ಮನೆ ಬಾಡಿಗೆ ಕಟ್ಟಲಾಗದ ಸಂಕಷ್ಟದಲ್ಲಿ ಜೊತೆಜೊತೆಯಲಿ ನಟ..

ಲಾಕ್ ಡೌನ್ ನಿಂದಾಗಿ ಚಿತ್ರೋದ್ಯಮ ಅಕ್ಷರಶಃ ಬೀದಿಗೆ ಬೀಳುವಂತಾಗಿ ಹೋಗಿತ್ತು.. ಇದೀಗ ಕೊಂಚ ಚೇತರಿಕೆ ಕಾಣುತ್ತಿದ್ದರೂ ಸಹ ಕಷ್ಟಗಳು ಮಾತ್ರ ಸಂಪೂರ್ಣವಾಗಿ ಪರಿಹಾರವಾಗಿಲ್ಲ.. ಸಿನಿಮಾ ಶೂಟಿಂಗ್ ಗೆ ಅವಕಾಶ ನೀಡಿಲ್ಲ.. ಧಾರಾವಾಹಿಗಳ ಚಿತ್ರೀಕರಣದಲ್ಲಿ ಎಲ್ಲಾ ಕಲಾವಿದರನ್ನು ತೆಗೆದುಕೊಳ್ಳುತ್ತಿಲ್ಲ.. ಒಂದು ರೀತಿ ಅಡಕತ್ತರಿಯಲ್ಲಿ ಸಿಲುಕಿಕೊಂಡಂತಾಗಿದೆ ಸಣ್ಣ ಪುಟ್ಟ ಕಲಾವಿದರ ಜೀವನ..

ಅದೇ ರೀತಿ ಜೊತೆಜೊತೆಯಲಿ ಧಾರಾವಾಹಿ ನಟನೊಬ್ಬನನ್ನು ಮನೆ ಬಾಡಿಗೆ ಕಟ್ಟಿಲ್ಲ ಎಂಬ ಕಾರಣಕ್ಕೆ ಮನೆ ಮಾಲಿಕರು ಹಲ್ಲೆ ಮಾಡಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ..

ಹೌದು ಜೊತೆಜೊತೆಯಲಿ ಧಾರಾವಾಹಿಯಲ್ಲಿ ಮಾನ್ಸಿಯ ಅಸಿಸ್ಟೆಂಟ್ ಆಗಿ ಅಭಿನಯಿಸುತ್ತಿರುವ ಪ್ರಶಾಂತ್ ಅವರು ಪತ್ನಿ ಹಾಗೂ ಮಗುವಿನೊಂದಿಗೆ ಬೆಂಗಳೂರಿನ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದಾರೆ.. ಚಿತ್ರೀಕರಣವಿಲ್ಲದ ಕಾರಣ ಮೂರು ತಿಂಗಳಿನಿಂದ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗಿರಲಿಲ್ಲ..

ಮೊನ್ನೆ ಓನರ್ ಬಂದು ಮತ್ತೆ ಬಾಡಿಗೆ ಕೇಳಿದ್ದಾರೆ.. ಸ್ವಲ್ಪ ಕಾಲಾವಕಾಶ ನೀಡಿ ಎಂದು ಪ್ರಶಾಂತ್ ಕೇಳಿಕೊಂಡರಂತೆ.. ಆದರೆ ಅದಕ್ಕೊಪ್ಪದ ಓನರ್ ಪ್ರಶಾಂತ್ ಮೇಲೆ ಹಲ್ಲೆ ಮಾಡಿದ್ದಾರೆ..

ಈ ಹಿಂದೆಯೂ ಪ್ರಶಾಂತ್ ಸಾಕಷ್ಟು ಧಾರಾವಾಹಿಯಲ್ಲಿ ಸಹನಟನಾಗಿ ಅಭಿನಯಿಸಿದ್ದಾರೆ.. ಗುರು ರಾಘವೇಂದ್ರ ವೈಭವ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿ ಜನಮೆಚ್ಚುಗೆ ಗಳಿಸಿದ್ದರು.. ಕಲಾವಿದರಿಗೆ ಈ ರೀತಿಯ ಸಂಕಷ್ಟ ನಿಜಕ್ಕೂ ಬೇಸರ ಉಂಟು ಮಾಡುವ ಸಂಗತಿಯಾಗಿದೆ.. ಸದ್ಯ ಲಾಕ್ ಡೌನ್ ಸಡಿಲಗೊಂಡರು ಧಾರಾವಾಹಿಯ ಚಿತ್ರೀಕರಣಕ್ಕೆ ಸಂಪೂರ್ಣ ಎಲ್ಲಾ ಪಾತ್ರಗಳನ್ನು ತೆಗೆದುಕೊಳ್ಳುತ್ತಿಲ್ಲ.. ಪ್ರೊಡಕ್ಷನ್ ಹೌಸ್ ಗಳು ಸಹ ನಷ್ಟದಲ್ಲಿ ಇರುವುದರಿಂದ ಪ್ರಮುಖ ಕಲಾವಿದರನ್ನು ತೆಗೆದುಕೊಂಡು ಚಿತ್ರೀಕರಣ ಮಾಡಲಾಗುತ್ತಿದೆ.. ಇದೇ ಕಾರಣಕ್ಕೆ ಸಹ ಕಲಾವಿದರಿಗೆ ಲಾಕ್ ಡೌನ್ ತೆರವಾದರೂ ಕಷ್ಟಗಳು ಇನ್ನೂ ನಿವಾರಣೆಯಾಗಿಲ್ಲ..