ಎರಡೇ ದಿನಕ್ಕೆ ಮುರಿದು ಬಿತ್ತು ಕಿರುತೆರೆ ನಟ ಜೆಕೆ ಮದುವೆ.. ಕಾರಣವೇನು ಗೊತ್ತಾ..

ಕನ್ನಡ ಕಿರುತೆರೆಯ ಬಹು ಬೇಡಿಕೆಯ ನಟರ ಪಟ್ಟಿಯಲ್ಲಿ ನಟ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಕೂಡ ಒಬ್ಬರು. ಕಿರುತೆರೆ, ಬೆಳ್ಳಿತೆರೆ ಸೇರಿದಂತೆ ಫಿಟ್ನೆಸ್, ಹಾಗೂ ಮಾಡಲಿಂಗ್ ಲೋಕದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕನ್ನಡದ ಜೊತೆಗೆ ಬೇರೆ ಬಾಷೆಗಳಲ್ಲಿ ನಟಿಸಿ ಅಲ್ಲಿಯೂ ಸಹ ಸಾಕಷ್ಟು ಬೇಡಿಕೆ ಹೊಂದಿದ್ದಾರೆ ನಟ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ. ಇನ್ನು ಇತ್ತೀಚೆಗೆ ನಟ ಜೆಕೆ ಅವರ ಮದುವೆಯ ವಿಚಾರದ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿದ್ದವು. ಇದೀಗ ಈ ಎಲ್ಲಾ ವಿಚಾರಗಳ ಬಗ್ಗೆ ಕೊನೆಗೂ ನಟ ಜೆಕೆ ಮೌನ ಮುರಿದ್ದಾರೆ. ಅಷ್ಟಕ್ಕೂ ಆಗಿದ್ದಾದರೂ ಏನು? ನಟ ಜೆಕೆ ಏನು ಹೇಳಿದ್ದಾರೆ ಈ ಬಗ್ಗೆ ತಿಳಿಯಲು ಮುಂದಕ್ಕೆ ಓದಿ..

ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆ ಲೋಕದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ನಟ ಜೆಕೆ. ಕನ್ನಡದ ಜೊತೆಗೆ ತೆಲುಗು ಸೇರಿದಂತೆ ಹಿಂದಿ ಬಾಷೆಗಳಲ್ಲಿ ಸಹ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ನಟಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಅವರ ಹೆಂಡ್ತಿ ಡೈಲಾಗ್ ಸಾಕಷ್ಟು ಫ್ಹೇಮಸ್. ಇಂದಿಗೂ ಸಹ ಅವರ ಅಭಿಮಾನಿಗಳು ಅವರನ್ನು ಅಶ್ವಿನಿ ನಕ್ಷತ್ರಾ ಜೆಕೆ ಎಂದು ಗುರುತು ಹಿಡಿಯುತ್ತಾರೆ. ಕನ್ನಡದ ಜೊತೆಗೆ ನಟ ಜೆಕೆ ಹಿಂದಿ ಕಿರುತೆರೆಯಲ್ಲಿಯೂ ಸಹ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಹೌದು ನಟ ಜೆಕೆ ಹಿಂದಿ ಕಿರುತೆರೆಯ ಅತಿ ದೊಡ್ಡ ಧಾರವಾಹಿ ಸಿಯಾ ಕೆ ರಾಮ್ ಧಾರಾವಾಹಿಯಲ್ಲಿ ರಾವಣನ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಪಾತ್ರದ ಅವರ ನಟನೆಯ ಮೂಲಕ ಅವರು ಹಿಂದಿ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ರಾವಣನ ಪಾತ್ರಕ್ಕೆ ಸೂಕ್ತವಾಗಿ ಅವರು ತಮ್ಮನ್ನು ತಯಾರಿ ಮಾಡಿಕೊಂಡಿದ್ದರು. ಇದೀಗ ಅವರು ಮತ್ತೆ ಇನ್ನೊಂದು ಧಾರವಾಹಿಯ ಮೂಲಕ ಹಿಂದಿ ಕಿರುತೆರೆಗೆ ಎಂಟ್ರಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಸದ್ಯದಲ್ಲೇ ನಟ ಜೆಕೆ ಈ ಬಗ್ಗೆ ಮಾಹಿತಿ ನೀಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರ ಜೊತೆಗೆ ಇತ್ತೀಚೆಗೆ ಜೆಕೆ ಅವರ ಮದುವೆಯ ಕುರಿತು ಸಾಕಷ್ಟು ವಿಷಯಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿತ್ತು. ಇದೀಗ ಈ ಎಲ್ಲಾ ವಿಚಾರಗಳಿಗೂ ನಟ ಜೆಕೆ ತೆರೆ ಎಳೆದಿದ್ದಾರೆ.

