ಬ್ರೇಕಿಂಗ್ ನ್ಯೂಸ್.. ನಟ ಜಗ್ಗೇಶ್ ವಿರುದ್ಧ ದೂರು ದಾಖಲು.. ಕಾರಣವೇನು ಗೊತ್ತಾ?

ಸ್ಯಾಂಡಲ್ವುಡ್ ನಟ ಹಾಗೂ ಬಿಜೆಪಿ ಮುಖಂಡರಾದ ಜಗ್ಗೇಶ್ ಅವರ ವಿರುದ್ಧ ಬೆಂಗಳೂರಿನ ಬನಶಂಕರಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೌದು ಜಗ್ಗೇಶ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬೇಜವಾಬ್ದಾರಿತನ ತೋರಿ ವ್ಯಕ್ತಿಯೊಬ್ಬರನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.‌ ಅಷ್ಟಕ್ಕೂ ನಿಜವಾಗಿ ನಡೆದದ್ದಾದರು ಏನು.. ಇಲ್ಲಿದೆ ನೋಡಿ..

ಮೊನ್ನೆ ಮೊನ್ನೆಯಷ್ಟೇ ಬೆಂಗಳೂರು ನಗರದಿಂದ ಅನೇಕರು ಊರು ಬಿಟ್ಟು ತಮ್ಮ ತಮ್ಮ ಊರುಗಳಿಗೆ ಸೇರಿಕೊಳ್ಳುತ್ತಿದ್ದ ದೃಶ್ಯ ವರದಿಯಾಗಿತ್ತು.. ಅದೇ ರೀತಿ ಬೆಂಗಳೂರಿನ ಮನೆಗಳನ್ನು ಖಾಲಿ ಮಾಡಿಕೊಂಡು ವಸ್ತುಗಳನ್ನೆಲ್ಲಾ ತುಂಬಿಕೊಂಡು ಬೆಂಗಳೂರಿನಿಂದ ತೆರಳುತ್ತಿದ್ದರು… ಸುದ್ದಿ ವಾಹಿನಿಯೊಂದು ಈ ಬಗ್ಗೆ ವರದಿ‌ ಮಾಡುವ ಸಂದರ್ಭದಲ್ಲಿ ಯುವಕರೊಬ್ಬರನ್ನ ಮಾತನಾಡಿಸಿದ್ದರು.. ಆತ ರಾಜ್ಯದ ಬಿಜೆಪಿ ಸರ್ಕಾರವೇ ಇದಕ್ಕೆಲ್ಲಾ ಹೊಣೆ, ಬೆಂಗಳೂರು ಸಾಕು, ಈ ಸರ್ಕಾರವೂ ಸಾಕು ಎಂದು ಮಾತನಾಡಿ ತನ್ನ ಊರಿಗೆ ಹೋಗುತ್ತಿರುವುದಾಗಿ ತಿಳಿಸಿದ್ದರು..

ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಆ ಯುವಕ ಮತ್ಯಾರೂ ಅಲ್ಲ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥ ಸಂದೀಪ್ ಅಣಬೇರು ಎಂದು ಸುದ್ದಿ ಹಬ್ಬಿಸಿಬಿಟ್ಟರು.. ಇದನ್ನು ನಂಬಿದ ಜಗ್ಗೇಶ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈತನ ಬಗ್ಗೆ ಪೋಸ್ಟ್ ಮಾಡಿದರು.. “ಮೊನ್ನೆ ಊರು ಬಿಟ್ಟು ಹೋಗುವವನು ನನಗೆ ಪಟ್ಟಣ ಹಾಗು ಭಾಜಪ ಸರ್ಕಾರ ಸಹವಾಸ ಸಾಕು ಊರಿಗೆ ಹೋಗಿ ಜಮೀನಿನಲ್ಲಿ ಜೀವನ ಮಾಡುವೆ ಎಂದು ಬಿಟ್ಟ.. ಅದು ವೈರಲ್ ಆಯಿತು.. ಈಗ ನೋಡಿದರೆ ಈತ ವೆಲ್ ಪ್ಲಾನಡ್ ಅನ್ಯ ಪಕ್ಷದ ಕಾರ್ಯಕರ್ತ.. ಆದರು ಸಹೋದರ ಎಷ್ಟೆ ಯತ್ನಿಸಿದರು ನರೇಂದ್ರ ಮೋದಿ, ಬಿಜೆಪಿ ಜನರ ಮನಸ್ಸಲ್ಲಿ ಜಾಗಪಡೆದಿದೆ.. ಜೈಹಿಂದ್..” ಎಂದು ಬರೆದುಕೊಂಡಿದ್ದರು.

