ಜೊತೆಜೊತೆಯಲಿ ಧಾರಾವಾಹಿ ಮುಕ್ತಾಯ?

ಜೊತೆ ಜೊತೆಯಲಿ ಧಾರವಾಹಿ ಜನರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಿದೆ ಎಂದು ನಮಗೆಲ್ಲ ಗೊತ್ತಿದೆ. ಈ ಧಾರಾವಾಹಿ ಶುರು ಆದಾಗಿನಿಂದಲೂ ಜನರಿಗೆ ಇದರ ಮೇಲಿನ ಕ್ರೇಜ್ ಕಡಿಮೆ ಆಗಿಲ್ಲ. ಧಾರವಾಹಿ ಶುರುವಾಗಿ 3 ವರ್ಷ ಕಳೆದಿದೆ. ಕಥೆಯಲ್ಲಿ ಒಂದಲ್ಲ ಒಂದು ರೋಚಕ ಟ್ವಿಸ್ಟ್ ಗಳನ್ನು ನೀಡುತ್ತಾ, ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ ಜೊತೆ ಜೊತೆಯಲಿ ಧಾರವಾಹಿ ಇದರಲ್ಲಿ ಎಲ್ಲರ ಅಭಿನಯಾವ ಮನೋಜ್ಞವಾಗಿ ಮೂಡಿಬಂದಿದೆ. ಮಧ್ಯದಲ್ಲಿ ಕೆಲ ಸಮಯ ಬೋರ್ ಅನ್ನಿಸಿತಾದರು, ವೀಕ್ಷಕರ ಮನಸ್ಥಿತಿ ಅರಿತ ತಂಡ, ರೋಚಕವಾದ ರೀತಿಯಲ್ಲೇ ಸಾಗುತ್ತಿದೆ.

ಜೊತೆ ಜೊತೆಯಲಿ ಧಾರವಾಹಿಯಲ್ಲಿ ಆರ್ಯನನ್ನು ವಿಲ್ಲನ್ ಆಗಿ ನೋಡಲು ಜನರು ಬೇಸರ ವ್ಯಕ್ತಪಡಿಸಿದ್ದರು. ಹಾಗೆಯೇ ಆರ್ಯನ ಅಂತ್ಯವಾಗುತ್ತದೆ ಎಂದು ತಿಳಿದ ಪ್ರೇಕ್ಷಕರು, ಆ ರೀತಿ ಆರ್ಯ ಸಾಯುವುದನ್ನು ನೋಡಲು ಆಗುವುದಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹಾಗಾಗಿ ಧಾರವಾಹಿ ತಂಡವು ಬೇರೆ ರೀತಿಯಲ್ಲಿ ವೀಕ್ಷಕರಿಗೆ ಇಷ್ಟ ಆಗುವ ಹಾಗೆ ಕಥೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆಗಿನಿಂದ ವೀಕ್ಷಕರು ಮತ್ತೊಮ್ಮೆ ಧಾರವಾಹಿಯನ್ನು ತಪ್ಪದೇ ನೋಡಲು ಶುರು ಮಾಡಿದ್ದಾರೆ. ಒಂದು ದಿನ ಧಾರವಾಹಿ ನೋಡದೆ ಇದ್ದರು, ಕಥೆ ಏನಾಗಿದೆ ಎಂದು ತಲೆಕೆಡಿಸಿಕೊಳ್ಳುತ್ತಾರೆ.

ಈಗ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಕುತೂಹಲಕಾರಿ ಹಂತ ತಲುಪಿದೆ. ಅನು ಸಿರಿಮನೆ ಈಗ ಗರ್ಭಿಣಿ ಆಗಿದ್ದಾಳೆ. ಆ ವಿಚಾರವನ್ನು ಮನೆಯವರಿಗೆ ಹೇಳಬೇಕೋ ಬೇಡವೋ ಎನ್ನುವ ಯೋಚನೆಯಲ್ಲಿದ್ದಾಳೆ. ರಾಜನಂದಿನಿಯ ಪುನರ್ಜನ್ಮವಾಗಿ ಅನು ಸಿರಿಮನೆ ಜನಿಸಿದ್ದು, ತನ್ನ ಹಾಗೂ ತನ್ನ ತಂದೆ ರಾಜವರ್ಧನ್ ಸಾವಿಗೆ ಆರ್ಯನೇ ಕಾರಣ ಎಂದು ಅನುಗೆ ಗೊತ್ತಾಗಿದ್ದು, ಆರ್ಯನ ಮೇಲೆ ಸೇಡು ತೀರಿಸಿಕೊಳ್ಳಲೇಬೇಕು ಎಂದು ಅನು ತೀರ್ಮಾನ ಮಾಡಿದ್ದಳು. ಹರ್ಷ ಮತ್ತು ಮೀರಾ ಅನುಗೆ ಸಾಥ್ ನೀಡುತ್ತಿದ್ದಾರೆ. ಆರ್ಯನಿಗೆ ತಿಳಿಯದ ಹಾಗೆ ಆರ್ಯನ ವಿರುದ್ಧ ಪ್ಲಾನ್ ಮಾಡುತ್ತಿದ್ದಾಳೆ ಅನು.

