ಕೇವಲ ಹದಿಮೂರು ವರ್ಷದ ಹೆಣ್ಣು ಮಕ್ಕಳು.. ಆ ಜಾಗಕ್ಕೆ ಹೋದವರು ಒಂದೇ ದಿನ ಏನಾಗಿ ಹೋದರು ನೋಡಿ..

ಕೆಲವೊಮ್ಮೆ ಸಣ್ಣ ಪುಟ್ಟ ವಿಚಾರಗಳಿಂದಾಗಿ ಏನೇನೆಲ್ಲಾ ಆಗಿ ಬಿಡುತ್ತದೆ ಎಂದು ಯಾರೂ ಸಹ ಊಹಿಸಲು ಸಾಧ್ಯವಾಗದು.. ಪ್ರತಿದಿನದಂತೆ ಜೀವನ ಸಾಗುತ್ತಿರುತ್ತದೆ.. ಆದರೆ ಕೆಲವೊಮ್ಮೆ ಜೀವನದಲ್ಲಿ ಸಂತೋಷ ಹೆಚ್ಚಿಸಿಕೊಳ್ಳಲು ಮಾಡುವ ಕೆಲಸಗಳು ಜೀವನವನ್ನೇ ಮುಗಿಸಿ ಬಿಡುತ್ತದೆ.. ಹೌದು ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು ಈ ಎರಡು ಹೆಣ್ಣು ಮಕ್ಕಳು ಆ ಒಂದು ಸಣ್ಣ ಘಟನೆಯಿಂದ ಒಂದೇ ದಿನ ಇಲ್ಲವಾಗಿ ಹೋಗಿದ್ದಾರೆ.. ನಿಜಕ್ಕೂ ಸಣ್ಣ ಪುಟ್ಟ ವಿಚಾರಗಳು ಎಂದು ಕಡೆಗಣಿಸಿದರೆ ಈ ರೀತಿಯ ಘಟನೆಗಳು ನಡೆದು ಹೋಗುತ್ತದೆ..

ಹೌದು ರಾಯಚೂರಿನಲ್ಲಿ ಇಂತಹದೊಂದು ಮನಕಲಕುವ ಘಟನೆ ನಡೆದಿದ್ದು ಒಂದೇ ದಿನ ಹದಿಮೂರು ವರ್ಷದ ಹಾಗೂ ಹದಿನಾಲ್ಕಿ ವರ್ಷದ ಈ ಇಬ್ಬರು ಹೆಣ್ಣು ಮಕ್ಕಳು ಜೀವ ಕಳೆದುಕೊಂಡಿದ್ದಾರೆ.. ಈ ಹೆಣ್ಣುಮಕ್ಕಳಲ್ಲಿ ಒಬ್ಬರ ಹೆಸರ್ ಇಂದೂ ವಯಸ್ಸು ಹದಿನಾಲ್ಕು.. ಮತ್ತೊಬ್ಬ ಹೆಣ್ಣು ಮಗಳು ಸುಜಾತ ವಯಸ್ಸು ಹದಿಮೂರು ಇಬ್ಬರೂ ಸಹ ರಾಯಚೂರು ತಾಲೂಕಿನ ಮಿರ್ಜಾಪುರ ಗ್ರಾಮದ ನಿವಾಸಿಗಳು.. ನಿನ್ನೆ ನಡೆದ ಘಟನೆಯಿಂದಾಗಿ ಇದೀಗ ಈ ಇಬ್ಬರು ಹೆಣ್ಣು ಮಕ್ಕಳ ಮನೆಯಲ್ಲಿ ಸೂತಕ ಆವರಿಸಿದೆ..

