ನನ್ನನ್ನು ಕ್ಷಮಿಸಿ.. ನೋವು ಹಂಚಿಕೊಂಡ ಸೀತಾರಾಮ್ ಅವರು..

ಕೊರೊನಾ ಬಂದು ಮಗಳು‌ ಜಾನಕಿಯನ್ನು‌ ನುಂಗಿ ಹಾಕಿದಂತಾಗಿದೆ ಪರಿಸ್ಥಿತಿ.. ಹೌದು ಕೊರೊನಾ ಬಂದು ಲಾಕ್ ಡೌನ್ ಆಯಿತು.. ಧಾರಾವಾಹಿಗಳು ಸಿನಿಮಾ ಚಿತ್ರೀಕರಣ ನಿಂತವು.. ಎರಡು ತಿಂಗಳ ಬಳಿಕ ಇದೀಗ ಲಾಕ್ ಡೌನ್ ಕೂಡ ಸಡಿಲವಾಗಿದೆ.. ಧಾರಾವಾಹಿಗಳ ಶೂಟಿಂಗ್ ಗೆ ಅನುಮತಿ ನೀಡಲಾಗಿದೆ.. ಆದರೆ ದುರಾದೃಷ್ಟವೋ ಮತ್ತಿನ್ನೇನೋ ಕೆಲವು ಧಾರಾವಾಹಿಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ..

ಅದರಲ್ಲೂ ಕಲರ್ಸ್ ಸೂಪರ್ ವಾಹಿನಿಯನ್ನೇ ಸ್ಥಗಿತಗೊಳಿಸಲಾಗಿದೆ.. ವಾಹಿನಿ ಸ್ಥಗಿತಗೊಂಡಿತು ಎಂದು ಯಾರೂ ಚಿಂತಿಸುತ್ತಿಲ್ಲ.. ಆದರೆ ಆ ವಾಹಿನಿಯಲ್ಲಿ ಬರುತ್ತಿದ್ದ ಮಗಳು ಜಾನಕಿ ಧಾರಾವಾಹಿಗಾಗಿ ಮಾತ್ರ ಅಪಾರ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ.. ಹೌದು ಕಲರ್ಸ್ ಸೂಪರ್ ವಾಹಿನಿ ಬಂದ್ ಆದ ಕಾರಣ‌ ಮಗಳು ಜಾನಕಿ ಧಾರಾವಾಹಿ ನಿಂತಿದೆ..

ಕಲರ್ಸ್ ಸಂಸ್ಥೆಯ ಮತ್ತೊಂದು ವಾಹಿನಿ ಕಲರ್ಸ್ ಕನ್ನಡ ವಾಹಿನಿಯಲ್ಲಾದರೂ ಧಾರಾವಾಹಿ‌ ಮುಂದುವರೆಸಿ ಎಂದು ಮನವಿ ಮಾಡಿದರು.. ಆದರೆ ಹಕ್ಕುಸ್ವಾಮ್ಯದ ಪ್ರಶ್ನೆ ಬಂದಿರುವ ಕಾರಣ ಧಾರಾವಾಹಿಯನ್ನು ವಿಧಿಯಿಲ್ಲದೇ ನಿಲ್ಲಿಸಲೇ ಬೇಕಿದೆ.. ಯಾರ ಕೈಲೂ ಏನು ಮಾಡಲು ಸಾಧ್ಯವಾಗುತ್ತಿಲ್ಲ.. ಆದರೆ ಈ ಹಿಂದೆ ಬಿಗ್ ಬಾಸ್ ಅನ್ನು ಕಲರ್ಸ್ ಕನ್ನಡ ಕಲರ್ಸ್ ಸೂಪರ್ ಎರಡರಲ್ಲೂ ಪ್ರಸಾರ ಮಾಡುತ್ತಿದ್ದರು.. ಅದನ್ನೆಲ್ಲಾ ಪ್ರಸಾರ ಮಾಡಬಹುದಾದರೆ ಮಗಳು ಜಾನಕಿಯನ್ನೇಕೆ ಕಲರ್ಸ್ ಕನ್ಮಡ ವಾಹಿನಿಯಲ್ಲಿ ಪ್ರಸಾರ ಮಾಡಲು ಸಾಧ್ಯವಿಲ್ಲ? ಈ ಬಗ್ಗೆ ಕಲರ್ಸ್ ಮ್ಯಾನೆಜ್‌ಮೆಂಟ್‌ ತಮ್ಮ ನಿಯಮಗಳನ್ನು ಬದಲಿಸಿ ಮಗಳು ಜಾನಕಿ ಪ್ರಸಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ಅಭಿಮಾನಿಗಳ‌ ಮನವಿ..

ಈ ಬಗ್ಗೆ ಇಂದು ಮತ್ತೊಮ್ಮೆ ಸೀತಾರಾಮ್ ಅವರು ಮಾತನಾಡಿದ್ದು, ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.. ಹೌದು ತಮ ಸಾಮಾಜಿಕ ಜಾಲತಾಣದಲ್ಲಿ‌ “ನಮಸ್ಕಾರ.. ನೀವೆಲ್ಲರೂ ಮಗಳು ಜಾನಕಿ ಯ ಬಗ್ಗೆ ಇಟ್ಟುಕೊಂಡಿರುವ ಪ್ರೀತಿಯ ತೀವ್ರತೆಗೆ ನಾನು ಆಭಾರಿ. ಅದನ್ನು ಮತ್ತೆ ಪ್ರಸಾರ ಮಾಡುವಂತೆ ನೀವು ಉಂಟು ಮಾಡುತ್ತಿರುವ ನೈತಿಕ ಒತ್ತಡ ಮತ್ತು ಹೋರಾಟ ನನ್ನಲ್ಲಿ ಅಪಾರ ನೋವು, ಸಂತೋಷಗಳೆರಡನ್ನೂ ಒಟ್ಟಿಗೇ ಉಂಟು ಮಾಡುತ್ತಿದೆ.

ನಿಮ್ಮೆಲ್ಲರ ಪ್ರೀತಿಯ ಒತ್ತಾಸೆಯಿದ್ದರೂ ಈ ನಿಟ್ಟಿನಲ್ಲಿ ನಾನು ಏನೂ ಮಾಡಲಾಗದ ಸ್ಥಿತಿ ಯಲ್ಲಿ ನಿಂತಿದ್ದೇನೆ. ಅದಕ್ಕಾಗಿ ನನ್ನನ್ನು ಕ್ಷಮಿಸಿ. ಬೇರೆ ಚಾನಲ್ ನಲ್ಲಿ ಮುಂದುವರೆಸುವುದು ಕಾನೂನಿನ ಪ್ರಕಾರ ಸಾಧ್ಯವಿಲ್ಲ. ಹಕ್ಕುಗಳು ಈ ಚಾನಲ್ ಬಳಿ ಇದೆ. ನಿಮ್ಮೆಲ್ಲರ ಪ್ರೀತಿಯ ಸಲಹೆಗಳ ಬಗ್ಗೆ ಅಹರ್ನಿಶಿ ಯೋಚಿಸುತ್ತಿದ್ದೇನೆ. ಕೆಲವು ದಿನ ಸಮಯ ಕೊಡಿ ದಯವಿಟ್ಟು.. ನಿಮ್ಮೆಲ್ಲರಿಗೂ ಮತ್ತೊಮ್ಮೆ ಆಭಾರಿ..” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..