ಲಾಯರ್ ಜಗದೀಶ್ ಫೇಸ್‌ಬುಕ್‌ ಖಾತೆ ಡಿಲೀಟ್ ಮಾಡಿದ್ದು ಯಾರು ಗೊತ್ತಾ..

ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಲ್ಲಿರುವ ವ್ಯಕ್ತಿ ಲಾಯರ್ ಜಗದೀಶ್. ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಾಗುತ್ತಿದ್ದ ಲಾಯರ್ ಜಗದೀಶ್ ಅವರು ಇತ್ತೀಚೆಗೆ ಐಪಿಎಸ್ ಆಫೀಸರ್ ವಿಚಾರದಲ್ಲಿ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿದ್ದರು. ಐಪಿಎಸ್ ಆಫೀಸರ್ ಬಗ್ಗೆ ಇವರು ಮಾಡಿದ್ದ ಆರೋಪಗಳು ಸೋಷಿಯಲ್ ಮೀಡಿಯಾದಲ್ಲಿ ಬಹುದೊಡ್ಡದಾಗಿ ಚರ್ಚೆಯಾಗಿತ್ತು. ಆ ಪೊಲೀಸ್ ಅಧಿಕಾರಿಗೆ ಫೇಸ್ ಬುಕ್ ಲೈವ್ ಬಂದು, ಅವರ ಬಗ್ಗೆ ಆರೋಪಗಳನ್ನು ಮಾಡುತ್ತಾ, ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಇತ್ತೀಚೆಗೆ ಇವರ ಬಗ್ಗೆ ಕೆಲವರು ಪೊಲೀಸರಲ್ಲಿ ದೂರು ನೀಡಿದ ಕಾರಣ, ಲಾಯರ್ ಜಗದೀಶ್ ಅವರು ಈಗ ಪೊಲೀಸರ ವಶದಲ್ಲಿದ್ದಾರೆ. ಅವರಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ಕೋರ್ಟ್ ನೀಡಿತ್ತು. ಇದೀಗ ಇದ್ದಕ್ಕಿದ್ದ ಹಾಗೆ ಲಾಯರ್ ಜಗದೀಶ್ ಅವರ ಫೇಸ್ ಬುಕ್ ಖಾತೆ ಡಿಲೀಟ್ ಆಗಿದೆ. ಫೇಸ್ ಬುಕ್ ನಲ್ಲಿ ಸದಾ ಆಕ್ಟಿವ್ ಆಗಿರುತ್ತಿದ್ದ ಲಾಯರ್ ಜಗದೀಶ್ ಅವರ ಫೇಸ್ ಬುಕ್ ಖಾತೆ ದಿಢೀರ್ ಎಂದು ಡಿಲೀಟ್ ಆಗಿರುವುದಕ್ಕೆ ಕಾರಣ ಏನು, ಡಿಲೀಟ್ ಮಾಡಿದ್ದು ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ..

ಲಾಯರ್ ಜಗದೀಶ್ ಅವರು ತಮ್ಮ ವೃತ್ತಿಯಲ್ಲಿ ಸಾಧನೆಗಳನ್ನು ಮಾಡಿದ್ದಾರೆ. ಅನ್ಯಾಯ ಮಾಡುವ ಹಲವರಿಗೆ ಕಠಿಣ ಶಿಕ್ಷೆ ಸಿಗುವ ಹಾಗೆ ಮಾಡಿದ್ದಾರೆ. ಒಳ್ಳೆಯವರಿಗೆ ನ್ಯಾಯ ಸಿಗುವ ಹಾಗೆ ಮಾಡಿದ್ದಾರೆ. ಆದರೆ ವಿವಾದಗಳು ತಮ್ಮ ಮೇಲೆ ಬರುವ ಹಾಗೆ ಮಾಡಿಕೊಳ್ಳುತ್ತಾರೆ. ಅಧಿಕಾರಿಗಳ ಬಗ್ಗೆ, ರಾಜಕಾರಣಿಗಳ ಬಗ್ಗೆ, ಏನಾದರೂ ಒಂದು ವಿಚಾ ತೆಗೆದು, ಅವರುಗಳ ಬಗ್ಗೆ ಮಾತನಾಡಿ, ಅವರು ಅರೆಸ್ಟ್ ಆಗುವ ಹಾಗೆ ಮಾಡುತ್ತೇನೆ. ಅವರು ಅಕ್ರಮವಾಗಿ ಆಸ್ತಿ ಮಾಡಿದ್ದಾರೆ, ಅವರ ಬಳಿ ಇರುವುದೆಲ್ಲ ಅಕ್ರಮವಾಗಿ ಸಂಪಾದನೆ ಮಾಡಿರುವ ಹಣ, ಹೀಗೆ ಮೊದಲಿನಿಂದ ಇಗಿನವರೆಗೂ ಸಾಕಷ್ಟು ಅಧಿಕಾರಿಗಳ ವಿಚಾರದಲ್ಲಿ ಇದೇ ರೀತಿ ಮಾಡಿದ್ದಾರೆ. ಆದರೆ ಇತ್ತೀಚೆಗೆ ಇವರು ಮಾಡಿದ ಆರೋಪ ದೊಡ್ಡದಾಗಿ ಸುದ್ದಿಯಾಯಿತು.

