು ಹೇಳಿಕೊಂಡರಾ?

ಜೊತೆಜೊತೆಯಲಿ ಧಾರಾವಾಹಿ‌ ಈ ವಾರ ಬಲು ರೋಚಕತೆಯಿಂದ ಕೂಡಿದ್ದು ಪ್ರೇಕ್ಷಕ ಮಹಾಶಯ ಆದಷ್ಟು ಬೇಗ ಆರ್ಯವರ್ಧನ್ ತಮ್ಮ ಮನಸ್ಸಿನಲ್ಲಿರೋದನ್ನು ಅನುಗೆ ಹೇಳಿಕೊಳ್ಳಲೇ ಬೇಕೆನ್ನುತ್ತಿದ್ದಾನೆ..

24 ಗಂಟೆ ಸವಾಲಿನಂತೆ ಅನು ಆರ್ಯನನ್ನು ಭೇಟಿ ಮಾಡಿದ್ದೂ ಆಯ್ತು.. ಆರ್ಯ ಅನು ಮನಸ್ಸಿನಲ್ಲಿ ದೇವರೇ ಇಬ್ಬರನ್ನು ಭೇಟಿ ಮಾಡಿಸಿದ್ದಾರೆ ಎಂದು ಅರ್ಥವಾಗಿದ್ದೂ ಆಯಿತು..

ಆದರೂ ಕೂಡ ನಿನ್ನೆಯ ಸಂಚಿಕೆಯಲ್ಲಿ ಅನುಗೆ ಆಫೀಸಿನಲ್ಲಿ ಹುಬ್ಬಳ್ಳಿಗೆ ಸೆಂಡ್ ಆಫ್ ನೀಡುವ ಸಮಯದಲ್ಲಿ ಆರ್ಯ ಏನನ್ನೂ ಮಾತನಾಡದೇ ಸುಮ್ಮನೇ ಇದ್ದದ್ದು ನೋಡುಗರಿಗೆ ನೋವನ್ನುಂಟು ಮಾಡುವಂತಿತ್ತು.. ಇಬ್ಬರೂ 24 ಗಂಟೆಯಲ್ಲಿ ಭೇಟಿಯಾದರೆ ಆರ್ಯವರ್ಧನ್ ತಮ್ಮ ಮನಸ್ಸಿನಲ್ಲಿ ಇರೋದನ್ನು ಅನುಗೆ ಹೇಳಿಕೊಳ್ಳಬೇಕು ಎಂಬುದು ಇದ್ದರೂ ಕೂಡ ಆರ್ಯವರ್ಧನ್ ಮಾತ್ರ ಮೌನ ವಹಿಸಿ ಅನುವನ್ನು ಹುಬ್ಬಳ್ಳಿಗೆ ಕಳುಹಿಸುವಾಗ ಸುಮ್ಮನೆ ನಿಂತ ಸನ್ನಿವೇಶ ಮನಕಲಕುವಂತಿತ್ತು..

ಆನಂತರ ಝೇಂಡೆ ಬಳಿ ಆರ್ಯವರ್ಧನ್ ನೋವಿನಿಂದ ನಡೆದುಕೊಂಡದ್ದನ್ನು ನೋಡಿ.. ಚಾಲೆಂಜ್ ನಲ್ಲಿ ಸೋತಿದ್ದಾಳೆ ಅದಕ್ಕೆ ಹುಬ್ಬಳ್ಳಿಗೆ ಹೋಗ್ತಿದ್ದಾಳೆ ಬಿಡು ಎನ್ನುವ ಮಾತಿಗೆ ಆರ್ಯವರ್ಧನ್ “ಚಾಲೆಂಜ್ ನಲ್ಲಿ ಸೋತಿದ್ದು ನಾನು.. ಅವಳ ನಂಬಿಕೆಗೆ ಮೋಸ ಮಾಡುತ್ತಿರುವುದು ನಾನು ಎಂದು ಝೇಂಡೆಯ ಮುಂದೆ ಮಗುವಿನಂತೆ ಕಣ್ಣೀರಿಟ್ಟ ದೃಶ್ಯ ಇಂದು ಪ್ರಸಾರವಾಗಲಿದೆ..

ನಂಬಿಕೆಗೆ ಬಹಳ ಮಹತ್ವ ನೀಡುವ ಆರ್ಯವರ್ಧನ್ ಅನು ಹುಬ್ಬಳ್ಳಿಗೆ ಹೋಗುವುದನ್ನು ತಡೆಯುತ್ತಾರಾ? ತಮ್ಮ ಮನಸ್ಸಿನ ಪ್ರೀತಿಯನ್ನು ಅನುಗೆ ಹೇಳಿಕೊಳ್ಳುತ್ತಾರಾ? ಇಂದಿನ ಸಂಚಿಕೆವರೆಗೂ ಕಾದು ನೋಡಬೇಕಿದೆ..

Latest from Entertainment

Go to Top