ಜೀವ ಕಳೆದುಕೊಳ್ಳಲು ಮುಂದಾಗಿದ್ದ ಹಿರಿಯ ನಟಿ ಜಯಂತಿ ಅವರು ಉಳಿದಿದ್ದು ಯಾರಿಂದ ಗೊತ್ತಾ?

ಎಲ್ಲಾ ಸಿನಿಮಾ ಕಲಾವಿದರ ಬದುಕು ನಾವಂದುಕೊಂಡಂತೆ ನೆಮ್ಮದಿಯಾಗಿಯೂ ಐಶಾರಾಮಿಯಾಗಿಯೂ ಇರಿವುದಿಲ್ಲ.. ಎಲ್ಲೋ ಕೆಲವರು ಮಾತ್ರ ನಮ್ಮ ಊಹೆಯಂತೆ ಬದುಕುತ್ತಿರಬಹುದಷ್ಟೇ.. ಅವರಿಗೂ ಹೇಳಿಕೊಳ್ಳಲಾಗದಂತಹ ಕಷ್ಟಗಳು ಇರುತ್ತವೆ.. ಅದರಲ್ಲೂ ಹಿರಿಯ ಕಲಾವಿದರು ಅಂತಹ ಅನೇಕ ಪರಿಸ್ಥಿತಿಗಳನ್ನು ಎದುರಿಸಿ ಮುನ್ನಡೆದು ಬಂದಿದ್ದಾರೆ..

ಅದೇ ರೀತಿ ಹಿರಿಯ ನಟಿ ಜಯಂತಿ ಅವರೂ ಸಹ ಚಿತ್ರರಂಗದ ಆರಂಭದ ದಿನಗಳಲ್ಲಿ ಕಷ್ಟದ ಸನ್ನಿವೇಶಗಳನ್ನು ಎದುರಿಸಿದ್ದರು.. ಆ ಸಮಯದಲ್ಲಿ ಜೀವ ಕಳೆದುಕೊಳ್ಳುವ ನಿರ್ಧಾರವನ್ನು ಸಹ ಮಾಡಿದ್ದರಂತೆ.. ಆದರೆ ಅಂತಹ ಸಂದರ್ಭದಲ್ಲಿ ಜಯಂತಿ ಅವರ ಪ್ರಾಣ ಉಳಿದದ್ದು ಮಾತ್ರ ಒಂದು ಹಾಡಿನಿಂದ ಎಂದರೆ ನಂಬಲೇಬೇಕು.. ಹೌದು ಹಳೆ ಕಾಲದ ಕೆಲ ಹಾಡುಗಳಿಗೆ ಅಂತಹ ಶಕ್ತಿಯೂ ಇದ್ದದ್ದೂ ಸತ್ಯದ ಮಾತು..

ಹೌದು ಈ ಬಗ್ಗೆ ಹಳೆಯ ಹಾಡೊಂದನ್ನು ಹಂಚಿಕೊಂಡಿರುವ ಜಗ್ಗೇಶ್ ಅವರು ಈ ಕುರಿತು ಮಾತನಾಡಿದ್ದಾರೆ.. “ಹಿಂದೆ ಸಿನಿಮಾ ಒಂದು ರೀತಿ ಪ್ರತಿ ಮನುಷ್ಯನ ಪರಿಸ್ಥಿತಿ ಪರಿಸರಕ್ಕೆ ಸಾಂತ್ವನ ಹೇಳುವ ಬಂಧುವಂತೆ ಇರುತ್ತಿತ್ತು.. ಒಂದು ಹಾಡು ಕೇಳಿ ಜೀವ ಕಳೆದುಕೊಳ್ಳಲು ಆರಂಭ ದಿನದಲ್ಲಿ ಯತ್ನಿಸಿದ ಚಿತ್ರನಟಿ ಜಯಂತಿ ರವರು ಬದಲಾದರಂತೆ.. ಅಂತ ತಾಕತ್ತು ಇತ್ತು ಅಂದಿನ ಕಾಲದ ಹಾಡಿನ ಸಾಹಿತ್ಯಕ್ಕೆ.. ಈ ಹಾಡು ಎಲ್ಲಾ ಕಾಲಕ್ಕು ಸಾಂತ್ವನ ಹೇಳುವ ಹಿರಿಯನಂತೆ ಕೇಳಿಸಿತು.. ಅರಿಯದ ಮರೆತ ಹಾಗು ಇಂದಿನ ಯಾಂತ್ರಿಕ ಚಿಂತನೆಯ ಆತ್ಮಕ್ಕೆ ಈ ಹಾಡು ಕೇಳಬೇಕು.. ಆ ಸಾಂತ್ವನದ ದ್ವನಿ ನಟನೆ ನನ್ನ ಆತ್ಮೀಯ ದಿವಂಗತ ಸುದರ್ಶನ್ ರವರದು.. 1971..

