ಜೈಜಗದೀಶ್ ಅವರಿಗೆ ಅದಾಗಲೇ ಒಂದು ಮದುವೆಯಾಗಿದೆ ಎಂದು ಗೊತ್ತಾದಾಗ ವಿಜಯಲಕ್ಷ್ಮಿ ಅವರು ಮಾಡಿದ್ದೇನು ಗೊತ್ತಾ..

ಸ್ಯಾಂಡಲ್ವುಡ್ ನ ಸ್ಟಾರ್ ಜೋಡಿಗಳಲ್ಲಿ ಅದಲ್ಲೂ ಹಿರಿಯ ಸ್ಟಾರ್ ಜೋಡಿಗಳಲ್ಲಿ ಒಂದಾಗಿರುವ ನಟ ಜೈ ಜಗದೀಶ್ ಹಾಗೂ ನಟಿ ವಿಜಯಲಕ್ಷ್ಮಿ ಸಿಂಗ್ ಅವರ ಜೋಡಿ ಯಾರಿಗೆ ತಾನೇ ಗೊತ್ತಿಲ್ಲ.. ವಿಷ್ಣುವರ್ಧನ್ ಅವರು ಅಂಬರೀಶ್ ಅವರ ಕಾಲದಲ್ಲಿ ನೋಡಲು ಸ್ಪುರದ್ರೂಪಿಯಾಗಿದ್ದ ನಟ ಜೈಜಗದೀಶ್ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದರು.. ಆ ಸಮಯದಲ್ಲಿ ಜೈಜಗದೀಶ್ ಅವರನ್ನು ಸಾಕಷ್ಟು ಮಂದಿ ಮೆಚ್ಚಿಕೊಂಡಿದ್ದು ಉಂಟು.. ಹಾಗೆಯೇ ಅದೇ ಸಮಯದಲ್ಲಿ ಜೈಜಗದೀಶ್ ಅವರು ಹಾಗೂ ವಿಜಯಲಕ್ಷ್ಮಿ ಸಿಂಗ್ ಅವರು ಪ್ರೀತಿಸಿ ಮದುವೆಯಾದರು.. ಮುದ್ದಾದ ಮೂರು ಮಕ್ಕಳು ಆದವು.. ವೈಸಿರಿ ವೈಭವಿ ವೈನಿಧಿ ಎಂಬ ಹೆಸರನ್ನಿಟ್ಟುರು.. ಸುಂದರ ಸಂಸಾರ ಅವರದ್ದಾಗಿತ್ತು.. ಜನರೂ ಸಹ ಈ ಜೋಡಿ ನಿಜಕ್ಕೂ ಒಳ್ಳೆಯ ಜೋಡಿ ಎನ್ನುತ್ತಿದ್ದರು.. ಆದರೆ ನಿಜ ವಿಚಾರ ಬೇರೆಯೇ ಇತ್ತು.. ಹೌದು ಅದಾಗಲೇ ಜೈಜಗದೀಶ್ ಅವರಿಗೆ ಒಂದು ಮದುವೆಯಾಗಿತ್ತು… ನಟಿ ರೂಪಾ ಅವರನ್ನು ಮದುವೆಯಾಗಿದ್ದ ಜೈಜಗದೀಶ್ ಅವರಿಗೆ ಒಂದು ಮಗು ಸಹ ಇತ್ತು.. ಆದರೆ ಈ ವಿಚಾರ ಕೆಲ ಆಪ್ತರಿಗೆ ಮಾತ್ರವೇ ಗೊತ್ತಿತ್ತು.. ಜನರಿಗೂ ಸಹ ತಿಳಿದಿರಲಿಲ್ಲ.. ಕಳೆದ ಬಿಗ್ ಬಾಸ್ ಸೀಸನ್ ನಲ್ಲಿ ಜೈಜಗದೀಶ್ ಅವರು ಭಾಗವಹಿಸಿ ಈ ವಿಚಾರವನ್ನು ಹಂಚಿಕೊಂಡಾಗಲೇ ಎಲ್ಲರಿಗೂ ತಿಳಿದಿತ್ತು.. ಸಾಕಷ್ಟು ಜನರಿಗೆ ಆಶ್ಚರ್ಯ ಆಗಿದ್ದೂ ಉಂಟು.. ಇನ್ನು ಈ ವಿಚಾರ ವಿಜಯಲಕ್ಷ್ಮಿ ಸಿಂಗ್ ಅವರಿಗೆ ತಿಳಿದಾಗ ಅವರಿಗೆ ಹೇಗಾಯಿತು ಎಂಬುದನ್ನು ಇಸ್ಮಾರ್ಟ್ ಜೋಡಿ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ..

