ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ್ ಬದಲಿಗೆ ಕನ್ನಡದ ಖ್ಯಾತ ನಟನ ಎಂಟ್ರಿ..

ಕನ್ನಡ ಕಿರುತೆರೆಯ ಸೆನ್ಸೇಷನಲ್ ಧಾರಾವಾಹಿ ಎಂದೇ ಹೆಸರಾಗಿದ್ದ ಜೊತೆಜೊತೆಯಲಿ ಧಾರಾವಾಹಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗುತ್ತಿರುವ ಧಾರಾವಾಹಿಯಾಗಿದೆ.. ಇನ್ನು ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರದಿಂದ ಅನಿರುದ್ಧ್ ಅವರನ್ನು ತೆಗೆದುಹಾಕಿದ್ದು ಅಧಿಕೃತವಾಗಿದ್ದು ಖುದ್ದು ನಿರ್ದೇಶಕರಾದ ಆರೂರು ಜಗದೀಶ್ ಅವರು ಹಾಗೂ ವಾಹಿನಿ ಕಡೆಯಿಂದಲೇ ಅಧಿಕೃತವಾಗಿ ಮಾಹಿತಿ ಹೊರ ಬಂದಾಗಿದೆ.. ಅತ್ತ ಅನಿರುದ್ಧ್ ಹಾಗೂ ಧಾರಾವಾಹಿಯ ಕಡೆಯಿಂದ ಆರೋಪ ಪ್ರತ್ಯಾರೋಪಗಳು ನಡೆಯುತ್ತಲೇ ಇದ್ದು ಧಾರಾವಾಹಿ ತಂಡ ನಿನ್ನೆ ಸುದ್ಧಿಗೋಷ್ಟಿ ನಡೆಸಿದರೆ ಅನಿರುದ್ಧ್ ಅವರು ನಿನ್ನೆ ಹಾಗೂ ಇಂದು ಎರಡೂ ದಿನಗಳು ಸಹ ಪತ್ರಿಕಾಗೋಷ್ಠಿ ನಡೆಸಿ‌ ಮಾತನಾಡಿದ್ದಾರೆ.. ಆದರೆ ಅನಿರುದ್ಧ್ ಅವರ ಯಾವ ಮಾತಿಗೂ ಹೆಚ್ಚು ಪ್ರಾಮುಖ್ಯತೆ ನೀಡದೇ ಧಾರಾವಾಹಿ ತಂಡ ಅದಾಗಲೇ ಚಿತ್ರೀಕರಣ ಮುಂದುವರೆಸಿದೆ‌‌.. ಹೌದು ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ‌ ಒಂದಾಗಿರುವ ಜೊತೆಜೊತೆಯಲಿ ಧಾರಾವಾಹಿಯ ಕುರಿತು ಕಳೆದ ಎರಡು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಗೆ ನಿನ್ನೆಯಷ್ಟೇ ಬ್ರೇಕ್ ಬಿದ್ದಿದ್ದು ನಟ ಅನಿರುದ್ಧ್ ಪಾತ್ರಕ್ಕೆ ಹೊಸ ನಟನನ್ನು ಆಯ್ಕೆ ಮಾಡಿಕೊಂಡಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಹೌದು ಜೊತೆಜೊತೆಯಲಿ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಸೆನ್ಸೇಷನ್ ಸೃಷ್ಟಿಸಿದ ಧಾರಾವಾಹಿ ಎಂದರೆ ತಪ್ಪಾಗಲಾರದು.. ಧಾರಾವಾಹಿ ಶುರುವಾದಾಗ ಆರ್ಯವರ್ಧನ್ ಪಾತ್ರವನ್ನು ಆ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗಿತ್ತು.. ಬಹಳ ಸಕಾರಾತ್ಮಕ ಪ್ರತಿಕ್ರಿಯೆ ಬರುವಂತೆ ನೋಡಿಕೊಳ್ಳಲಾಗಿತ್ತು.. ಅದೇ ಕಾರಣಕ್ಕೆ ಅನಿರುದ್ಧ್ ಅವರೂ ಸಹ ಜನರಿಗೆ ಬಹಳಷ್ಟು ಇಷ್ಟವಾದರು.. ಇನ್ನು ಕಳೆದ ಮೂರು ವರ್ಷಗಳಲ್ಲಿ ಧಾರಾವಾಹಿ ಯಶಸ್ಸಿನ ಬಗ್ಗೆ ಎಷ್ಟು ಸುದ್ದಿಯಾಯಿತೋ ಅಷ್ಟೇ ಧಾರಾವಾಹಿ ತಂಡದ ಒಳಗಿನ ಕಿರಿಕ್ ಗಳ ಬಗ್ಗೆಯೂ ಸುದ್ದಿಯಾಯಿತು.. ಈ ಹಿಂದೆ ಅನು ಪಾತ್ರದ ನಟಿ ಮೇಘಾ ಶೆಟ್ಟಿ ಸಹ ಧಾರಾವಾಹಿಯಿಂದ ಹೊರ ನಡೆದ ಸುದ್ದಿಯಾಗಿತ್ತು.. ನಂತರ ವಾಹಿನಿಯವರು ಮೇಘಾ ಶೆಟ್ಟಿ ಹಾಗೂ ಧಾರಾವಾಹಿ ತಂಡದ ನಡುವೆ ಸಂದಾನ ನಡೆಸಿ ಸಮಸ್ಯೆಯನ್ನು ಬಗೆಹರಿಸಿದ್ದರು..