ಇಂದಿನ ಹಾಡುಗಳ ಸಾಹಿತ್ಯ ಎಂದೆಂದಿಗೂ ಆ ದಿನದ ಸಮ ಆಗುವುದಿಲ್ಲಾ.. ಕಾರಣ ಇಂದು ಏನಿದ್ದರೂ ಪ್ರೀತಿ ಪ್ರೇಮ ಕುಡಿತ ಕಾ’ಮ ಕ್ರೌ’ರ್ಯ ಸ್ವಪ್ರತಿಷ್ಟೆಗೆ ಮಾತ್ರ ಸೀಮಿತ ಆಗಿಬಿಟ್ಟಿದೆ ಇಂದಿನ ದಿನದ ಸಾಹಿತ್ಯದ ಸಾಲು.. ಓಲ್ಡ್ ಈಸ್ ಆಲ್ವೇಸ್ ಗೋಲ್ಡ್.. ಅಮರ ಹಳೆ ನೆನಪು..” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಕೆಳಗಿನ ವೀಡಿಯೋ ನೋಡಿ.. ಎಂತಹ ಡಿಪ್ರೆಷನ್ ಆದರೂ ಹೋಗಲಾಡಿಸಿಬಿಡುತ್ತದೆ..

ಜಗ್ಗೇಶ್ ಅವರ ಮಾತು ಅಕ್ಷರಶಃ ಸತ್ಯ.. ಈಗಿನ ಸಾಹಿತ್ಯವನ್ನು ಹಳೆಯ ಕಾಲದ ಹಾಡುಗಳಿಗೆ ಎಂದೂ ಹೋಲಿಕೆ ಮಾಡಲಾಗದು.. ಡಾನು, ರೌಡಿ, ಪಂಕಜ.. ಇಂತವೇ.. ಹಳೆಯ ಕಾಲದಲ್ಲಿಯೂ ಸಿನಿಮಾಗೆ ಒಂದರಂತೆ ಡಿಸ್ಕೋ ಹಾಡುಗಳು ಇದ್ದವು.. ಇಲ್ಲವೆಂದೇನಿಲ್ಲ.. ಆದರೆ ಈಗ ಸಿನಿಮಾದ ತುಂಬೆಲ್ಲಾ ಅವೇ ಆಗಿಬಿಟ್ಟಿವೆ.. ಮನಸ್ಸಿಗೆ ಸಾಂತ್ವಾನ ಸಿಗುವ ಸಾಹಿತ್ಯಗಳು ವಿರಳವಾಗಿ ಹೋಗಿರುವುದು ಸತ್ಯ.. ಮತ್ತೆ ನಮ್ಮ ಹಳೆಯ ಸಾಹಿತ್ಯಗಳು ಈಗಿನ ಸಂಗೀತ ಲೋಕದಲ್ಲಿ‌ ಮರುಕಳಿಸುವಂತಾಗಲಿ..