ಕೊರೊನಾಗೆ ಕುಮಾರಸ್ವಾಮಿ ಅವರಿಂದ ಕೊನೆಯ ಪರಿಹಾರ..

ಕೊರೊನಾ ದೇಶಕ್ಕೆ ಕಾಲಿಟ್ಟ ದಿನಗಳಲ್ಲಿ ತೆಗೆದುಕೊಂಡ ಲಾಕ್ ಡೌನ್ ನಿರ್ಣಯ ನಿಜಕ್ಕೂ ಕೊರೊನಾವನ್ನು ಹೋಗಲಾಡಿಸದಿದ್ದರೂ ಹೆಚ್ಚಾಗಿ ಹರಡದಂತೆ ನೋಡಿಕೊಳ್ಳಲು ಉಪಯುಕ್ತವಾಗಿತ್ತು.. ಆದರೆ ಆನಂತರ ಬಡವರು ಮದ್ಯಮ ವರ್ಗದವರ ಜೀವನ ಅಸ್ತವ್ಯಸ್ತವಾಗುತ್ತಿದ್ದಂತೆ ಲಾಕ್ ಡೌನ್ ಅನ್ನು ಹಂತ ಹಂತವಾಗಿ ಸಡಿಲಗೊಳಿಸಲಾಯಿತು..

ಆದರೆ ಹಂತ ಹಂತವಾಗಿ ಕೊರೊನಾ ಸೋಂಕು ಕೂಡ ಹೆಚ್ಚಾಗುತ್ತಲೇ ಹೋಯಿತು. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10 ಸಾವಿರ ಗಡಿಯಲ್ಲಿ ಬಂದು ನಿಂತಿದ್ದು, ಸಮುದಾಯದಲ್ಲಿ ಹರಡಿ ಜನರು ತಲೆ ಮೇಲೆ ಕೈ ಇಟ್ಟುಕೊಳ್ಳುವಂತಾಗಿದೆ..

ಇದೀಗ ಸಾವಿರಗಟ್ಟಲೇ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ನೀಡುವಲ್ಲಿ ಸರ್ಕಾರ ವಿಫಲವಾಗಿರುವುದು ಕಣ್ಣಿಗೆ ಕಾಣುತ್ತಿರುವ ಸತ್ಯ.. ಸ್ವತಃ ಆಸ್ಪತ್ರೆಯಲ್ಲಿರುವ ಕೊರೊನಾ ರೋಗಿಗಳೇ ತಮ್ಮ ವಾರ್ಡ್ ಕ್ಲೀನ್ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಿರುವುದು ನಿಜಕ್ಕೂ ಅಮಾನವೀಯ.. ಖುದ್ದು ರೋಗಿಗಳೇ ವೀಡಿಯೋ ಮಾಡಿ ವಿಷಯ ತಿಳಿಸುತ್ತಿದ್ದಾರೆ..

ಅತ್ತ ಕೊರೊನಾ ನಿಯಂತ್ರಣ ಮಾಡುವಲ್ಲಿ.. ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ.. ಇದರ ನಡುವೆ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪರೀಕ್ಷೆ ಆರಂಭವಾಗುತ್ತಿದ್ದು, ಅಪ್ಪಿ ತಪ್ಪಿ ಅನಾಹುತ ಸಂಭವಿಸಿದರೆ ನಿಜಕ್ಕೂ ಸರ್ಕಾರ ದೊಡ್ಡ ಮಟ್ಟದ ಆಕ್ರೋಶವನ್ನು ಎದುರಿಸಬೇಕಾಗುತ್ತದೆ..

ಈ ನಡುವೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬೇಡ ಎಂದಿದ್ದ ಕುಮಾರಸ್ವಾಮಿ ಅವರು ಮೊನ್ನೆಯಷ್ಟೇ ಬೆಂಗಳೂರನ್ನ ಮತ್ತೆ 20 ದಿನಗಳ‌ ಕಾಲ ಲಾಕ್ ಡೌನ್ ಮಾಡುವಂತೆ ತಿಳಿಸಿದ್ದರು.. ಸರ್ಕಾರವನ್ನು‌ ಒತ್ತಾಯಿಸಿಯೂ ಇದ್ದರು..

ಇದೀಗ ಮತ್ತೊಮ್ಮೆ ಕೊನೆಯದಾಗಿ ಕೊರೊನಾ ನಿಯಂತ್ರಣಕ್ಕೆ ಕೊನೆಯ ಪರಿಹಾರ ಸೂಚಿಸಿದ್ದಾರೆ.. ಹೌದು ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಗಳಿಲ್ಲ.. ವೆಂಟಿಲೇಟರ್ ಗಳಿಲ್ಲ.. ಖಾಸಗಿ ಆಸ್ಪತ್ರೆಯಲ್ಲಿ‌ ದಿನಕ್ಕೆ 15 ಸಾವಿರ ಎಂದರೆ ಬಡ ಕುಟುಂಬ ಇರಲಿ‌ ಮಧ್ಯಮ ವರ್ಗದ ಕುಟುಂಬಕ್ಕೂ ಲಕ್ಷಾಂತರ ರೂಪಾಯಿ ಆಸ್ಪತ್ರೆ ಬಿಲ್ ಪಾವತಿಸಲು ಸಾಧ್ಯವಾಗುವುದಿಲ್ಲ.. ಒಂದು ಮನೆಯಲ್ಲಿ ಇಬ್ಬರಿಗೆ ಕೊರೊನಾ ಬಂದರೂ 5 ರಿಂದ 6 ಲಕ್ಷ ಎಲ್ಲಿಂದ ತರ್ತಾರೆ ಎಂದಿದ್ದಾರೆ.. ಇದಕ್ಕೆಲ್ಲಾ ಒಂದೇ ಪರಿಹಾರ ಅದು ಸ್ವಯಂ ಪ್ರೇರಿತ ಲಾಕ್ ಡೌನ್.. ಜನರು ಈ ಎಲ್ಲಾ ಗಂಭೀರ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ದಯವಿಟ್ಟು ಸ್ವಯಂ ಪ್ರೇರಿತರಾಗಿ ಲಾಕ್ ಡೌನ್ ಮಾಡಿಕೊಳ್ಳಿ.. ಇದೊಂದೆ ಬಾಕಿ‌ ಇರುವ ಪರಿಹಾರ ಎಂದಿದ್ದಾರೆ..