ಅಸಲಿಗೆ ಕಾಂಗ್ರೆಸ್ ಮುಖ್ಯಸ್ಥ ಮತ್ತು ಅಂದು ಊರು ಬಿಟ್ಟು ಹೋಗುವಾಗ ಮಾತನಾಡಿದ ಯುವಕ ಬೇರೆ ಬೇರೆ ವ್ಯಕ್ತಿಯಾದ್ದರಿಂದ ಇಬ್ಬರೂ ಸಹ ಪ್ರತ್ಯೇಕ ವೀಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದರು.. ಆನಂತರ ಜಗ್ಗೇಶ್ ಅವರು ಹಾಕಿರುವ ಫೋಟೋದಲ್ಲಿನ ವ್ಯಕ್ತಿಯನ್ನು ಅವಹೇಳನ ಮಾಡಲಾಗಿದೆ ಎಂಬ ಕಾರಣಕ್ಕೆ ಜಗ್ಗೇಶ್ ಅವರ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಐ ಟಿ ಸೆಲ್ ಮುಖ್ಯಸ್ಥ ಸಂದೀಪ್ ದೂರು ನೀಡಿದ್ದಾರೆ..

ಅಷ್ಟೇ ಅಲ್ಲದೆ ಜಗ್ಗೇಶ್ ಅವರ ವಿರುದ್ಧ ಅಸಮಾಧಾನ ಹೊರ ಹಾಕಿರುವ ಸಂದೀಪ್ ಅವರು ಈ ರೀತಿಯ ತಪ್ಪನ್ನು ಯಾರೋ ಸಾಮಾನ್ಯ ಜನರು ಮಾಡಿದ್ದರೆ ಪರವಾಗಿಲ್ಲ.. ಆದರೆ ಎಂಎಲ್ಎ ಹಾಗೂ ಕೆಎಸ್ಆರ್ಟಿಸಿ ಅಧ್ಯಕ್ಷರಾಗಿದ್ದ ಜಗ್ಗೇಶ್ ಅವರು ಈ ರೀತಿ ಸತ್ಯ ತಿಳಿಯದೆ ಪೋಸ್ಟ್ ಮಾಡಿರುವುದು ತಪ್ಪು ಸಂದೇಶವನ್ನು ನೀಡುವಂತಾಗಿದೆ.. ಅಷ್ಟೇ ಅಲ್ಲದೆ ಅವರು ಜನರ ದಾರಿಯನ್ನು ತಪ್ಪಿಸಿದ್ದಾರೆ.. ಜಗ್ಗೇಶ್ ಅವರು ಈ ಕೂಡಲೇ ಅವರು ಮಾಡಿರುವ ಪೋಸ್ಟ್ ಅನ್ನು ಡಿಲೀಟ್ ಮಾಡಿ ರಾಜ್ಯದ ಜನರ ಮುಂದೆ ಕ್ಷಮೆ ಕೇಳಬೇಕು.. ಕ್ಷಮೆ ಕೇಳದಿದ್ದರೆ..ಎಲ್ಲಾ ಜಿಲ್ಲೆಗಳಲ್ಲಿಯೂ ಮಾನನಷ್ಟ ಮೊಕದ್ದಮೆ ಹೂಡಿ ವರ್ಷಪೂರ್ತಿ ಓಡಾಡುವಂತೆ ಮಾಡುತ್ತೇವೆ ಎಂದಿದ್ದಾರೆ..