ಅನು ಗರ್ಭಿಣಿ ಆಗಿರುವ ಕಾರಣ ಆರ್ಯನ ಮೇಲೆ ಕೋಪ ಇದ್ದರು ಸಹ, ಈಗ ಮಗುವಿನ ಮೇಲೆ ಕೂಡ ಗಮನ ಹರಿಸಬೇಕಿದೆ ಅನು. ಹಾಗಾಗಿ ಅನು ಈಗ ಸೇಡಿನ ಬಗ್ಗೆ ಚಿಂತೆ ಮಾಡಲು ಆಗುವುದಿಲ್ಲ. ಆದರೆ ಹರ್ಷವರ್ಧನ್ ಅದಕ್ಕೆ ಒಪ್ಪಿಕೊಳ್ಳುತ್ತಿಲ್ಲ. ಹರ್ಷನ ಇಡೀ ಬಾಲ್ಯ ಈ ಎಲ್ಲದರಿಂದ ನಾಶವಾಗಿದೆ, ಹಾಗಾಗಿ ಹರ್ಷ ಸೇಡು ತೀರಿಸಿಕೊಳ್ಳದೆ ಇರಲು ಒಪ್ಪುತ್ತಿಲ್ಲ. ಇದೀಗ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ, ಅನುಗೆ ಮಗು ಹುಟ್ಟಿದ ಬಳಿಕ, ಕಥೆ ಮುಗಿಯುತ್ತದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಒಂದು ಸಾಕ್ಷಿಯು ಸಹ ಸಿಕ್ಕ ಹಾಗೆ ತೋರುತ್ತಿದೆ.

ಮೇಘಾ ಶೆಟ್ಟಿ ಅವರು ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದು, ಇಡೀ ಜೊತೆ ಜೊತೆಯಲಿ ತಂಡ ಸೇರಿ ಸೆಲೆಬ್ರೇಟ್ ಮಾಡಿದ್ದಾರೆ. ಇಡೀ ತಂಡ ಕೇಕ್ ಕತ್ತರಿಸಿ, ಡ್ಯಾನ್ಸ್ ಮಾಡಿ, ಹಾಡು ಹೇಳಿ ಎಂಜಾಯ್ ಮಾಡಿದ್ದಾರೆ. ಈ ಸೆಲೆಬ್ರೇಷನ್ ನ ವಿಡಿಯೋ ಶೇರ್ ಮಾಡಿರುವ ಮೇಘಾ ಶೆಟ್ಟಿ ಅವರು, ಫನ್ ಫಿಲ್ಡ್ ಗೆಟ್ ಟುಗೆದರ್ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಸಾಮಾನ್ಯವಾಗಿ ಗೆಟ್ ಟುಗೆದರ್ ಮಾಡುವುದು ಧಾರವಾಹಿ ಮುಗಿಯುವ ಸಮಯದಲ್ಲಿ ಹಾಗಾಗಿ ಈ ವಿಚಾರದ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ.

ಧಾರವಾಹಿ ತಂಡ ಇರುವ ಜಾಗವನ್ನು ಮಹಾದೇವಪುರದಲ್ಲಿ ಇರುವ ರೆಸಾರ್ಟ್ ಎಂದು ಅಭಿಮಾನಿಗಳು ಗುರುತಿಸಿದ್ದು, ಇಷ್ಟು ಬೇಗ ಧಾರವಾಹಿ ಮುಗುಯುತ್ತಿದೆಯೇ ಎಂದು ಎಲ್ಲರೂ ಕಮೆಂಟ್ಸ್ ಗಳ ಮೂಲಕ ಬೇಸರ ಹೊರಹಾಕಿದ್ದಾರೆ. ಇದು ನಿಜವೋ ಸುಳ್ಳೋ, ನಿಜಕ್ಕೂ ಜೊತೆ ಜೊತೆಯಲಿ ಧಾರವಾಹಿ ಮುಗಿದು ಹೋಗುತ್ತಾ ಎನ್ನುವ ಆತಂಕ ಶುರುವಾಗಿದ್ದು, ಧಾರವಾಹಿಯನ್ನು ಮುಗಿಸಬೇಡಿ ಎನ್ನುತ್ತಿದ್ದಾರೆ ಅಭಿಮಾನಿಗಳು.