ಸಾಲ ತೀರಿಸಲು ಮನೆಯನ್ನೇ ಮಾರಿದ ಜಗ್ಗೇಶ್ ಅವರು..

ಚಿತ್ರರಂಗ ಅನ್ನೋದು ತೆರೆಯ ಮೇಲಷ್ಟೇ ಬಣ್ಣದ ಬದುಕಲ್ಲ.. ಸ್ವಲ್ಪ ಎಡವಟ್ಟಾದರೂ ನಿಜ ಜೀವನವೂ ಬಣ್ಣದಂತೆ ಕರಗಿ ಹೋಗುತ್ತದೆ.. ಹೌದು ಕಲಾವಿದರೆಲ್ಲಾ ಶ್ರೀಮಂತರು ಎನ್ನುವ ಒಂದು ತಪ್ಪು ಅಭಿಪ್ರಾಯ ಬಹುತೇಕರಲ್ಲಿದೆ.. ಆದರೆ ಅವರಿಗೂ ಕಷ್ಟಗಳಿರುತ್ತವೆ ಅನ್ನೋದಕ್ಕೆ ದೊಡ್ಡ ದೊಡ್ಡ ಸ್ಟಾರ್ ನಟರುಗಳೇ ಕಷ್ಟದ ಸನ್ನಿವೇಶಗಳನ್ನು ಅದರಲ್ಲೂ ಆರ್ಥಿಕ ತೊಂದರೆಯನ್ನು ಅನುಭವಿಸಿರುವುದೇ ಸಾಕ್ಷಿ..

ಅದೇ ರೀತಿ ನವರಸ ನಾಯಕ ಜಗ್ಗೇಶ್ ಅವರೂ ಸಹ ತಮ್ಮ ಸಾಲ ತೀರಿಸುವ ಸಲುವಾಗಿ ಮನೆಯನ್ನೇ ಮಾರಿದ್ದರು.. ಅದರಲ್ಲೂ ಆ ಮನೆ ಇಂದು 16 ಲಕ್ಷ ಬಾಡಿಗೆ ಪಡೆಯುತ್ತಿರುವ ಮನೆಯಾಗಿದೆ.. ಹೌದು ಬಹಳ ಹಿಂದೆ ಮೇಕಪ್ ಎಂಬ ಸಿನಿಮಾ ಬಂದಿತ್ತು.. ಆ ಸಿನಿಮಾದಲ್ಲಿ ಜಗ್ಗೇಶ್ ಅವರು ನಾಯಕನ ಪಾತ್ರದ ಜೊತೆಗೆ ದೊಡ್ಡಮ್ಮನ ಪಾತ್ರವನ್ನೂ ಮಾಡಿದ್ದರು..

ಆ ಸಿನಿಮಾಗೆ ಸ್ವತಃ ಜಗ್ಗೇಶ್ ಅವರೇ ನಿರ್ಮಾಪಕರಾಗಿದ್ದರು.. ಲಾಭವಿರಲಿ ಹಾಕಿದ್ದ ಬಂಡವಾಳವೂ ಬರಲಿಲ್ಲ.. ಸಿನಿಮಾ ವಿಭಿನ್ನವಾಗಿತ್ತು ಎಂದು ಹೆಸರು ತಂದುಕೊಟ್ಟಿತಾದರೂ ಹಣ ಸಂಪಾದನೆಯಾಗಲಿಲ್ಲ.. ಸಿನಿಮಾಗೆ ಒಟ್ಟು ಒಂದೂ ವರೆ ಕೋಟಿ ಬಂಡವಾಳ ಹಾಕಿದ್ದರು.. ಅದರಲ್ಲಿ 70 ಲಕ್ಷ ಹಣ ಕಲೆಕ್ಷನ್ ಆಯಿತು.. ಆದರೆ ಸಿನಿಮಾಗಾಗಿ 75 ಲಕ್ಷ ಸಾಲ ಮಾಡಿಕೊಂಡಿದ್ದು ಹಾಗೆ ಉಳಿದಿತ್ತು..