ಹೌದು ಈ ಬಿರು ಬೇಸಿಗೆಯಲ್ಲಿ ತಣ್ಣಗೆ ಏನಾದರೂ ಕುಡಿಯಬೇಕು ಅಥವಾ ಸದಾ ಕಾಲ ಎಸಿಯಲ್ಲಿ ಕೂರಬೇಕು ಅಥವಾ ಮತ್ತಿನ್ನೇನೋ ಜೀವ ತಣ್ಣಗೆ ವಿಶ್ರಾಂತಿ ಬಯಸುತ್ತದೆ.. ಇನ್ನು ಹಳ್ಳಿಗಳ ಕಡೆ ಬೇಸಿಗೆ ಬಂತೆಂದರೆ ಈಜಲು ತೆರಳಿ ದೇಹವನ್ನು ತಣ್ಣಗಾಗಿಸಿಕೊಳ್ಳುತ್ತಾರೆ.. ಗಂಡು ಮಕ್ಕಳು‌ ಮಾತ್ರವಲ್ಲ ಹೆಣ್ಣು ಮಕ್ಕಳು ಸಹ ಕಾಲಿವೆಗಳಲ್ಲಿ ಹಳ್ಳಗಳಲ್ಲಿ ನೀರಿದ್ದರೆ ಸ್ನಾನ ಮಾಡಲಿ ತೆರಳುತ್ತಾರೆ.. ನಿನ್ನೆ ನಡೆದ ಘಟನೆಯೂ ಅದೇ.. ಹೌದು ಇಂದೂ ಸುಜಾತ ಹಾಗೂ ಇನ್ನೂ ಇಬ್ಬರು ಬಾಲಕಿಯರು ತಮ್ಮ ಗ್ರಾಮದ ಬಳಿಯ ರಾಜಲಾಬಂಡಾ ಕಾಲುವೆಗೆ ಈಜಲು ತೆರಳಿದ್ದಾರೆ.. ಕಾಲುವೆಯಲ್ಲಿ ನೀರು ಕಡಿಮೆ ಇದೆ ಎಂದು ನಾಲ್ಕೂ ಹೆಣ್ಣು ಮಕ್ಕಳು ಕಾಲುವೆ ಬಳಿ ಹೋದರು.. ಆದರೆ ಅಲ್ಲಿ ನಡೆದದ್ದು ಮಾತ್ರ ಬೇರೆ.. ಹೌದು ನೀರಿಗೆ ಇಳಿದ ನಾಲ್ಕು ಬಾಲಕಿಯರಲ್ಲಿ ಹೊರ ಬಂದಿದ್ದು ಮಾತ್ರ ಇಬ್ಬರೇ..

ಹೌದು ಕಾಲುವೆಯಲ್ಲಿ ನೀರು ಕಡಿಮೆ ಇದೆ ಎಂದು ನಾಲ್ವರು ಚಿಕ್ಕ ಹುಡುಗಿಯರು ಕಾಲುವೆಗೆ ಇಳಿದರು.. ಆದರೆ ಅಲ್ಲಿ ನೀರಿನ ಸೆಳೆತ ಹೆಚ್ಚಾಗಿ ಹೋಗಿದೆ.. ಈಜು ಬಾರದ ಕಾರಣ ಇಂದೂ ಹಾಗೂ ಸುಜಾತ ಇಬ್ಬರು ಬಾಲಕಿಯರು ಅಲ್ಲಿಯೇ ಜೀವ ಕಳೆದುಕೊಂಡಿದ್ದಾರೆ.. ಇನ್ನಿಬ್ಬರು ಬಾಲಕಿಯರು ಹೇಗೋ ಈಜಿ ದಡ ಸೇರಿದ್ದಾರೆ..

ವಿಚಾರ ತಿಳಿದು ಸ್ಥಳಕ್ಕೆ ಬಂದ ಗ್ರಾಮಸ್ಥರು ಇಂದೂ ಹಾಗೂ ಸುಜಾತರ ಪಾರ್ಥೀವವನ್ನು ಹೊರ ತೆಗೆದಿದ್ದಾರೆ.. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. ಅತ್ತ ಸುಜಾತ ಹಾಗೂ ಇಂದೂವನ್ನು ಕಳೆದುಕೊಂಡ ಅವರ‌ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು..

ನಿಜಕ್ಕೂ ಬೇಸಿಗೆಯಲ್ಲಿ ಈಜಲು ಹೋಗುವ ಅಸೆ ಎಲ್ಲರಿಗೂ ಆಗುತ್ತದೆ ನಿಜ.. ಆದರೆ ದಯವಿಟ್ಟು ಇಂತಹ ಅಪಾಯಗಳನ್ನು ತಂದುಕೊಳ್ಳಬೇಡಿ.. ಈಜು ತಿಳಿಯದೇ ಅಥವಾ ಚಿಕ್ಕ ಮಕ್ಕಳನ್ನು ದಯವಿಟ್ಟು ಯಾರುಯ್ ನೀರಿಗೆ ಇಳಿಸಬೇಡಿ.. ಒಂದು ಕ್ಷಣದ ಆಸೆಗಾಗಿ ಜೀವನವೇ ಮುಕ್ತಾಯವಾಗಿ ಬಿಡುತ್ತದೆ ಎಚ್ಚರವಾಗಿರಿ..