ಹೌದು ಕನ್ನಡ ಚಿತ್ರರಂಗದ ಬ್ಯೂಟಿಫುಲ್ ಜೋಡಿ ಜೈಜಗದೀಶ್ ಹಾಗೂ ವಿಜಯಲಕ್ಷ್ಮೀ ಸಿಂಗ್. ಸ್ಯಾಂಡಲ್‌ವುಡ್‌ನಲ್ಲಿ ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಜೈಜಗದೀಶ್ ಅವರು ವಿಜಯಲಕ್ಷ್ಮೀ ಸಿಂಗ್ ಅವರನ್ನು ಮದುವೆಯಾಗುವ ಮುನ್ನ ರೂಪಾ ಎಂಬುವರನ್ನು ವಿವಾಹವಾಗಿದ್ದರು. ಆದರೆ, ಇಬ್ಬರ ಮಧ್ಯೆ ಹೊಂದಾಣಿಕೆ ಆಗದ ಕಾರಣ.. ಮನಸ್ತಾಪ, ಭಿನ್ನಾಭಿಪ್ರಾಯ ಹೆಚ್ಚಾಗಿದ್ದ ಕಾರಣ ರೂಪಾ ಮತ್ತು ಜೈಜಗದೀಶ್ ದೂರಾದರು..

ಅಸಲಿಗೆ, ರೂಪಾ ಎಂಬುವರನ್ನು ಮದುವೆಯಾಗುವ ಮುನ್ನವೇ ಮೈಸೂರಿನಲ್ಲಿ ವಿಜಯಲಕ್ಷ್ಮೀ ಸಿಂಗ್ ಅವರನ್ನು ಜೈಜಗದೀಶ್ ಭೇಟಿಯಾಗಿದ್ದರು. ಸಿನಿಮಾ ಕಾರಣದಿಂದಾಗಿ ಬೆಂಗಳೂರಿಗೆ ಬಂದ ಜೈಜಗದೀಶ್ ಅವರು ರೂಪಾ ಎಂಬುವರನ್ನು ವಿವಾಹವಾಗಿದ್ದಾರೆ ಎಂಬ ವಿಷಯ ತಿಳಿದಾಗ ವಿಜಯಲಕ್ಷ್ಮೀ ಸಿಂಗ್ ಅವರಿಗೆ ಬೇಜಾರಾಗಿತ್ತು. ಈ ಬಗ್ಗೆ ‘ಇಸ್ಮಾರ್ಟ್ ಜೋಡಿ’ ವೇದಿಕೆ ಮೇಲೆ ವಿಜಯಲಕ್ಷ್ಮೀ ಸಿಂಗ್ ಹಾಗೂ ಜೈಜಗದೀಶ್ ಮಾತನಾಡಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಹೋಸ್ಟ್ ಆಗಿರುವ ‘ಇಸ್ಮಾರ್ಟ್ ಜೋಡಿ’ ರಿಯಾಲಿಟಿ ಶೋನಲ್ಲಿ ವಿಜಯಲಕ್ಷ್ಮೀ ಸಿಂಗ್ ಹಾಗೂ ಜೈಜಗದೀಶ್ ದಂಪತಿ ಸ್ಪರ್ಧಿಸುತ್ತಿದ್ದಾರೆ. ತಮ್ಮ ಲವ್ ಸ್ಟೋರಿ ಬಗ್ಗೆ ಇಬ್ಬರೂ ಮಾತನಾಡಿದ್ದು ಹೀಗೆ.. ಮೈಸೂರಿನ ವುಡ್‌ಲ್ಯಾಂಡ್ಸ್ ಥಿಯೇಟರ್‌ನಲ್ಲಿ ನಾನು ಇವರನ್ನ ಮೊದಲ ಬಾರಿಗೆ ಭೇಟಿಯಾಗಿದ್ದು. ನಾನು ಆಗಷ್ಟೇ ಏಳನೇ ತರಗತಿ ಪಾಸ್ ಆಗಿದ್ದೆ. ಆಗ ಮೊದಲ ಬಾರಿಗೆ ಫ್ರೆಂಡ್ಸ್ ಜೊತೆ ಹೋಗೋದಕ್ಕೆ ನನ್ನ ತಾಯಿ ನನ್ನ ಕಳಿಸಿದ್ರು. ಇವರು ಮತ್ತು ಫ್ರೆಂಡ್ ನಮ್ಮ ಹಿಂದೆ ಕೂತಿದ್ದರು. ಆಗಲೇ ನಮಗೆ ಲೈನ್ ಹೊಡೀತಿದ್ರು. ಇಂಟರ್‌ವೆಲ್‌ನಲ್ಲಿ ಟಾಫಿ ಬಾರ್ ಮತ್ತು ಪಾಪ್ ಕಾರ್ನ್ ತಂದುಕೊಟ್ಟರು.

