ಒಡೆದ ಹಾಲಾಯಿತು ಮನಸ್ಸು.. ರಮ್ಯಾರ ವೀಡಿಯೋಗೆ ಜಗ್ಗೇಶ್ ಪ್ರತಿಕ್ರಿಯೆ..

ಸ್ಯಾಂಡಲ್ವುಡ್ ನ ಒಂದು ಕಾಲದ ಟಾಪ್ ಹೀರೋಯಿನ್ ಎಲ್ಲಾ ಸ್ಟಾರ್ ನಟರ ಜೊತೆಯೂ ಅಭಿನಯಿಸಿದ ಸ್ಟಾರ್ ನಟಿ ರಮ್ಯ ತಮ್ಮ ಸಿನಿಮಾಗಳ ವಿಷಯವಾಗಿಯಷ್ಟೇ ಅಲ್ಲದೇ ಅನೇಕ ಕಾಂಟ್ರೋವರ್ಸಿಯಲ್ಲೂ ಸುದ್ದಿಯಾದರು..

ನಂತರ ಸಿನಿಮಾ ಬಿಟ್ಟು ಚುನಾವಣೆಗೆ ನಿಂತರು.. ಗೆದ್ದರು.. ಮತ್ತೆ ಕೆಲವೊಂದಿಷ್ಟು ದಿನಗಳು ಮಾಯವಾದರು.. ಇದೀಗ ಆಗೊಮ್ಮೆ ಈಗೊಮ್ಮೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು ಮತ್ತೆ ಸ್ಯಾಂಡಲ್ವುಡ್ ಗೆ ರೀಎಂಟ್ರಿ ಆಗ್ತಾರೆ ಅನ್ನೋ ಮಾತು ಗಾಂಧಿನಗರದಲ್ಲಿ ಕೇಳಿ ಬರ್ತಿದೆ..

ಇಂತಹ ಸಮಯದಲ್ಲಿಯೇ ಜಗ್ಗೇಶ್ ಅವರು ರಮ್ಯ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ.. ಹೌದು ನೀರ್ ದೋಸೆ ಸಿನಿಮಾದಲ್ಲಿ ಅಭಿನಯಿಸುವುದಾಗಿ ಹೇಳಿ ಆಗ ಚುನಾವಣೆ ಬಂದ ಕಾರಣ ನೀರ್ ದೋಸೆ ಸಿನಿಮಾದಿಂದ ರಮ್ಯ ಅವರು ಹೊರಗುಳಿದು ಬಿಟ್ಟರು.. ಆಗಿನಿಂದ ಜಗ್ಗೇಶ್ ಅವರಿಗೂ ರಮ್ಯಾ ಅವರಿಗೂ ಅಷ್ಟಕ್ಕಷ್ಟೇ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ.. ಅನೇಕ ಬಾರಿ ರಮ್ಯ ಅವರ ಕೆಲವು ವಿಚಾರಗಳ ಬಗ್ಗೆ ಜಗ್ಗೇಶ್ ಅವರು ನೇರವಾಗಿ ಖಾರವಾಗಿಯೇ ಪ್ರತಿಕ್ರಿಯೆ ನೀಡುತ್ತಲೇ ಬಂದಿದ್ದರು.

ಆದರೆ ಇದೀಗ ರಮ್ಯಾ ಅವರ ವೀಡಿಯೋ ವೊಂದನ್ನು ಪೋಸ್ಟ್ ಮಾಡಿ ರಮ್ಯಾರನ್ನು ಮತ್ತೆ ಸ್ಯಾಂಡಲ್ವುಡ್ ಗೆ ಕಮ್ ಬ್ಯಾಕ್ ಮಾಡಲು ಹೇಳಿದ್ದಾರೆ.. ಹೌದು ಕನ್ನಡದ ಕೋಟ್ಯಾಧಿಪತಿ ಶೋ ನಲ್ಲಿ ರಮ್ಯಾ ಅವರು ಪಾಲ್ಗೊಂಡಿದ್ದಾಗ ಪುನೀತ್ ಅವರಿಗೆ ಜಗ್ಗೇಶ್ ಅವರ ಮಿಮಿಕ್ರಿ ಮಾಡಿ ಅಂತ ರಮ್ಯಾ ಕೇಳಿಕೊಳ್ಳುತ್ತಾರೆ..

ಆ ವೀಡಿಯೋವನ್ನ ಪೋಸ್ಟ್ ಮಾಡಿರುವ ಜಗ್ಗೇಶ್ ಅವರು “ಕಲಾಬಂಧು ಪುನೀತ್ ರಾಜ್ ಕುಮಾರ್ ಅವರು ನನ್ನ ಇಮಿಟೇಟ್ ಮಾಡಿದ ವೀಡಿಯೋ ಖುಷಿ ಕೊಟ್ಟಿತು.. ಕೆಲ ವೈಯಕ್ತಿಕ ಸಿದ್ಧಾಂತ ಒಡೆದ ಹಾಲಾಯಿತು ಮನಸ್ಸು.. ವೈಯಕ್ತಿಕವಾಗಿ ನಾನು ಈಕೆಯನ್ನು ಬಹಳ ಇಷ್ಟಪಡುವೆ.. ಈಕೆ ಒಳ್ಳೆ ನಟಿ..ಮತ್ತೆ ಈಕೆ ನಟಿಸಲಿ ಎಂದು ಹಾರೈಸುವೆ.. ಕಮ್ ಬ್ಯಾಕ್ ರಮ್ಯ.. ಗಾಡ್ ಬ್ಲೆಸ್ ಎಂದು ಶುಭ ಹಾರೈಸಿದ್ದಾರೆ.‌

Tags:

Latest from News

Go to Top