ಕೆಲವು ದಿನಗಳ ಹಿಂದೆ ನಟ ಜೆಕೆ ಹಾಗೂ ಫ್ಯಾಶನ್ ಡಿಸೈನರ್ ಅಪರ್ಣಾ ಅವರ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದವು. ಇಬ್ಬರೂ ಸಾಕಷ್ಟು ಆತ್ಮೀಯವಾಗಿ ಕಾಣುತ್ತಿದ್ದ ಫೋಟೋಗಳನ್ನು ಕಂಡು ಜೆಕೆ ಮದುವೆಯಾಗುತ್ತಿರುವ ಹುಡುಗಿ ಇವರೇ ಇರಬಹುದು ಎಂದು ಹೇಳಲಾಗಿತ್ತು. ಈ ಬಗ್ಗೆ ಸಾಕಷ್ಟು ವಿಷಯಗಳು ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆದವು. ಅದೇ ವೇಳೆ ಅಪರ್ಣಾ ಅವರು ಸೋಷಿಯಲ್ ಮಿಡಿಯಾದಲ್ಲಿ ಜೆಕೆ ಜೊತೆಗೆ ಫೋಟೋ ಹಂಚಿಕೊಂಡು ನನ್ನ ಲೈಫ್ ಲೈನ್ ಎಂದು ಬರೆದುಕೊಂಡಿದ್ದರು. ಇದನ್ನು ನೋಡಿ ನೆಟ್ಟಿಗರು ಶೀಘ್ರದಲ್ಲೇ ಜೆಕೆ ಅವರು ಅಪರ್ಣ ಅವರನ್ನು ಮದುವೇಯಾಗುತ್ತಾರೆ ಎನ್ನುವ ಸುದ್ದಿಗಳನ್ನು ವೈರಲ್ ಮಾಡಿದರು.

ಇದೀಗ ನಟ ಜೆಕೆ ಈ ಬಗ್ಗೆ ಮೌನ ಮುರಿದಿದ್ದಾರೆ, ಹೌದು ನಟ ಜೆಕೆ ನಾನು ಆಕೆಯನ್ನು ಮದುವೆಯಾಗುತ್ತಿಲ್ಲ, ಕೇವಲ ಜೊತೆಗಿದ್ದರೆ ಆಕೆ ನನ್ನ ಹುಡುಗಿಯಾಗುವುದಿಲ್ಲ. ನಾನು ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಬೆಳೆಯುತ್ತಿದ್ದೇನೆ ಆದರೆ ಈ ಬಗ್ಗೆ ಯಾರು ಬರೆಯುವುದಿಲ್ಲ. ನನ್ನ ವೈಯಕ್ತಿಕ ಬದುಕಿನ ಬಗ್ಗೆ ಈ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದನ್ನು ನಿಲ್ಲಿಸಿ. ನಾನು ಮದುವೆಯಾಗುವ ಸಮಯದಲ್ಲಿ ನಾನೇ ಎಲ್ಲರಿಗೂ ಈ ವಿಷಯವನ್ನು ತಿಳಿಸುತ್ತೇನೆ. ಈ ರೀತಿ ಬೇರೊಬ್ಬರ ಬದುಕಿನ ಬಗ್ಗೆ ಕಟ್ಟ ಕಥೆಗಳನ್ನು ಬರೆಯುವುದನ್ನು ಮೊದಲು ನಿಲ್ಲಿಸಿ ಎಂದು ನಟ ಜೆಕೆ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಈ ವಿಷಯದ ಬಗ್ಗೆ ಬರೆದುಕೊಂಡು ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.