ನಿಜ ಜೀವನದಲ್ಲಿಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಕಿರುತೆರೆಯ ಮತ್ತೊಂದು ಜೋಡಿ..

ಸ್ಯಾಂಡಲ್ವುಡ್ ಹಾಗೂ ಕನ್ನಡ ಕಿರುತೆರೆಯಲ್ಲಿ ಕಳೆದ ಒಂದು ವರ್ಷದಿಂದ ಸಾಲು ಸಾಲು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಸರಳವಾಗಿ ಸಪ್ತಪದಿ ತುಳುದು ನೂತನ ಜೀವನ ಪ್ರಾರಂಭಿಸುತ್ತಿದ್ದಾರೆ.. ಕೊರೊನಾ ಕಾರಣದಿಂದಾಗಿ ಕಳೆದ ಒಂದು ವರ್ಷದಿಂದ ಎಲ್ಲಾ ಮದುವೆಗಳು ಸಹ ಸರಳವಾಗಿ ನೆರವೇರುತ್ತಿದ್ದು ಆಪ್ತರ ಸಮ್ಮುಖದಲ್ಲಿ ಸಮಾರಂಭಗಳು ನೆರವೇರುತ್ತಿದೆ..

ಇದೀಗ ಕನ್ನಡ ಕಿರುತೆರೆಯ ಮತ್ತೊಂದು ಖ್ಯಾತ ಜೋಡಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸ್ನೇಹಿತರು ಸಂಬಂಧಿಕರು ಶುಭಾಶಯ ತಿಳಿಸಿದ್ದಾರೆ.. ಹೌದು ಕಳೆದ ವರ್ಷದಿಂದ ನಿಖಿಲ್ ರೇವತಿ ಜೋಡಿ ಚಂದನ್ ನಿವೇದಿತಾ ಜೋಡಿ ಅರುಣ್ ಮಯೂರಿ, ಅಜಯ್ ರಾವ್, ಶಿಲ್ಪಾ ರವಿ ದರ್ಶಕ್, ಕೃಷ್ಣ ಮಿಲನಾ ನಾಗರಾಜ್ ಜೋಡಿ, ರಮೇಶ್ ಅರವಿಂದ್ ಅವರ ಮಗಳು, ಚಂದನ್ ಕವಿತಾ ಜೋಡಿ ಹೀಗೆ ಸಾಕಷ್ಟು ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಕೊರೊನಾ ಸಮಯದಲ್ಲಿ ಸಿನಿಮಾ ಕೆಲಸ ಕಡಿಮೆಯಾಗಿ ಸಿಕ್ಕ ಸಮಯವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡ ಕಲಾವಿದರು ತಮ್ಮ ಮದುವೆ ಸಮಾರಂಭಗಳನ್ನು ನೆರವೇರಿಸಿಕೊಂಡರು..

ಇನ್ನು ಇದೀಗ ನಟ ಅಜಿತ್ ಜಯರಾಜ್ ಹಾಗೂ ಗಾಯಕಿ ಮತ್ತು ನೃತ್ಯಗಾರ್ತಿಯೂ ಆಗಿರುವ ಇಂಪನಾ ಜಯರಾಜ್ ಅವರು ನಿನ್ನೆಯಷ್ಟೇ ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.. ಹೌದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ಮೂಲಕ ಇಬ್ಬರ ಪರಿಚಯವಾಗಿ ನಂತರ ಅದು ಪ್ರೀತಿಯಾಗಿ ಇಬ್ಬರ ಪ್ರೀತಿಗೆ ಎರಡೂ ಕುಟುಂಬಗಳು ಸಮ್ಮತ್ತಿಸಿ ಇದೀಗ ಮದುವೆ ಸಮಾರಂಭವನ್ನು ನೆರವೇರಿಸಿದ್ದಾರೆ..

ಹೌದು ಸೆಪ್ಟೆಂಬರ್ ಒಂದರಂದು ನೂತನ ಜೀವನ ಆರಂಭಿಸಿದ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಸಂತೋಷ ಹಂಚಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ನಿನ್ನನ್ನು ಪಡೆಯಲು ನಾನು ಪುಣ್ಯ ಮಾಡಿರುವೆ ಎಂದು ಇಂಪನಾ ಪೋಸ್ಟ್ ಮಾಡಿದ್ದು ರಾಜೇಶ್ ಕೃಷ್ಣನ್ ಸೇರಿದಂತೆ ಅನೇಕರು ಶುಭ ಕೋರಿದ್ದಾರೆ.. ಇನ್ನು ಇತ್ತ ತಮ್ಮಿಬ್ಬರ ಪ್ರೀತಿಯ ಬಗ್ಗೆ ಮಾತನಾಡಿರುವ ಇಂಪನಾ ಹಾಗೂ ಅಜಿತ್ ಇಬ್ಬತ ಸರ್ನೇಮ್ ಒಂದೇ ಆಗಿದ್ದರಿಂದ ಮಾತನಾಡಿದೆವು.. ನಂತರ ಸ್ನೇಹವಾಯಿತು.. ಇಂಪನಾ ಬಹಳ ಕಾಳಜಿ ಹಾಗೂ ಜವಾಬ್ದಾರಿ ಇರುವ ಹುಡುಗಿ ಎನಿಸಿತು..ಅವಳ ಕುಟುಂಬವೂ ನನಗೆ ಬಹಳ ಇಷ್ಟವಾಯಿತು ಎಂದು ಮಡದಿ ಬಗ್ಗೆ ಮೆಚ್ಚುಗೆಯ‌ ಮಾತನಾಡಿದ್ದಾರೆ..

ಸಧ್ಯ ಸಾಲು ಸಾಲು ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸುತ್ತಿರುವ ಅಜಿತ್ ಜಯರಾಜ್ ರೈಂಸ್ ಕ್ರಾಂತಿವೀರ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದು ಈ ನಡುವೆ ವ್ಯಯಕ್ತಿಕ ಜೀವನದ ಕಡೆಯೂ ಗಮನಕೊಟ್ಟು ತಾವು ಪ್ರೀತಿಸಿದ ಇಂಪನಾರನ್ನು ಕೈ ಹಿಡಿದಿದ್ದಾರೆ.. ಇನ್ನು ಮದುವೆಯಾದ ಬಳಿಕ ಅಜಿತ್ ಅವರ ತಂದೆ ಜಯರಾಜ್ ಅವರನ್ನು ಇಂಪನಾ ನೆನೆದು ಅವರ ಫೋಟೋ ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನಾವೆಲ್ಲಾ ನಿಮ್ಮ ಕತೆಗಳನ್ನು ಕೇಳುತ್ತಾ ಬೆಳೆದಿದ್ದೆವು.. ಆದರೆ ಒಬ್ಬ ತಂದೆಯಾಗಿ ಮಗ ನಿಮ್ಮನ್ನು ಮಿಸ್ ಮಾಡಿಕೊಳ್ಳುವುದು ಹೇಳಲಾಗದ ನೋವನ್ನು ತರುತ್ತದೆ.. ನಾನೀಗ ನಿಮ್ಮ ಸೊಸೆ ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.. ಇನ್ನು ಸ್ನೇಹಿತರು ಹಾಗೂ ಗಾಯಕರು ಆಪ್ತರು ಸಂಬಂಧಿಕರು ಇಬ್ಬರಿಗೂ ನೂತನ ಜೀವನಕ್ಕೆ ಶುಭ ಕೋರಿದ್ದಾರೆ..