ಇನ್ನು ಇದೀಗ ಆರ್ಯವರ್ಧನ್ ಪಾತ್ರದ ಅನಿರುದ್ಧ್ ಅವರು ಸಹ ಕಿರಿಕ್ ಮಾಡಿಕೊಂಡು ಹೊರ ನಡೆದಿದ್ದಾರೆ.. ಹೌದು ಮೊನ್ನೆ ಚಿತ್ರೀಕರಣದ ವೇಳೆ ಸ್ಕ್ರಿಪ್ಟ್ ಬದಲಿಸಲು ಹೇಳಿದ ಅನಿರುದ್ಧ್ ಅವರ ಮಾತಿಗೆ ಧಾರಾವಾಹಿ ತಂಡ ಒಪ್ಪಿಗೆ ಸೂಚಿಸಿಲ್ಲ.. ಆಗ ಇದ್ದಕಿದ್ದ ಹಾಗೆ ಚಿತ್ರೀಕರಣದಿಂದ ಅನಿರುದ್ಧ್ ಹೊರ ಹೋಗಿದ್ದಾರೆ. ಆದರೆ ಈ ಹಿಂದೆಯೂ ಅನಿರುದ್ಧ್ ಹೀಗೆ ಮಾಡಿದ್ದು ಕಳೆದ ಒಂದು ವರ್ಷದಿಂದಲೂ ಇಬ್ಬರ ನಡುವೆ ವೈಮನಸ್ಸು ಇದ್ದೇ ಇದೆ.. ಇದೇ ಕಾರಣಕ್ಕೆ ಅನಿರುದ್ಧ್ ನಡವಳಿಕೆಯಿಂದ ಬೇಸತ್ತ ತಂಡ ಅನಿರುದ್ಧ್ ಅವರನ್ನು ಕೈ ಬಿಡುವ ನಿರ್ಧಾರ ಮಾಡಿದೆ..

ಅಷ್ಟೇ ಅಲ್ಲದೇ ನಿರ್ಮಾಪಕ ಆರೂರು ಜಗದೀಶ್ ಅವರು ಕಿರುತೆರೆ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದು ಅಲ್ಲಿ ಚರ್ಚೆ ನಡೆಸಿ ಅನಿರುದ್ಧ್ ಅವರನ್ನು ಜೊತೆಜೊತೆಯಲಿ ಮಾತ್ರವಲ್ಲ ಎರಡು ವರ್ಷಗಳ ಕಾಲ ಸಂಪೂರ್ಣ ಕಿರುತೆರೆಯಿಂದಲೇ ಅನಿರುದ್ಧ್ ಅವರನ್ನು ಹೊರಗೆ ಹಾಕಲಾಗಿದೆ.. ಯಾವುದೇ ಧಾರಾವಾಹಿ ಯಾವುದೇ ಶೋ ದಲ್ಲಿ ಪಾಲ್ಗೊಳ್ಳುವಂತಿಲ್ಲ..

