ಮೊದಲ ಬಾರಿಗೆ ಮಕ್ಕಳ ಮುಖ ತೋರಿದ ನಟಿ ಅಮೂಲ್ಯ ಕೇಳಿಕೊಂಡಿದ್ದೇನು ಗೊತ್ತಾ..

ಸ್ಯಾಂಡಲ್ವುಡ್ ನ ಖ್ಯಾತ ನಟಿ ಅಮೂಲ್ಯ ಅವರು ಮದುವೆಯ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಕುಟುಂಬ ಮನೆ ಸಂಸಾರ ಅಂತ ಬ್ಯುಸಿ ಆದರು.. ಅತ್ತ ರಾಜಕಾರಣದಲ್ಲಿಯೂ ಸಕ್ರೀಯರಾದ ಅಮೂಲ್ಯ ಅವರು ಗಂಡ ಜಗದೀಶ್ ಹಾಗೂ ಮಾವ ರಾಮಚಂದ್ರ ಅವರ ರಾಜಕೀಯ ಕೆಲಸಗಳಿಗೆ ಕೈ ಜೋಡಿಸಿದರು.. ಇನ್ನು ಮದುವೆಯಾದ ಕೆಲ ವರ್ಷಗಳ ಬಳಿಕ ಮಕ್ಕಳ ಯೋಚನೆ ಮಾಡಿದ ಜೋಡಿ ಕಳೆದ ವರ್ಷ ತಮ್ಮ ಕುಟುಂಬಕ್ಕೆ ಮಗುವಿನ ಆಗಮನವಾಗುತ್ತಿರುವ ಸಂತೋಷವನ್ನು ಹಂಚಿಕೊಂಡಿದ್ದರು.. ಇನ್ನು ಅಂದುಕೊಂಡಂತೆ ಅಮೂಲ್ಯ ಅವರು ಜನವರಿಯಲ್ಲಿ ಮುದ್ದು ಕಂದಮ್ಮಗಳಿಗೆ ಜನ್ಮ ನೀಡಿದ್ದು ಒಟ್ಟಿಗೆ ಎರಡು ಕಂದಮ್ಮಗಳ ಆಗಮನ ಜಗದೀಶ್ ಹಾಗೂ ಅಮೂಲ್ಯ ಅವರ ಕುಟುಂಬದ ಸಂತೋಷವನ್ನು ಡಬಲ್‌ ಮಾಡಿತು..

ಇನ್ನು ಇದೀಗ ಇಂದು ಕೃಷ್ಣ ಜನ್ಮಾಷ್ಟಮಿ ಯಂದು ತಮ್ಮ ಮುದ್ದು ಕಂದಮ್ಮಗಳ ಫೋಟೋಗಳನ್ನು ಹಂಚಿಕೊಂಡು ಜನರಿಂದ ತಮ್ಮ ಕಂದಮ್ಮಗಳಿಗೆ ಆಶೀರ್ವಾದ ಮಾಡಿ ಎಂದು ಕೇಳಿಕೊಂಡಿದ್ದಾರೆ.. ಹೌದು ಅಮೂಲ್ಯ ಸಿನಿಮಾ ರಂಗದಿಂದ ದೂರವಿದ್ದರೂ, ಅಭಿಮಾನಿಗಳು ಮಾತ್ರ ಅವರನ್ನು ಮರೆತಿಲ್ಲ. ಹಾಗಾಗಿ ಅಮೂಲ್ಯ ತಮ್ಮ ಅಭಿಮಾನಿಗಳ ಜೊತೆ ನಿರಂತರವಾಗಿ ಸೋಷಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿ ಇರುತ್ತಾರೆ..

ದಿಢೀರ್ ಅಂತ ಸಿನಿಮಾ ರಂಗದಿಂದ ದೂರ ಉಳಿದು, ಅವರು ಮದುವೆ ಆಗುತ್ತಾರೆ ಅಂದಾಗ ಅದೆಷ್ಟೊ ಅಭಿಮಾನಿಗಳು ನೊಂದುಕೊಂಡಿದ್ದೂ ಇದೆ. ಹಾಗಾಗಿ ಅಭಿಮಾನಿಗಳ ಮೇಲೆ ಇವರಿಗೂ ವಿಶೇಷ ಪ್ರೀತಿ.. ಮದುವೆ ನಂತರ ನಿರಂತರವಾಗಿ ಅಭಿಮಾನಿಗಳಿಗೆ ಒಂದಿಲ್ಲೊಂದು ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ತಿಳಿಸುತ್ತಲೇ ಇರುವ ಅಮೂಲ್ಯ, ಈ ಬಾರಿ ತಮ್ಮ ಎರಡು ಮಕ್ಕಳ ಫೋಟೋವನ್ನು ಅಭಿಮಾನಿಗಳಿಗಾಗಿ ಅಪ್ ಲೋಡ್ ಮಾಡಿದ್ದಾರೆ. ಮೊದಲ ಬಾರಿಗೆ ಅವಳಿ ಮಕ್ಕಳ ಮುಖವನ್ನು ಅವರು ರಿವೀಲ್ ಮಾಡಿದ್ದಾರೆ.