ನಾನು ತೆಗೆದುಕೊಳ್ಳಲಿಲ್ಲ. ಆದರೆ, ನನ್ನ ಫ್ರೆಂಡ್ ತಗೊಂಡ್ಳು. ಇಬ್ಬರೂ ತಿಂದ್ವಿ. ತಿಂದ್ಮೇಲೆ ಥ್ಯಾಂಕ್ಸ್ ಹೇಳಬೇಕು ಅನ್ನೋದು ನನ್ನ ಮನಸ್ಸಿನಲ್ಲಿ ಇತ್ತು. ಪಿಕ್ಚರ್ ಮುಗಿದ್ಮೇಲೆ ನನಗೆ ಮೊದಲು ಕಾಣಿಸಿದ್ದೇ ಜಗದೀಶ್ ಮುಖ. ಯಾಕೋ ಅಳುಕಾಯ್ತು, ಇವರಿಂದ ತಪ್ಪಿಸಿಕೊಂಡು ಓಡಿದೆ. ಮಧ್ಯೆದಲ್ಲಿ ಬಸ್ ಬಂದಾಗ ಕೈಹಿಡಿದು ನಿಲ್ಲಿಸಿದರು. ಮತ್ತೆ ಓಡಿ ಐಸ್ ಕ್ರೀಂ ಪಾರ್ಲರ್ ಒಳಗೆ ಹೋಗಿ ಕೂತ್ವಿ. ಅಲ್ಲಿ ಐಸ್ ಕ್ರೀಂ ತಿಂದು ಬಿಲ್ ಕೊಡೋಕೆ ಹೋದ್ರೆ, ಅಷ್ಟರಲ್ಲಾಗಲೇ ಇವರೇ ಕೊಟ್ಟಿದ್ದರು. ನಾವು ತಪ್ಪಿಸಿಕೊಂಡು ಓಡಿದ್ವಿ. ಇದಾದ್ಮೇಲೆ ಮೂರು ವರ್ಷ ಗ್ಯಾಪ್ ಆಗೋಯ್ತು. ನಾವೆಲ್ಲೂ ಸಿಗಲಿಲ್ಲ ಮೀಟ್ ಮಾಡಲಿಲ್ಲ.

ಮೂರು ವರ್ಷ ಆದ್ಮೇಲೆ ಒಂದು ದಿನ.. ಇವರು ನನ್ನ ಅಣ್ಣನಿಗೆ ಫ್ರೆಂಡ್. ಅಂಬರೀಶ್ ಅವರ ಜೊತೆಗೇ ಇವರು ನಮ್ಮ ಮನೆಗೆ ಬಂದಿದ್ದರು. ಆಗ ನೋಡಿದ್ರೆ ಅದೇ ಐಸ್ ಕ್ರೀಂ ಪಾರ್ಲರ್ ಫೇಸ್‌ ಕಾಣಿಸ್ತು. ಅಷ್ಟರಲ್ಲಿ ಇವರಿಗೆ ಪುಟ್ಟಣ್ಣ ಕಣಗಾಲ್ ಅವರಿಂದ ಸಿನಿಮಾಗೆ ಅವಕಾಶ ಸಿಕ್ಕಿತ್ತು. ಆಗ ಇವರು ಬಂದು ಬೆಂಗಳೂರಿಗೆ ಹೋಗುತ್ತಿದ್ದೇನೆ.. ಮೈಸೂರಿನಲ್ಲಿ ಇರಲ್ಲ ಅಂತ ಹೇಳಿದರು. ಈ ವೇಳೆ ನನಗೆ ಸ್ವಲ್ಪ ಬೇಜಾರಾಯ್ತು. ಅಷ್ಟೇ. ಅದಾದ ಮೇಲೆ ಸಿಗಲಿಲ್ಲ.