ಇನ್ನು ಅನಿರುದ್ಧ್ ಅವರು ಹೋದರೂ ಸಹ ಧಾರಾವಾಹಿಯ ಚಿತ್ರೀಕರಣ ನಿಂತಿಲ್ಲ.. ಹೌದು ಧಾರಾವಾಹಿ ಎಂದಿನಂತೆ ಚಿತ್ರೀಕರಣ ನಡೆಯುತ್ತಿದ್ದು ಇದೀಗ ಆರ್ಯವರ್ಧನ್ ಪಾತ್ರಕ್ಕೆ ಹೊಸ ನಟನನ್ನೂ ಸಹ ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ.. ಹೌದು ಆರ್ಯವರ್ಧನ್ ಪಾತ್ರಕ್ಕೆ ಈಗ ಒಳ್ಳೆಯ ನಟನನ್ನೇ ತರಬೇಕಾದ ಅನಿವಾರ್ಯತೆ ಧಾರಾವಾಹಿ ತಂಡಕ್ಕಿದೆ.. ಆ ಪಾತ್ರಕ್ಕೆ ಜೀವ ತುಂಬಬಲ್ಲ.. ಹಾಗೂ ಅನಿರುದ್ಧ್ ಗಿಂತಲೂ ಖಡಕ್ ಆಗಿರುವ ನಟನ ಅವಶ್ಯಕತೆ ಇದೆ.. ಹಾಗೆಯೇ ಆ ಪಾತ್ರದಲ್ಲಿ ಹೊಸ ನಟನನ್ನು ಜನರು ಒಪ್ಪಿಕೊಳ್ಳಬೇಕಾಗಿದೆ. ಈ ಕಾರಣಕ್ಕೆ ಅಂತಹ ಒಂದಷ್ಟು ನಟರುಗಳ ಪಟ್ಟಿಯನ್ನು ಸಿದ್ಧ ಪಡಿಸಿಕೊಂಡಿದ್ದು ಅದರಲ್ಲಿ ಒಬ್ಬ ನಟನನ್ನು ಫೈನಲ್ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ..

ಆ ನಟ ಮತ್ಯಾರೂ ಅಲ್ಲ ಅದು ಜೆಕೆ.. ಹೌದು ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಜನರ ಮನಗೆದ್ದಿದ್ದ ಜೆಕೆ ಆ ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ನಟನ ಪಾತ್ರವನ್ನು ಮಾಡಿದ್ದರು.. ಅವರ ಪಾತ್ರ ಜನರಿಗೆ ಬಹಳ ಇಷ್ಟವೂ ಆಗಿತ್ತು.. ಇಲ್ಲಿಯೂ ಸಹ ಅದೇ ರೀತಿಯ ಗತ್ತಿನ ಅವಶ್ಯಕತೆ ಇರುವುದರಿಂದ ಜೆಕೆ ಅವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.. ಅಷ್ಟೇ ಅಲ್ಲದೇ ಜೆಕೆ ಅವರನ್ನು ಆಯ್ಕೆ ಮಾಡಿಕೊಳ್ಳಲು ಬೇರೆ ಕಾರಣವೂ ಇದೆ. ಈ ಹಿಂದೆ ಅಶ್ವಿನಿ ನಕ್ಷತ್ರ ಧಾರಾವಾಹಿಯನ್ನು ಸಹ ಇದೇ ಆರೂರು ಜಗದೀಶ್ ಅವರೇ ನಿರ್ದೇಶನ ಮಾಡಿದ್ದು ಜೆಕೆ ಹಾಗೂ ಅರೂರು ಜಗದೀಶ್ ಅವರ ನಡುವೆ ಒಳ್ಳೆಯ ಬಾಂಧವ್ಯ ಇರುವುದರ ಜೊತೆಗೆ ಆ ಜೋಡಿ ಯಶಸ್ಸನ್ನು ಸಹ ನೀಡಿತ್ತು.. ಈ ಕಾರಣಕ್ಕೆ ಜೆಕೆ ಅವರು ಆರ್ಯವರ್ಧನ್ ಪಾತ್ರಕ್ಕೆ ಬರಬಹುದಾಗಿದೆ.. ಸಧ್ಯ ಹಿಂದಿ ಧಾರಾವಾಹಿಯೊಂದರಲ್ಲಿ ಅಭಿನಯಿಸುತ್ತಿರುವ ಜೆಕೆ ಇತ್ತ ಜೊತೆಜೊತೆಯಲಿ ಧಾರಾವಾಹಿಯ ಬದಲಿ ಪಾತ್ರಕ್ಕೆ ಆಗಮಿಸುವರಾ ಎಂಬ ಪ್ರಶ್ನೆಯೂ ಮೂಡಿದ್ದು ಸಧ್ಯದಲ್ಲಿಯೇ ಉತ್ತರ ದೊರೆಯಲಿದೆ..