ಸೋಷಿಯಲ್ ಮೀಡಿಯಾದಲ್ಲಿ ಮತ್ತು ಮಾಧ್ಯಮಗಳಲ್ಲಿ ಲಾಯರ್ ಜಗದೀಶ್ ಅವರ ಪರ ವಿರೋಧದ ಚರ್ಚೆಗಳು ತೀವ್ರವಾಗಿಯೇ ನಡೆದವು. ಆ ಅಧಿಕಾರಿ ಕೂಡ ಲಾಯರ್ ಜಗದೀಶ್ ಅವರ ಜೊತೆ ಕಾನೂನಿನ ಮೂಲಕ ಫೈಟ್ ಮಾಡುವುದಾಗಿ ತಿಳಿಸಿದ್ದರು. ಆ ಅಧಿಕಾರಿಗಳ ಮನೆಯವರು ತಮ್ಮ ಆಸ್ತಿಯ ಬಗ್ಗೆ ಅಧಿಕೃತವಾದ ಹೇಳಿಕೆ ಬಿಡುಗಡೆ ಮಾಡಿದ್ದರು ಸಹ ಲಾಯರ್ ಜಗದೀಶ್ ಅವರು ಸುಮ್ಮನಾಗಲಿಲ್ಲ. ಫೇಸ್ ಬುಕ್ ನಲ್ಲಿ ಲೈವ್ ಬಂದು, ಅವರ ಬಗ್ಗೆ ಮತ್ತೆ ಮಾತನಾಡಲು ಶುರು ಮಾಡಿದರು. ಆದರೆ ಇತ್ತೀಚೆಗೆ ಅವರ ಮೇಲೆ ಹಲ್ಲೆ ಕೂಡ ನಡೆಯಿತು.

ಬೆಂಗಳೂರಿನ ಕೋರ್ಟ್ ಆವರಣದಲ್ಲಿ ಲಾಯರ್ ಜಗದೀಶ್ ಮತ್ತು ಅವರ ಮಗನ ಹಲ್ಲೆ ನಡೆಯಿತು, ಅದಾದ ಬೆನ್ನಲ್ಲೇ ಅವರನ್ನು ಅರೆಸ್ಟ್ ಮಾಡಲಾಯಿತು. ಸಧ್ಯಕ್ಕೆ ಪೋಲಿಸರ ವಶದಲ್ಲಿ ಇದ್ದಾರೆ ಲಾಯರ್ ಜಗದೀಶ್. ಜಗದೀಶ್ ಅವರ ಮೇಲೆ ಲಾಯರ್ ಕೌನ್ಸಿಲ್ ಅವರೇ ದೂರು ನೀಡಿ, ಅರೆಸ್ಟ್ ಆಗುವ ಹಾಗೆ ಮಾಡಿದ್ದಾರೆ. ಜೊತೆಗೆ, ಲಾಯರ್ ಜಗದೀಶ್ ಅವರ ಬಗ್ಗೆ ಕರ್ನಾಟಕ ವಕೀಲರ ಸಂಘ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದು, ಇನ್ನುಮುಂದೆ ಅವರು ವಕೀಲ ವೃತ್ತಿ ಮಾಡುವ ಹಾಗಿಲ್ಲ ಎಂದಿದ್ದಾರೆ. ವಕೀಲರ ಮೇಲೆ, ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಮೇಲೆ ಆರೋಪ ಮಾಡಿದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಈ ಘಟನೆಗಳೆಲ್ಲವು ನಡೆದ ನಂತರ ಇದ್ದಕ್ಕಿದ್ದ ಹಾಗೆ ಲಾಯರ್ ಜಗದೀಶ್ ಅವರ ಫೇಸ್ ಬುಕ್ ಖಾತೆ ಡಿಲೀಟ್ ಆಗಿದ್ದು, ಇದು ಹಲವರಲ್ಲಿ ಅನುಮಾನ ಮೂಡುವ ಹಾಗೆ ಮಾಡಿದೆ. ಫೇಸ್ ಬುಕ್ ಖಾತೆ ಡಿಲೀಟ್ ಆಗಬೇಕು ಎಂದು ಕೋರ್ಟ್ ಆದೇಶ ನೀಡಿದೆ ಎಂದು ಕೆಲವರ ಹೇಳುತ್ತಿದ್ದಾರೆ. ಸೈಬರ್ ಕ್ರೈಮ್ ಮೂಲಕ ಡಿಲೀಟ್ ಮಾಡಿಸಲಾಗಿದೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಪೊಲೀಸರ ವಶದಲ್ಲಿರುವ ಕಾರಣ ಪೊಲೀಸರೇ ಹೇಳಿ ಫೇಸ್ ಬುಕ್ ಖಾತೆ ಡಿಲೀಟ್ ಮಾಡಿಸಿದ್ದಾರೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಆದರೆ ಇದರಲ್ಲಿ ಸತ್ಯ ಯಾವುದು ಸುಳ್ಳು ಯಾವುದು ತಿಳಿದುಬಂದಿಲ್ಲ. ಲಾಯರ್ ಜಗದೀಶ್ ಅವರು ಹೊರಬಂದ ಮೇಲೆಯೇ ಈ ಪ್ರಶ್ನೆಗೆ ಉತ್ತರ ಸಿಗಬೇಕಿದೆ.