ಕೊನೆಗೆ ಆ ಸಾಲವನ್ನು ತೀರಿಸಲು ಬೇರೆ ದಾರಿ‌ ಕಾಣದೆ ಕೊನೆಗೆ ತಮ್ಮ ಮನೆಯನ್ನೇ ಮಾರಿದರು.. ಆ ಮನೆ ಇದೀಗ 35 ಕೋಟಿ ಬೆಲೆ ಬಾಳುತ್ತಿದೆ.. ಅಷ್ಟೇ ಅಲ್ಲ ಆ ಮನೆಯನ್ನು ಜಗ್ಗೇಶ್ ಅವರ ಸ್ನೇಹಿತರೇ ಕೊಂಡುಕೊಂಡಿದ್ದರು.. ಇದೀಗ ಆ ಮನೆಯನ್ನು ಬಾಡಿಗೆಗೆ ಬಿಟ್ಟಿದ್ದು 16 ಲಕ್ಷ ಬಾಡಿಗೆ ದುಡಿಯುತ್ತಿದೆಯಂತೆ..

ಈ ಬಗ್ಗೆ ಸ್ವತಃ ಜಗ್ಗೇಶ್ ಅವರೇ ತಮ್ಮ ಹಳೆಯ ನೆನಪನ್ನು ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಮೇಕಪ್ ಸಿನಿಮಾದ ಪೋಸ್ಟರ್ ಜೊತೆಗೆ “ವಿಭಿನ್ನ ಚಿತ್ರ ಕನ್ನಡಿಗರಿಗೆ ನೀಡಬೇಕು. ಹಾಗೂ ಹೊರ ರಾಜ್ಯದವರಿಗೆ ನನ್ನ ಪ್ರತಿಭೆ ನಿರೂಪಿಸಬೇಕು ಎಂದು ನನ್ನ ಸ್ವಂತ ಬಂಡವಾಳ ಹಾಕಿ ಬಹಳ ನಂಬಿಕೆಯಿಂದ ಮಾಡಿದ ಚಿತ್ರ.. ಆದರೆ ದೌರ್ಭಾಗ್ಯ.. 2002 ರಲ್ಲೇ 75 ಲಕ್ಷ ಕಳೆದುಕೊಂಡೆ.. ಸಾಲ ತೀರಿಸಲು ಅಂದು ಮಾರಿದ ಮನೆ.. ಇಂದು 35 ಕೋಟಿ ಆಸ್ತಿ.. ಅದ ಕೊಂಡ ನನ್ನ ಮಿತ್ರನಿಗೆ ಇಂದು 16 ಲಕ್ಷ ಬಾಡಿಗೆ ಬರುತ್ತಿದೆ.. ಕಥೆವ್ಯಥೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಜೊತೆಗೆ ಅದು ನನ್ನ ಬ್ಯಾಡ್ ಲಕ್ ಅಲ್ಲ.. ಅದು ನನಗೆ ದೇವರು ಕಲಿಸಿದ ಪಾಠ.. ಅದೇ ವರ್ಷ ನನಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಕೂಡ ಸಿಕ್ಕಿತು.. ನಾನು ಕಳೆದದ್ದನ್ನೆಲ್ಲಾ ಅದೇ ವರ್ಷ ಸಂಪಾದಿಸಿದೆ.. ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ.. ಹಾಗೂ ಕಾಸಿದ್ದವನೇ ಬಾಸು ಸಿನಿಮಾ ಎಲ್ಲವನ್ನು ಮರಳಿ‌ ತಂದುಕೊಟ್ಟಿತು.. ಪ್ರತಿಯೊಂದು ಅನುಭವವೂ ಜೀವನದ ಪಾಠ ಕಲಿಸುತ್ತದೆ.. ಆಗದು ಎಂದು ಕೈಕಟ್ಟಿ ಕೂರುವ ಜಯಮಾನ ನನ್ನದಲ್ಲ.. ಎಂದಿದ್ದಾರೆ..