ಅತಿ ಹೆಚ್ಚು ಸಂಭಾವನೆ ಪಡೆದು 112 ದಿನಗಳ ಆಟ ಮುಗಿಸಿದ ಕುರಿ ಪ್ರತಾಪ್.. ಪಡೆದ ಸಂಭಾವನೆ ಎಷ್ಟು ಗೊತ್ತಾ?

ಬಿಗ್ ಬಾಸ್ ಈ ಸೀಸನ್ ನಲ್ಲಿ ಎಲ್ಲರೂ ಸೆಲಿಬ್ರೆಟಿಗಳೇ ಆದ್ದರಿಂದ ಅವರುಗಳ ಸಂಭಾವನೆಯೂ ಕೂಡ ಹೆಚ್ಚಾಗಿಯೇ ಇದೆ.. ಅದರಂತೆ ಈ ಸೀಸನ್ ನಲ್ಲಿ ಅತಿ ಹೆಚ್ಚು ಸಂಭಾವನೆ ಅಂತ ಇದ್ದದ್ದು ಅದು ಮೊದಲ ಎರಡು ವಾರದಲ್ಲಿ ಮನೆಯಿಂದ ಅತಿಥಿಯಾಗಿ ಹೊರ ನಡೆದ ರವಿ ಬೆಳೆಗೆರೆ ಅವರದ್ದು.. ಹೌದು ರವಿ ಬೆಳೆಗೆರೆ ಅವರ ಆರೋಗ್ಯ ಸರಿಯಿಲ್ಲದ ಕಾರಣ ಅವರು ಹೆಚ್ಚು ದಿನ ಮನೆಯಲ್ಲಿ ಇರಲಾರರು ಎಂದು ಮೊದಲೆ ತಿಳಿದಿತ್ತು..

ಅದೇ ಕಾರಣಕ್ಕೆ ಅವರಿಗೆ ಕಡಿಮೆ ವಾರಕ್ಕೆ ಹೆಚ್ಚು ಸಂಭಾವನೆಯನ್ನು ಮಾತನಾಡಲಾಗಿತ್ತು.. ಹೌದು ರವಿ ಬೆಳೆಗೆರೆ ಅವರಿಗೆ ವಾರಕ್ಕೆ 1 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ಮಾತನಾಡಲಾಗಿತ್ತು.. ಆದರೆ ಮನೆಯಿಂದ ಹೊರಬಂದ ನಂತರ ಈ ಮನೆ ನನಗೆ ಸಾಕಷ್ಟು ಪ್ರೀತಿ ನೀಡಿದೆ ನನಗಷ್ಟೇ ಸಾಕು ಸಂಭಾವನೆ ಬೇಡ ಎಂದಿದ್ದರಂತೆ ರವಿ ಬೆಳೆಗೆರೆ ಅವರು.. ಆದರೂ ಕೂಡ ನಿಯಮಗಳ ಪ್ರಕಾರ ಅವರಿಗೆ ಸಂಭಾವನೆ ತಲುಪಿಸಲಾಗಿತ್ತು ಎನ್ನಲಾಗಿದೆ..

ಇನ್ನು ಈಗಾಗಲೇ ಎಲಿಮಿನೇಟ್ ಆಗಿರುವ ಮಿಕ್ಕೆಲ್ಲಾ ಸದಸ್ಯರ ಸಂಭಾವನೆ ಒಂದು ಅವರೇಜ್ ರೇಂಜ್ ನಲ್ಲಿದ್ದು ಯಾರ ಸಂಭಾವನೆಯೂ 50 ರ ಗಡಿ ದಾಟಿಲ್ಲ‌.. ಆದರೆ ಸದ್ಯ 111 ದಿನಗಳ ಬಿಗ್ ಬಾಸ್ ಜರ್ನಿ ಮುಗಿಸಿರುವ ಕುರಿ ಪ್ರತಾಪ್ ಅವರ ಸಂಭಾವನೆ ಇಡೀ ಮನೆಯಲ್ಲಿ ಅತಿ ಹೆಚ್ಚಿನ ಸಂಭಾವನೆ ಎನ್ನಲಾಗಿದೆ..

ಹೌದು ಕುರಿ ಪ್ರತಾಪ್ ಅವರಿಗೆ ವಾರಕ್ಕೆ 80 ಸಾವಿರ ರೂಪಾಯಿಗಳಂತೆ ಸಂಭಾವನೆಯನ್ನು ಮಾತನಾಡಲಾಗಿದ್ದು ಈಗಾಗಲೇ ಸಂಪೂರ್ಣ 16 ವಾರಗಳ ಜರ್ನಿ ಮುಗಿಸಿರುವ ಕುರಿ ಪ್ರತಾಪ್ ಅವರ ಕೈಗೆ ಒಟ್ಟು 12 ಲಕ್ಷದ 80 ಸಾವಿರ ರೂಪಾಯಿಗಳು ಸಂಭಾವನೆಯಾಗಿ ಕುರಿ ಪ್ರತಾಪ್ ಅವರಿಗೆ ತಲುಪಲಿದೆ ಎನ್ನಲಾಗಿದೆ..

ಕುರಿ ಪ್ರತಾಪ್ ಅವರು ಈ ಮುನ್ನ ಮಜಾ ಟಾಕೀಸ್ ಮೂಲಕ ಹೆಸರುವಾಸಿಯಾಗಿದ್ದಷ್ಟೇ ಅಲ್ಲದೆ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಬಿಗ್ ಮನೆಗೆ ಬರುವ ಮುನ್ನ ಮೂರು ಸಿನಿಮಾಗಳು ಕೈಯಲ್ಲಿದ್ದವು.. ಆದರೂ ನಿರ್ಮಾಪಕರ ಬಳಿ‌ ಮಾತನಾಡಿಕೊಂಡು ಸಿನಿಮಾಗಳ ಶೂಟಿಂಗ್ ಅನ್ನು ಮುಂದೂಡಿಕೊಂಡು ಬಿಗ್ ಮನೆಗೆ ಕುರಿ ಅವರು ಬಂದ ಕಾರಣದಿಂದ ಅವರ ಸಂಭಾವನೆ ಕೊಂಚ ಹೆಚ್ಚಾಗಿಯೇ ಇದೆ..