ಮತ್ತೆ ಸ್ವಲ್ಪ ವರ್ಷಗಳ ಬಳಿಕ ಅಂಬರೀಶ್ ಮತ್ತೆ ಬಂದರು. ಜಗದೀಶ್ ಮದುವೆ ಆಯ್ತು ಅಂತ ಹೇಳಿದರು. ಹಾಗೆ ಹೇಳಿದಾಗ ನನಗೆ ಏನೋ ಒಂಥರಾ ಬೇಜಾರಾಯ್ತು. ಆದರೆ, ನಾನು ಅದನ್ನ ತೋರಿಸಿಕೊಳ್ಳಲಿಲ್ಲ. ಸುಮ್ಮನಾದೆ. ಇದಾದ ಬಳಿಕ ಒಂದೈದು ಸಿನಿಮಾಗಳಲ್ಲಿ ನಾವಿಬ್ಬರೂ ಒಟ್ಟಿಗೆ ನಟಿಸುವ ಪ್ರಮೇಯ ಬಂತು.

ಒಂದು ದಿವಸ ಜಗ್ಗು ಎಂಬ ಸಿನಿಮಾ ಶೂಟಿಂಗ್‌ ನಡೆಯುವಾಗ, ಇವರ ಬಾಯಲ್ಲಿ ಪಾಪ್‌ಕಾರ್ನ್ ಟಾಪಿಕ್ ಬಂತು. ನಾನು ನೀನೇನಾ ಅಂತ ಕೇಳಿದಾಗ ಹೌದು ಅಂತ ನಕ್ಕು ಸುಮ್ಮನಾದರು.
ಆಮೇಲೆ ಗೊತ್ತಾಯಿತು ಇವರು ಮೂರು ವರ್ಷಗಳಿಂದ ಹೋಟೆಲ್‌ನಲ್ಲಿದ್ದಾರೆ ಅಂತ.. ಎಂದು ವಿಜಯಲಕ್ಷ್ಮೀ ಸಿಂಗ್ ಹೇಳಿದರು.

ಜೈಜಗದೀಶ್ ಹೇಳಿದ್ದೇನು.. ನಾನು ಒಟ್ಟು 8 ವರ್ಷ ಹೋಟೆಲ್‌ನಲ್ಲಿದ್ದೆ.. ಆದ್ರೆ, ನನ್ನ ಮದುವೆ ಬ್ರೇಕಪ್ ಆಗೋಯ್ತು. ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಇತ್ತು. ಒಂದು ಮಗು ಆಗಿತ್ತು. ಬೇರೆ ಬೇರೆ ಮೆಂಟಾಲಿಟಿ ಇದ್ದಿದ್ರಿಂದ ನಾವು ದೂರ ಆದ್ವಿ ವಿಜಯಲಕ್ಷ್ಮಿ ಸ್ಟೈಲ್ ನನಗೆ ತುಂಬಾ ಇಷ್ಟ ಆಗಿತ್ತು. ಆಗಿನ ಕಾಲಕ್ಕೆ ತುಂಬಾ ಮಾಡರ್ನ್ ಆಗಿದ್ದಳು. ನಾನು ಮೊದಲ ಹೆಂಡತಿಯಿಂದ ಸೆಪರೇಟ್ ಆದ್ಮೇಲೆ ಇವಳೊಂದಿಗೆ ಮದುವೆಯಾದೆ ಎಂದರು ಜೈಜಗದೀಶ್..

ಮೂವರು ಮಕ್ಕಳು.. ಜೈಜಗದೀಶ್ ಹಾಗೂ ರೂಪಾ ದಂಪತಿಗೆ ಅರ್ಪಿತಾ ಎಂಬ ಪುತ್ರಿ ಇದ್ದಾಳೆ. ಜೈಜಗದೀಶ್ ಹಾಗೂ ವಿಜಯಲಕ್ಷ್ಮೀ ಸಿಂಗ್ ದಂಪತಿಗೆ ವೈನಿಧಿ, ವೈಸಿರಿ, ವೈಭವಿ ಎಂಬ ಮೂವರು ಮಕ್ಕಳಿದ್ದಾರೆ.. ಸಧ್ಯ ಇಸ್ಮಾರ್ಟ್ ಜೋಡಿ ವೇದಿಕೆಯಲ್ಲಿ ಇಬ್ಬರೂ ತಮ್ಮ ಮದುವೆಯ ದಿನಗಳನ್ನು ನೆನೆದು ಭಾವುಕರಾದರು..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622