ಮಗು ಜನಿಸಿದಾಗ ಮತ್ತು ಇತ್ತೀಚೆಗಷ್ಟೇ ತಮ್ಮ ಪುಟ್ಟ ಮಕ್ಕಳ ಬೆರಳು, ಕಾಲುಗಳನ್ನಷ್ಟೇ ತೋರಿಸಿದ್ದ ಅಮೂಲ್ಯ ದಂಪತಿ, ಈ ಬಾರಿ ಮುಖವನ್ನೂ ತೋರಿಸಿದ್ದಾರೆ. ನಮ್ಮ ಕಂದಮ್ಮಗಳಿಗೆ ನಿಮ್ಮ ಹಾರೈಕೆಗಳು ಇರಲಿ ಎಂದು ಕೇಳಿಕೊಂಡಿದ್ದಾರೆ.. ತಮ್ಮ ನೆಚ್ಚಿನ ನಟಿಯ ಮಕ್ಕಳನ್ನು ನೋಡಬೇಕು ಎನ್ನುವುದು ಅಮೂಲ್ಯ ಅಭಿಮಾನಿಗಳ ಆಸೆ ಆಗಿತ್ತು. ಅದನ್ನು ಈಗ ಅವರು ಈಡೇರಿಸಿದ್ದಾರೆ.. ನಮ್ಮ ಮಕ್ಕಳಿಗೆ ನಿಮ್ಮ ಆಶೀರ್ವಾದವಿರಲಿ ಎಂದು ಮನವಿ ಮಾಡಿಕೊಂಡಿದ್ದಾರೆ..

ಇನ್ನು ಪುಟ್ಟ ಕಂದಮ್ಮಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿ ಅಭಿಮಾನಿಗಳು ಸ್ನೇಹಿತರು ಸಂತೋಷ ಪಟ್ಟಿದ್ದು ಮಕ್ಕಳಿಗೆ ಶುಭ ಹಾರೈಸಿದ್ದಾರೆ.. ಇನ್ನು ಕಳೆದ ವರ್ಷ ಅಮೂಲ್ಯ ಗರ್ಭಿಣಿಯಾದ ಸಮಯದಲ್ಲಿ ಇಡೀ ನಾಡಿಗೆ ಸಂತೋಷದ ಸುದ್ದಿ ಎಂದು ಸುದ್ದಿಯಾಗಿದ್ದು ಟ್ರೋಲ್ ಸಹ ಆಗುತ್ತು.. ಸಧ್ಯ ಇದೀಗ ಅಮೂಲ್ಯ ಅವರು ಮಕ್ಕಳ ಫೋಟೋಗಳನ್ನು ಹಂಚಿಕೊಂಡಿದ್ದು ಮತ್ತೊಮ್ಮೆ ಆ ರೀತಿ ಸುದ್ದಿಯಾಗಿ ಟ್ರೋಲ್ ಆಗದಿರಲಿ ಎಂದು ಕೆಲವರು ಕಮೆಂಟ್ ಸಹ ಮಾಡಿದ್ದುಂಟು.

ಒಟ್ಟಿನಲ್ಲಿ ಚಿತ್ರರಂಗದಲ್ಲಿ ಬಾಲಕಲಾವಿದೆಯಾಗಿ ಕಾಲಿಟ್ಟು ಸ್ಟಾರ್ ನಟರುಗಳ ಜೊತೆ ಅಭಿನಯಿಸಿ ಸೈ ಎನಿಸಿಕೊಂಡು ಇದೀಗ ಕುಟುಂಬದ ಜೀವನದಲ್ಲಿ ಬ್ಯುಸಿ ಆಗಿದ್ದು ಅಮೂಲ್ಯ ಅವರು ಮತ್ತೆ ಚಿತ್ರರಂಗಕ್ಕೆ ಬರುವುದು ಬಹುತೇಕ ಸಂದೇಹವೇ ಆಗಿದ್ದು ಮುಂಬರುವ ದಿನಗಳಲ್ಲಿ ಜಗದೀಶ್ ಅವರ ರಾಜಕೀಯ ಕೆಲಸಗಳಿಗೆ ಸಹಾಯ ಮಾಡುವ ಮೂಲಕ ಕೈ ಜೋಡಿಸಬಹುದಾಗಿದೆ..